Advertisement

‘ಅಸಂಘಟಿತ ವಲಯದ ಕಾರ್ಮಿಕರಿಗೂ ಸೌಲಭ್ಯ ಸಿಗುವಂತಾಗಿದೆ’

05:07 PM Oct 11, 2017 | |

ಕುಂಬ್ರ: ಕಾರ್ಮಿಕರ ಹಿತರಕ್ಷಣೆ ಮತ್ತು ಮಾಲಕನ ಬದುಕಿನ ಚಿಂತನೆಯನ್ನು ಭಾರತೀಯ ಮಜ್ದೂರ್‌ ಸಂಘ ಹೊಂದಿದೆ
ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

Advertisement

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್‌ ಸಂಘದ ಕುಂಬ್ರ ಶಾಖೆ, ಕಾರ್ಮಿಕ ಇಲಾಖೆ,
ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಭಾರತೀಯ ಮಜ್ದೂರ್‌ ಸಂಘ ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ
ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮವನ್ನು ಕುಂಬ್ರ ರೈತ ಸಭಾಭವನದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ, ಅವರು ಮಾತನಾಡಿದರು.

ಪುತ್ತೂರಿನ ಕನ್ಸಲ್ಟಿಂಗ್‌ ಎಂಜಿನಿಯರ್‌ ಕೆ. ವಸಂತ ಭಟ್‌ ಮಾತನಾಡಿ, ಕಟ್ಟಡ ಕಾರ್ಮಿಕರು ಸ್ವಾವಲಂಬಿಯಾಗಿ ಕೆಲಸ
ಮಾಡಲು, ಜೀವನ ನಡೆಸಲು ಸರಕಾರ ಅನುಕೂಲ ಕಲ್ಪಿಸಬೇಕು. ಮರಳು ನೀತಿ ಸಡಿಲಿಕೆ ಮಾಡಬೇಕು ಎಂದು
ಆಗ್ರಹಿಸಿದರು. ಬಿಎಂಎಸ್‌ ರಾಜ್ಯಾಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ, ಕಾರ್ಮಿಕರ ನೋಂದಣಿ ಪರಿಪೂರ್ಣವಾಗಿ ಆಗುತ್ತಿಲ್ಲ. ಮುಗ್ಧ ಕಾರ್ಮಿಕರಿಗೆ ಸೂಕ್ತ ಮಾರ್ಗದರ್ಶನ ಅಗತ್ಯವಾಗಿ ತಿಳಿಸಬೇಕಾಗಿದೆ ಎಂದು ಅವರು ಹೇಳಿದರು.

ಪುತ್ತೂರು ಹಿರಿಯ ಕಾರ್ಮಿಕ ನಿರೀಕ್ಷಕ ಎಚ್‌. ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ. ಉಪವಿಭಾಗದ ಮಂಗಳೂರು ಕಾರ್ಮಿಕ ಅಧಿಕಾರಿ ಕೃಷ್ಣಮೂರ್ತಿ, ಪುತ್ತೂರು ತಾ.ಪಂ. ಸದಸ್ಯ ಹರೀಶ್‌ ಬಿಜತ್ರೆ, ಒಳಮೂಗ್ರು ಗ್ರಾ.ಪಂ. ಅಧ್ಯಕ್ಷ ಯತಿರಾಜ್‌ ರೈ ನಿರ್ಪಾಡಿ, ಕುಂಬ್ರ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪುತ್ತೂರು ಎಪಿಎಂಸಿ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು ಕುಂಬ್ರ, ಮೂರ್ತೆದಾರ ಸೇ.ಸ. ಸಂಘದ ಅಧ್ಯಕ್ಷ ನಿತೀಶ್‌ ಕುಮಾರ್‌ ಶಾಂತಿವನ, ಪುರಂದರ ರೈ ಮುಡಾಲ, ದಯಾನಂದ ಈಶ್ವರಮಂಗಲ, ದಿವಾಕರ ಪಾಣಾಜೆ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ದಿವಾಕರ ಆಚಾರ್ಯ ವರದಿ ಮಂಡಿಸಿದರು. ಒಳಮೂಗ್ರು ಗ್ರಾ.ಪಂ. ಸದಸ್ಯ ಮಹೇಶ್‌
ರೈ ಸ್ವಾಗತಿಸಿದರು. ಸಂಘದ ಸಂಚಾಲಕ ರಾಜೇಶ್‌ ರೈ ಪರ್ಪುಂಜ ವಂದಿಸಿದರು. ದೇವಿಪ್ರಸಾದ್‌ ರೈ ನಿರೂಪಿಸಿದರು.

Advertisement

ಬದುಕು ಅರಳುವಂತೆ ಮಾಡಿದೆ
ಕಾರ್ಮಿಕರಿಗೆ ನಿವೃತ್ತಿ ವೇತನ ದೊರೆಯುತ್ತದೆ. ಆದರೆ, ಕಟ್ಟಡ ಕಾರ್ಮಿಕರಿಗಿಲ್ಲ. ಇದನ್ನು ಮನಗಂಡ ಕೇಂದ್ರ ಸರಕಾರ, ಅಟಲ್‌ ಪಿಂಚಣಿ ಯೋಜನೆ ಜಾರಿಗೊಳಿಸಿದೆ. ಅಸಂಘಟಿತ ವಲಯದ ಕಾರ್ಮಿಕರಿಗೂ ಸೌಲಭ್ಯ ಸಿಗುವಂತಾಗಿದೆ. ಹೋರಾಟದ ಮೂಲಕ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕೊಡಿಸುವಲ್ಲಿ ಮಜೂರ್‌ ಸಂಘ ಯಶಸ್ವಿಯಾಗಿದೆ. ಮ್ಯೂನಿಸ್ಟ್‌ ಸಂಘಟನೆಗಳ ಹೋರಾಟದಿಂದ ಮಾಲಕರು ಕಾರ್ಖಾನೆಗಳನ್ನು ಮುಚ್ಚಿ, ಕಾರ್ಮಿಕರು ಬೀದಿಗೆ ಬರುವಂತಾಗಿದೆ. ದ.ಕ. ಜಿಲ್ಲೆಯಲ್ಲೇ ಅದೆಷ್ಟೋ ಕಾರ್ಖಾನೆಗಳು ಬಂದ್‌ ಆಗಿವೆ. ಆದರೆ, ಭಾರತೀಯ
ಮಜ್ದೂರ್‌ ಸಂಘ ಕಾರ್ಮಿಕರ ಹಿತರಕ್ಷಣೆ ಜತೆಗೆ, ಸಂಸ್ಥೆಯ ಚಿಂತನೆಯನ್ನೂ ಮಾಡಿ, ಬದುಕು ಅರಳುವಂತೆ ಮಾಡಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next