Advertisement
ಜನಪ್ರಿಯ ಬಹುಭಾಷಾ ಚಿತ್ರತಾರೆ ಶ್ರೀದೇವಿ ಅವರ ಅನಿರೀಕ್ಷಿತ ಸಾವಿಗೆ ದೇಶದ ಎಲ್ಲೆಡೆಯಿಂದ ವ್ಯಕ್ತವಾದ ಸಂತಾಪ ವಚನಗಳ ಭರಾಟೆಯ ನಡುವೆ ಒಂದು ವಿದ್ಯಮಾನ ನಮ್ಮ ಕಣ್ತಪ್ಪಿಹೋಗಿದೆ. ಅತ್ಯಂತ ಆದರ್ಶಪ್ರಾಯ ಐಎಎಸ್ ಅಧಿಕಾರಿಯಾಗಿದ್ದ ಕೇಂದ್ರದ ನಿವೃತ್ತ ಸಂಪುಟ ಕಾರ್ಯದರ್ಶಿ ಟಿ. ಎಸ್. ಆರ್. ಸುಬ್ರಮಣಿಯನ್ ಅವರ ನಿಧನವನ್ನು ಬಹುಶಃ ಯಾರೂ ಗಮನಿಸಿದಂತಿಲ್ಲ, ನಾಗರಿಕ ಸೇವೆಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತ ಅತ್ಯುನ್ನತ ಹುದ್ದೆಗೇರುವಷ್ಟು ಬೆಳೆದು ನಿಂತಿದ್ದ ಅಧಿಕಾರಿಯಾಗಿದ್ದವರು ಸುಬ್ರಮಣಿಯನ್.
Related Articles
Advertisement
ಅಧಿಕಾರಿಗಳ ಪೈಕಿ ಕೇವಲ ವಶೀಲಿಬಾಜಿಯಲ್ಲಿ ಸಿದ್ಧಹಸ್ತರಾದವರು ಹಾಗೂ ರಾಜಕಾರಣಿಗಳ ಕೃಪೆಗೆ ಪಾತ್ರರಾದವರು ಮಾತ್ರ ಉನ್ನತ ಸ್ಥಾನ ಕ್ಕೇರಿಯಾರೆಂಬ ಭಾವನೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿಗಳ ಕರ್ತವ್ಯ ನಿರ್ವ ಹಣೆಯಲ್ಲಿ ರಾಜಕೀಯ ಮಧ್ಯಪ್ರವೇಶ ಕುರಿತ ಸುಬ್ರಮಣಿಯನ್ ಅವರ ನಿಲುವು ಶ್ಲಾಘನೀಯವೇ ಹೌದು. ಉನ್ನತ ದರ್ಜೆಯ ಹುದ್ದೆಗಳನ್ನು ಪಡೆಯಬೇಕಿದ್ದರೆ ನಿಮಗೆ “ವೈಯಕ್ತಿಕ ಸಂಪರ್ಕ’ ಇದ್ದರಾಯಿತು. ಅರ್ಹತೆ ಬೇಕಿಲ್ಲ ಎಂಬುದು ಬಹುತೇಕ ಎಲ್ಲ ಚಿಂತನಶೀಲರ ಅಭಿಪ್ರಾಯ. ಗಮನಿಸಲೇಬೇಕಾದ ಅಂಶ ವೊಂದಿದೆ. ನಮ್ಮ ಹೆಚ್ಚಿನ ನಾಗರಿಕ/ಪೌರ ಸೇವಾ ಅಧಿಕಾರಿಗಳು ರಾಜಕಾರಣಿಗಳಿಗೆ ಜನರಿಂದ ಲಂಚ ವಸೂಲಿ ಮಾಡಿಕೊಡುವ ಮಾಧ್ಯಮಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಾತು ಹೇಳುವಾಗ ನನ್ನ ಮನಸ್ಸಿನಲ್ಲಿ ಸಬ್ ರಿಜಿಸ್ಟ್ರಾರ್‌ಗಳು, ಸರ್ಕಲ್ ಇನ್‌ಸ್ಪೆಕ್ಟರ್‌ಗಳು, ಅಬಕಾರಿ ನಿರೀಕ್ಷಣಾಧಿಕಾರಿ (ಎಕ್ಸೆ„ಸ್ ಇನ್‌ಸ್ಪೆಕ್ಟರ್)ಗಳು, ರಸ್ತೆ ಸಾರಿಗೆ ಅಧಿಕಾರಿಗಳು ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ಮುಂತಾದವರಿಲ್ಲ. ಈ ರೋಗ ವರಿಷ್ಠ ಅಧಿಕಾರಿಗಳ ವರ್ಗಕ್ಕೂ ಹಬ್ಬಿದೆ. ಇತ್ತೀಚೆಗೆ ನಡೆದ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಐಪಿಎಸ್ ವ್ಯಾಪ್ತಿಯಿಂದ ಹೊರತಾದ ಯಾವ ಅಧಿಕಾರಿಯೂ ಲಂಚ ಕೊಡದೆ ಒಳ್ಳೆಯ ಹುದ್ದೆ ಪಡೆಯುವ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲವಲ್ಲ ಎಂಬ ಪ್ರಶ್ನೆಗೆ, ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ವಕ್ತಾರರಿಬ್ಬರೂ ಉತ್ತರ ಹೇಳದೆ ನುಣುಚಿಕೊಂಡರು. ಪೊಲೀಸ್ ನೇಮಕಾತಿ ಮಂಡಳಿಯ ರಚನೆಯಾಗಿದ್ದರೂ ಅಭ್ಯರ್ಥಿಗಳು ಅನುಭವಿಸುತ್ತಿರುವ ದುಃಸ್ಥಿತಿ ಇದು. ರಾಜ್ಯದ ಕೆಲವು ಪೊಲೀಸ್ ಠಾಣೆಗಳನ್ನು ಗರಿಷ್ಠ ಹಣ ಸಂಗ್ರಹ ಮಾಡುವ ಠಾಣೆಗಳೆಂದು ಗುರುತಿಸಲಾಗಿರುವುದು; ಅಲ್ಲಿನ ಹುದ್ದೆ ನೇಮಕಾತಿಗಳನ್ನು ಗರಿಷ್ಠ ಬಿಡ್ ಮಾಡುವವರಿಗೆ “ಹರಾಜು’ ಹಾಕಲಾಗುತ್ತಿ ರುವುದು ಎಲ್ಲರಿಗೂ ಚೆನ್ನಾಗಿ ತಿಳಿದಿರುವ ಸಂಗತಿಯೇ ಆಗಿದೆ.
“ಸಿವಿಲ್ ಸರ್ವೆಂಟ್’ಗಳು ಸಾರ್ವಜನಿಕ ಸೇವಕರು (ಪಬ್ಲಿಕ್ ಸರ್ವೆಂಟ್ಸ್); ಅವರು ಅಧಿಕಾರಸ್ಥರ ಖಾಸಗಿ ಸೇವಕ (ಪ್ರೈವೇಟ್ ಸರ್ವೆಂಟ್ಸ್)ರಲ್ಲ’ ಎಂಬ ಸುಪ್ರಸಿದ್ಧ ಹೇಳಿಕೆ ನೀಡಿರುವುದಕ್ಕಾಗಿಯೂ ಸುಬ್ರಮಣಿಯನ್ ಜನರ ನೆನಪಿನಲ್ಲಿ ಉಳಿಯುತ್ತಾರೆ. ದೇಶದ ನಾಗರಿಕ ಸೇವೆ/ಪೌರ ಸೇವೆಯ ಸ್ಥಿತಿಗತಿ ಕುರಿತಂತೆ ಅವರು ಮೂರು ಪುಸ್ತಕಗಳನ್ನು ಬರೆದಿದ್ದಾರೆ; ಇವುಗಳ ಪೈಕಿ ಒಂದಂತೂ ಅತ್ಯಂತ ಪ್ರೇರಣಾತ್ಮಕ ಕೃತಿ. ಇದರ ಶೀರ್ಷಿಕೆಯೇ ಅತ್ಯಂತ ಆಕರ್ಷಕ “ಗವರ್ನ್ ಮಿಂಟ್ ಇನ್ ಇಂಡಿಯಾ: ಆ್ಯನ್ ಇನ್‌ಸೈಡರ್ ವ್ಯೂ’, ಅರ್ಥಾತ್ ಅಪ್ರಾಮಾಣಿಕ ಅಧಿಕಾರಿಗಳ ಪಾಲಿಗೆ ಸರಕಾರ ಒಂದು ಟಂಕಸಾಲೆ ಅಥವಾ ನಾಣ್ಯ ಛಾಪಿಸುವ ಕಾರ್ಖಾನೆಯಾಗಿದೆ. ಸೇವೆಯಲ್ಲಿದ್ದಾಗಲೂ, ನಿವೃತ್ತರಾಗಿದ್ದಾಗಲೂ ಸುದ್ದಿ ಮಾಧ್ಯಮದ ಮಂದಿಯೂ ಸೇರಿದಂತೆ ಸಾರ್ವಜನಿಕರ ಜೊತೆಗೆ ಸ್ನೇಹದಿಂದ ನಡೆದುಕೊಳ್ಳುವುದಕ್ಕೆ ಇಷ್ಟಪಡದ ಹಿರಿಯ ಅಧಿಕಾರಿಗಳು ನಮ್ಮಲ್ಲಿ ಆಗಿ ಹೋಗಿದ್ದಾರೆ. ಅದು ಅವರ ಪ್ರಾಮಾಣಿಕ ನಡೆಯ ದ್ಯೋತಕವೆನ್ನಬಹುದು. ಇದಕ್ಕೆ ವ್ಯತಿರಿಕ್ತವಾಗಿ ಭ್ರಷ್ಟರೆಂದು ಪರಿಗಣಿಸಲ್ಪಟ್ಟಿರುವ ಕೆಲ ಅಧಿಕಾರಿಗಳು ಎಲ್ಲರೊಂದಿಗೂ ಸ್ನೇಹದಿಂದಲೇ ವರ್ತಿಸುವುದುಂಟು. ಪ್ರಾಮಾ ಣಿಕರೆಂದು ಹೆಸರು ಪಡೆಯದ ಓರ್ವ (ಈಗ ನಿವೃತ್ತ) ಐಎಎಸ್ ಅಧಿಕಾರಿಯ ಕೊಠಡಿಗೆ ಮಂತ್ರಿ ಮಹೋದಯರುಗಳು ಪ್ರವೇಶಿ ಸುವುದನ್ನು ನೋಡಿದ್ದೇನೆ. ನಿಜವಾದ ಕ್ರಮವೆಂದರೆ, ಯಾವುದೇ ದರ್ಜೆಯ ಅಧಿಕಾರಿಗಳಿರಲಿ ಅವರೇ ಮಂತ್ರಿಗಳಿದ್ದಲ್ಲಿಗೆ ಹೋಗ ಬೇಕೇ ಹೊರತು ಮಂತ್ರಿಗಳೇ ಇವರಿದ್ದಲ್ಲಿಗೆ ಬರುವುದಲ್ಲ. ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ರಾಜ್ಯಗಳ ಏಕೀಕರಣದ ಬಳಿಕದ ಪ್ರಪ್ರಥಮ ಐಸಿಎಸ್ ಮುಖ್ಯ ಕಾರ್ಯದರ್ಶಿ ಪಿ.ವಿ.ಆರ್.ರಾವ್ ಅವರಿಗೆ ತಾಕೀತು ಮಾಡಿದ್ದನ್ನು ನೆನಪಿಸಿಕೊಳ್ಳಿ – ಮಂತ್ರಿಗಳಿದ್ದಲ್ಲಿಗೆ ನೀವೇ ಹೋಗಬೇಕು; ಅವರೇ ನಿಮ್ಮಲ್ಲಿ ಬರುತ್ತಾರೆಂದು ನಿರೀಕ್ಷಿಸಬೇಡಿ ಎಂದವರು ರಾವ್ ಅವರಿಗೆ ಕಟ್ಟುನಿಟ್ಟಾಗಿ ಹೇಳಿದ್ದರು. ಆಮೇಲೆ ಉತ್ತರಾಧಿಕಾರಿಗಳಾಗಿ ಬಂದ ಐಎಎಸ್ ಅಧಿಕಾರಿಗಳಿಗಿಂತಲೂ, ಆ ಕಾಲದಲ್ಲಿದ್ದ ಐಸಿಎಸ್ ಅಧಿಕಾರಿಗಳು ದುರಂಹಕಾರದ ನಡವಳಿಕೆಯಿಂದಲೇ ಕುಖ್ಯಾತರಾಗಿದ್ದರು.
ಟಿ.ಎಸ್.ಆರ್. ಸುಬ್ರಮಣಿಯನ್ ಪತ್ರಿಕಾ ಅಂಕಣಕಾರರೂ ಹೌದು. ಈ ಅಂಕಣದಲ್ಲಿ ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕ ವ್ಯವಹಾರ ವಿಷಯದ ಲೇಖನಗಳನ್ನು ಬರೆಯುತ್ತಿದ್ದರು. ಟಿ.ವಿ. ಗಳಲ್ಲಿನ ಚರ್ಚಾ ಕಾರ್ಯಕ್ರಮಗಳಲ್ಲಿ, ದೇಶದ ವಿವಿಧೆಡೆ ನಡೆಯುತ್ತಿದ್ದ ವಿಚಾರಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಜನರಿಗೆ ಹೇಳಬೇಕಾದ ಅನೇಕ ವಿಚಾರಗಳು ಅವರಲ್ಲಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು, ಸುಬ್ರಮಣಿಯನ್ ನಿಧನಕ್ಕೆ ಸಂತಾಪ ಸೂಚಿಸುತ್ತ ಅವರ ಈ ಗುಣವನ್ನು ಉಲ್ಲೇಖೀಸಿದ್ದಾರೆ. ಸುಬ್ರಮಣಿ ಯನ್ ತಮ್ಮ ಅಂಕಣ ಬರಹಗಳಲ್ಲಿ ಆಗಾಗ “ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾಗಿದ್ದರೂ ನಾವಿನ್ನೂ ಕಡುಬಡವರನ್ನು ತಲುಪಲು ಸಾಧ್ಯವಾಗಿಲ್ಲ; ಅವರಿಗೆ ಶಿಕ್ಷಣದ ಹಾಗೂ ಉದ್ಯೋಗದ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂಬ ಮಾತನ್ನು ಉಲ್ಲೇಖೀಸುತ್ತಿದ್ದರು.
1996ರಲ್ಲಿ, ಈ ಮಾದರಿ ಐಎಎಸ್ ಅಧಿಕಾರಿಗಳು ಬದಲಿಗೆ ಕಿರಿಯ ಅಧಿಕಾರಿಯೊಬ್ಬರನ್ನು ನೂತನ ಸಂಪುಟ ಕಾರ್ಯದರ್ಶಿ ಯನ್ನಾಗಿ ನೇಮಿಸುವ ಪ್ರಯತ್ನವೊಂದು ನಡೆದಿತ್ತು. ಆಗ ಪ್ರಧಾನಿ ಯಾಗಿದ್ದವರು ನಮ್ಮವರೇ ಆದ ಎಚ್.ಡಿ. ದೇವೇಗೌಡರು. ಸುಬ್ರಮಣಿಯನ್ ಅವರ ಸೇವಾ ಜ್ಯೇಷ್ಠತೆಯನ್ನು ಅವಗಣಿಸಿ ಅವರಿಗಿಂತ ಕಿರಿಯ ಅಧಿಕಾರಿಯಾಗಿದ್ದ ಜೇಮ್ಸ್ ಲಿಂಗೊxà ಅವರನ್ನು ನೇಮಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನ ಇದು. ತನ್ನ ಹಿರಿಯ ಅಧಿಕಾರಿಯ ಬದಲಿಗೆ ತನ್ನನ್ನು ನೇಮಿಸುವುದಕ್ಕೆ ಲಿಂಗೊxà ಅವರು ಒಪ್ಪಲಿಲ್ಲವಂತೆ. ಲಿಂಗೊxà ಅವರು ಮುಂದೆ ಮುಕ್ತ ಚುನಾವಣಾ ಆಯುಕ್ತರಾದರು. ಇನ್ನೊಬ್ಬ ಆದರ್ಶ ಅಧಿಕಾರಿಯೆಂಬ ಖ್ಯಾತಿಗೆ ಪಾತ್ರರಾದರು. ದೇವೇಗೌಡರಪ್ರಧಾನ ಮಂತ್ರಿತ್ವದ ಹೃಸ್ವ ಅವಧಿಯನ್ನು ತಮ್ಮ ಕೃತಿಯೊಂದರಲ್ಲಿ ಶ್ಲಾ ಸಲು ಸುಬ್ರಮಣಿಯನ್ ಅವರಿಗೆ ಮೇಲಿನ ಘಟನೆ ಒಂದು ಅಡ್ಡಿಯಾಗಲಿಲ್ಲ. ಗೌಡರು ತಮಗೆ ದಕ್ಕಿದ ಉನ್ನತ ಪದವಿಯನ್ನು ಯಾವುದೇ ಹಗರಣಕ್ಕೆ ಅವಕಾಶ ಮಾಡಿಕೊಡದ ರೀತಿಯಲ್ಲಿ ನಿರ್ವಹಿಸಿದರು ಎಂದು ಸುಬ್ರಮಣಿಯನ್ ತನ್ನೀ ಕೃತಿಯಲ್ಲಿ ಬರೆದಿದ್ದರು. ಎಂ. ಶಂಕರನಾರಾಯಣನ್
ಕಳೆದ ತಿಂಗಳು ನಿಧನ ಹೊಂದಿದ ಇನ್ನೋರ್ವ ಪ್ರಾಮಾಣಿಕ ಅಧಿಕಾರಿಯೆಂದರೆ, ಕರ್ನಾಟಕದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಂ. ಶಂಕರನಾರಾಯಣನ್. ಎಷ್ಟೋ ವಿಚಾರಗಳಲ್ಲಿ ಟಿ.ಎಸ್. ಆರ್. ಸುಬ್ರಹ್ಮಣಿಯನ್‌ರಿಗಿಂತ ಭಿನ್ನರಾಗಿದ್ದವರು ಶಂಕರ ನಾರಾಯ ಣನ್. ಅವರೆಂದೂ ಸಾರ್ವಜನಿಕರೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಂಡವರಲ್ಲ. 1990ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಎಸ್. ಬಂಗಾರಪ್ಪ ಅವರು ಲೋಕಾಯುಕ್ತದ ತನಿಖೆ ಯನ್ನು ಎದುರಿಸುತ್ತಿದ್ದ ಕೆಲ ಐಎಎಸ್ ಅಧಿಕಾರಿಗಳಿಗೆ ಭಡ್ತಿ ನೀಡುವ ಪ್ರಸ್ತಾವವನ್ನು ಮುಂದಿರಿಸಿದಾಗ ಶಂಕರನಾರಾಯಣನ್ ಇದನ್ನು ವಿರೋಧಿಸಿದರು. ಈ ಅಧಿಕಾರಿಗಳಲ್ಲೊಬ್ಬರು ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಮುಖ್ಯ ಕಾರ್ಯದರ್ಶಿಯಾದರು. ಬಂಗಾರಪ್ಪ , ಶಂಕರ ನಾರಾಯಣನ್ ಅವರನ್ನು ಕಡೆಗಣಿಸಿದರು. ಸರ್ವೋಚ್ಚ ನ್ಯಾಯಾಲಯದ ಭೂತಪೂರ್ವ ನ್ಯಾಯಾಧೀಶರಾಗಿದ್ದ ಗೋವಿಂದ ಮೆನೋನ್ ಅವರ ಪುತ್ರರಾಗಿದ್ದ ಶಂಕರನಾರಾಯಣನ್ ಸರಕಾರದ ಪ್ರಮುಖ ಕಾರ್ಯನಿರ್ವಹಣೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಆಗ್ರಹಿಸುವ ಮನವಿಯೊಂದಿಗೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದುಂಟು. ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬರುವ ಮುನ್ನಿನ ದಿನಗಳ ಸಂಗತಿ ಇದು. ದೇಶಕ್ಕೆ ಇಂದು ಬೇಕಾಗಿರುವುದು ಮಂತ್ರಿಗಳೆದುರು “ಜೀ ಹುಜೂರ್’ ಎನ್ನುವ ಅಧಿಕಾರಿಗಳಲ್ಲ; ಟಿ.ಎಸ್.ಆರ್. ಸುಬ್ರಮಣಿ ಯನ್ ಹಾಗೂ ಎಂ. ಶಂಕರನಾರಾಯಣನ್‌ರಂಥ ಉನ್ನತ ಅಧಿಕಾರಿಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. – ಅರಕೆರೆ ಜಯರಾಮ್