Advertisement

UNO: ಕಾಶ್ಮೀರ ಶಾಂತಿ ದಕ್ಷಿಣ ಏಷ್ಯಾಕ್ಕೆ ಕ್ಷೇಮ: ಟರ್ಕಿ ಅಧ್ಯಕ್ಷ ಎರ್ಡೋಗನ್‌ ಉದ್ಧಟತನ

11:47 PM Sep 20, 2023 | Team Udayavani |

ವಾಷಿಂಗ್ಟನ್‌: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಟರ್ಕಿಯ ಅಧ್ಯಕ್ಷ ರೀಪ್‌ ತಯ್ಯಿಪ್‌ ಎರ್ಡೋಗನ್‌ ಮತ್ತೆ ಕಾಶ್ಮೀರ ವಿಚಾರ ಪ್ರಸ್ತಾವಿಸಿ ಉದ್ಧಟತನ ಮೆರೆದಿದ್ದಾರೆ.

Advertisement

78ನೇ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದ ವೇಳೆ ” ಭಾರತ ಮತ್ತು ಪಾಕಿಸ್ಥಾನದ ನಡುವೆ ಸಹಕಾರಯುತ ಮಾತು ಕತೆ ನಡೆದರೆ ಮಾತ್ರ ಕಾಶ್ಮೀರದಲ್ಲಿ ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಶಾಂತಿ, ಸ್ಥಿರತೆ, ಸಮೃದ್ಧಿಗೆ ಇದು ಅಗತ್ಯವಾದ ಬೆಳವಣಿಗೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಟರ್ಕಿ ಬೆಂಬಲಿಸುತ್ತದೆ’ ಎಂದು ಹೇಳಿದ್ದಾರೆ. 2020ರಲ್ಲಿ ಮತ್ತು ಕಳೆದ ವರ್ಷ ಟರ್ಕಿ ಅಧ್ಯಕ್ಷ ಕಾಶ್ಮೀರ ವಿಚಾರ ಪ್ರಸ್ತಾಪಿಸಿ ವಿವಾದ ಸೃಷ್ಟಿಸಿದ್ದರು.

ಜಿ20 ರಾಷ್ಟ್ರಗಳ ಸಮ್ಮೇಳನಕ್ಕಾಗಿ ಹೊಸ ದಿಲ್ಲಿಗೆ ಆಗಮಿಸಿದ್ದ ವೇಳೆ ಮಾತನಾಡಿದ್ದ ಅವರು, “ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರುವ ಐದು ರಾಷ್ಟ್ರಗಳ ವ್ಯಾಪ್ತಿಗಿಂತ ಪ್ರಪಂಚ ದೊಡ್ಡದಾಗಿದೆ. ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಲ್ಲಿ ಶಾಶ್ವತ ಸದಸ್ಯತ್ವ ಸಿಗುವಂತಾಗಬೇಕು’ ಎಂದು ಹೇಳಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next