Advertisement

ಕಾರ್ಮಿಕರು ಸಂಘಟಿತರಾಗಬೇಕಿದೆ: ಶಾಸಕ ಡಾ.ಜಿ.ಪರಮೇಶ್ವರ್

08:02 PM Apr 22, 2022 | Team Udayavani |

ಕೊರಟಗೆರೆ: ಅಸಂಘಟಿತ ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾದಲ್ಲಿ ಸಂಘಟಿತರಾಗಬೇಕಿದೆ ಎಂದು ಶಾಸಕ ಡಾ. ಜಿ. ಪರಮೇಶ್ವರ್ ತಿಳಿಸಿದರು.

Advertisement

ಗುರುಭವನದಲ್ಲಿ ಕಲ್ಪತರು ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರು ಹಾಗೂ ಅಸಂಘಟಿತ ಕರ‍್ಮಿಕರ ನೂತನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕಾರ್ಮಿಕರು ಸಂಘಟಿತರಾಗದೇ ಹೋದರೆ ಅವರಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರರಾಗಬೇಕಾಗುತ್ತದೆ. ನಮ್ಮ ದೇಶದಲ್ಲಿ ಸುಮಾರು ಶೇ. ೯೦ ಕ್ಕೂ ಹೆಚ್ಚು ಜನ ಇನ್ನೂ ಅಸಂಘಟಿತರಾಗಿಯೇ ಉಳಿದಿದ್ದಾರೆ. ಅದರಲ್ಲಿ ವಿಶೇಷವಾಗಿ ಕೃಷಿ ಕಾರ್ಮಿಕರು ಶೇ. ೪೫ ರಷ್ಟು ಜನ ಇದ್ದಾರೆ. ಸೇವಾಕೆಂದ್ರದಲ್ಲಿ ಶೇ. ೩೦ ರಷ್ಟಿದ್ದಾರೆ. ಕೈಗಾರಿಕೆಯಲ್ಲಿ ಶೇ. ೨೫ ರಷ್ಟಿದ್ದಾರೆ. ಅವರು ಇಂದಿಗೂ ಶೋಷಿತರಾಗಿಯೇ ಉಳಿದಿದ್ದಾರೆ. ಅವರ ಸಂಕಷ್ಟವನ್ನ ಹೇಳೋರು, ಕೋಳೋರೇ ಯಾರೂ ಇಲ್ಲ. ಹಾಗಿದ್ದಾಗ ಅವರ ಜೀವನ ಶೈಲಿ ಇಂದಿಗೂ ಸುಸಜ್ಜಿತವಾಗಿಲ್ಲ ಎಂದರು.

ಬಾಬ ಸಾಹೇಬ್ ಅಂಬೇಡ್ಕರ್ ಅವರು ಮೊದಲಬಾರಿಗೆ ಕಾರ್ಮಿಕ ಸಚಿವರಾದ ಮೇಲೆ ಕಾರ್ಮಿಕರನ್ನು ಶೋಷಣೆಗೆ ಒಳಗಾಗುತ್ತಾರೆ ಎಂಬ ಮುಂದಾಲೋಚನೆಯಲ್ಲಿ ಅನೇಕ ಕಾನೂನು ರೂಪಿಸಿದರು. ಮನಮೋಹನ್ ಸಿಂಗ್ ಪ್ರಧಾನ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಕೇಂದ್ರ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಕಾರ್ಮಿಕರಿಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದರು. ಅದರಿಂದಾಗಿ ಅನೇಕ ಬದಲಾವಣೆಗಳಾಯಿತು ಎಂದರು.

ಕೊರಟಗೆರೆಯಲ್ಲಿ ಸುಮಾರು ೬೯೨೩ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಇವರಿಗೆ ನಿರ್ದಿಷ್ಟವಾದ ಕೆಲಸ ಇಲ್ಲ. ಇಂತವರಿಗೆ ಕೆಲಸ ನೀಡುವ ಕಾರಣದಿಂದಲೇ ನರೇಗ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿದೆ. ಕಟ್ಟಡ ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿವೆ ಆ ಕಾರಣದಿಂದ ಎಲ್ಲರೂ ನೋಂದಣಿ ಮಾಡಿಕೊಳ್ಳುವುದು ಅತ್ಯಗತ್ಯ ಎಂದರು.

ಕಾರ್ಮಿಕ ಜಿಲ್ಲಾ ಅಧಿಕಾರಿ ಎಚ್.ಎನ್.ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕಾರ್ಮಿಕರಿಗೆ ವಿವಿಧ ಬಗೆಯ ಕಿಟ್ ಹಾಗೂ ಆರೋಗ್ಯ ಕಿಟ್ ವಿತರಿಸಲಾಯಿತು.

Advertisement

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಆರ್.ಓಬಳರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಸಂಘದ ಗೌರವಾಧ್ಯಕ್ಷ ಅಧ್ಯಕ್ಷ ರಾಮಕೃಷ್ಣಯ್ಯ, ಅಧ್ಯಕ್ಷ ಡಿ.ಕಾಂತರಾಜು, ಉಪಾಧ್ಯಕ್ಷ ಕೆ.ವಿ.ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಹನುಮಂತರಾಯಪ್ಪ, ಸದಸ್ಯರಾದ ಗಂಗಾಧರ್, ನಾಗರತ್ನಮ್ಮ, ಕೆ.ಶ್ರೀನಾಥ್ ಚಿನ್ನಿ, ರಾಜಣ್ಣ, ದೇವರಾಜು, ಗುಂಡಾನಾಯ್ಕ, ಚಿಕ್ಕೀರಪ್ಪ, ನಾಗರಾಜು, ಎಚ್.ಆನಂದ್, ಗಂಗಹನುಮಯ್ಯ, ಬಾನು ಜಾನ್ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next