ನವದೆಹಲಿ: ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕನಾಗಿ ಭಾರೀ ಸುದ್ದಿಯಲ್ಲಿದ್ದ ಉನ್ಮುಕ್ತ್ ಚಂದ್ ಭಾರತೀಯ ಕ್ರಿಕೆಟಿಗೆ ಶುಕ್ರವಾರ ವಿದಾಯ ಘೋಷಿಸಿದರು.
ವಿದೇಶಿ ಲೀಗ್‌ಗಳಲ್ಲಿ ಆಡುವುದು ಅವರ ಮುಂದಿನ ಗುರಿ. ಬಹುಶಃ ಚಂದ್ ಅಮೆರಿಕ ಪರ ಆಡುವ ಸಾಧ್ಯತೆ ಇದೆ.
28 ವರ್ಷದ ಉನ್ಮುಕ್ತ್ ಚಂದ್ 2012ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅಜೇಯ 111 ರನ್ ಬಾರಿಸಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆದರೆ ಸೀನಿಯರ್ ಮಟ್ಟದಲ್ಲಿ ಆಡಲು ಅವರಿಗೆ ಅವಕಾಶ ಲಭಿಸಲೇ ಇಲ್ಲ.
67 ಪ್ರಥಮ ದರ್ಜೆ ಪಂದ್ಯಗಳಿಂದ 3,379 ರನ್, 120 ಲಿಸ್ಟ್ ಎ ಪಂದ್ಯಗಳಿಂದ 4,505 ರನ್, ಟಿ20 ಕ್ರಿಕೆಟ್‌ನಲ್ಲಿ 1,565 ರನ್ ಬಾರಿಸಿದ ಸಾಧನೆ ಉನ್ಮುಕ್ತ್ ಚಂದ್ ಅವರದು.
ಇದನ್ನೂ ಓದಿ:ನಮ್ಗೆ ಗೊತ್ತಾಗುವಾಗ ಅವ ದೊಡ್ಡ Rider ಆಗಿದ್ದ !
ಉನ್ನತ ಮಟ್ಟದ ಆಟ:
ಕ್ರಿಕೆಟ್ ಎಂಬುದು ಯುನಿವರ್ಸಲ್ ಗೇಮ್. ಉನ್ನತ ಮಟ್ಟದ ಕ್ರಿಕೆಟ್ ಆಡುವುದೇ ಅಂತಿಮ ಗುರಿ. ನಾಯಕನಾಗಿ ಅಂಡರ್-19 ವಿಶ್ವಕಪ್ ಗೆದ್ದದ್ದು ನನ್ನ ಕ್ರಿಕೆಟ್ ಬದುಕಿನ ಅವಿಸ್ಮರಣೀಯ ಕ್ಷಣ. ಆದರೆ ಮತ್ತೆ ದೇಶಿ ತಂಡಗಳನ್ನು ಪ್ರತಿನಿಧಿಸಲಾರೆ ಎಂಬ ಸಂಕಟ ಕಾಡುತ್ತಿದೆ…’ ಎಂದು ಉನ್ಮುಕ್ತ್ ಚಂದ್ ಟ್ವೀಟ್ ಮಾಡಿದ್ದಾರೆ.