Advertisement

UNO: ವಿಶ್ವಸಂಸ್ಥೆಯ ಪ್ರಯತ್ನಕ್ಕೆ ಅಮೆರಿಕ ಅಡ್ಡಗಾಲು-  ಗಾಜಾ ಕದನ ವಿರಾಮಕ್ಕೆ ತಡೆ

12:08 AM Dec 10, 2023 | Team Udayavani |

ವಿಶ್ವಸಂಸ್ಥೆ/ಹೊಸದಿಲ್ಲಿ: ಗಾಜಾ ಪಟ್ಟಿಯಲ್ಲಿ ಕದನ ವಿರಾಮವನ್ನು ಮತ್ತೆ ಜಾರಿಗೆ ತರುವ ವಿಶ್ವಸಂಸ್ಥೆಯ ಪ್ರಯತ್ನಕ್ಕೆ ಅಮೆರಿಕ ತಡೆಯೊಡ್ಡಿದ ಘಟನೆ ಶುಕ್ರವಾರ ನಡೆದಿದೆ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರಸ್‌ ಅತ್ಯಂತ ಅಪರೂಪದ ಸಂದರ್ಭದಲ್ಲಿ ಬಳಕೆ ಯಾಗುವ 99ನೇ ವಿಧಿ ಯನ್ನು ಬಳಸಿ, ಭದ್ರತಾ ಮಂಡಳಿಯ ಸಭೆ ಆಯೋಜಿಸಿದ್ದರು. ಈ ಮೂಲಕ ಗಾಜಾದಲ್ಲಿ ಕದನ ವಿರಾಮ ಜಾರಿಗೆ ತರುವ ಉದ್ದೇಶ ಹೊಂದಿದ್ದರು.

Advertisement

ಆದರೆ, ಅಮೆರಿಕ ಸರಕಾರವನ್ನು ಪ್ರತಿನಿಧಿಸಿದ್ದ ಉಪ ರಾಯಭಾರಿ ರಾಬರ್ಟ್‌ ವುಡ್‌ ಅವರು ಪ್ರಸ್ತಾಪಕ್ಕೆ ತಡೆಯೊಡ್ಡಿದ್ದಾರೆ. “ಕದನ ವಿರಾಮ ಪ್ರಸ್ತಾಪ ವಾಸ್ತವ ನೆಲೆಗಟ್ಟಿನಿಂದ ದೂರವಾಗಿದೆ. ಗಾಜಾ ಪಟ್ಟಿಯಲ್ಲಿನ ಪರಿಸ್ಥಿತಿ ಒಂದಿನಿತೂ ಬದಲಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಪ್ರಸ್ತಾಪಿಸಿದ ಕದನ ವಿರಾಮ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಲು ಸಾಧ್ಯವಿಲ್ಲ’ ಎಂದರು.

ಹಮಾಸ್‌ ಸಂಬಂಧಿ ಆದೇಶಕ್ಕೆ ನಾನು ಸಹಿ ಮಾಡಿಲ್ಲ: ಲೇಖೀ

ಪ್ಯಾಲೆಸ್ತೀನ್‌ನ ಹಮಾಸ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ಕಡತಕ್ಕೆ ನಾನು ಸಹಿ ಮಾಡಿಲ್ಲ ಎಂದು ವಿದೇಶಾಂಗ ಖಾತೆ ಸಹಾಯಕ ಸಚಿವೆ ಮೀನಾಕ್ಷಿ ಲೇಖೀ ಸ್ಪಷ್ಟನೆ ನೀಡಿದ್ದಾರೆ. ಹಮಾಸ್‌ ಕುರಿತು ಸಂಸತ್‌ನಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದ ಬಗ್ಗೆ ಲೋಕಸಭೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದಾಖಲೆಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬೆನ್ನಲ್ಲೇ ಲೇಖೀ ಅವರಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಹಮಾಸ್‌ಗೆ ಸಂಬಂಧಿಸಿದ ಯಾವುದೇ ಕಡತಕ್ಕೆ ನಾನು ಸಹಿ ಮಾಡಿಲ್ಲ. ನಿಮಗೆ ತಪ್ಪು ಮಾಹಿತಿ ನೀಡಲಾಗಿದೆ. ಜತೆಗೆ ಈ ಬಗ್ಗೆ ತನಿಖೆ ನಡೆಸಿ, ಕುಚೋದ್ಯವೆಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲೇಖೀ ಹೇಳಿದ್ದಾರೆ.c

Advertisement

Udayavani is now on Telegram. Click here to join our channel and stay updated with the latest news.

Next