Advertisement

ಅವಿವಾಹಿತ ಪಾದ್ರಿ ಆಯ್ಕೆ ಕಷ್ಟ: ಪೋಪ್‌ ಫ್ರಾನ್ಸಿಸ್‌

08:05 AM Jan 29, 2019 | |

ವೆನಿಜುವೆಲಾ: ಕ್ರೈಸ್ತ ಪಾದ್ರಿಗಳನ್ನು ನೇಮಿಸುವಾಗ ಅವರು ಅವಿವಾಹಿತರೇ ಆಗಿರಬೇಕು ಎಂಬ ನಿಯಮ ಕಡ್ಡಾಯಗೊಳಿಸುವುದು ಸಾಧ್ಯವಿಲ್ಲ ಎಂದು ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ.

Advertisement

ಈ ನಿಯಮ ಕಡ್ಡಾಯಗೊಳಿಸಿದರೆ ಕುಗ್ರಾಮಗಳಲ್ಲಿ ಪಾದ್ರಿಗಳ ನೇಮಕ ಕಷ್ಟಕರ ಎಂದು ಹೇಳಿದ್ದಾರೆ.
ಅವಿವಾಹಿತವಾಗಿರುವುದು ಕ್ಯಾಥೊಲಿಕ್‌ ಚರ್ಚ್‌ಗಳಲ್ಲಿ ವಿಶಿಷ್ಟವಾಗಿದ್ದು, ಇದನ್ನು ಐಚ್ಛಿಕಗೊಳಿಸಬೇಕು ಎಂದಿದ್ದಾರೆ.

ಕ್ರೈಸ್ತ ಸನ್ಯಾಸಿನಿಗಳ ಮೇಲೆ ಅತ್ಯಾಚಾರ ಪ್ರಕರಣಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪೋಪ್‌ ಫ್ರಾನ್ಸಿಸ್‌ನೀಡಿರುವ ಹೇಳಿಕೆ ಕ್ರೈಸ್ತರಲ್ಲಿ ಪಾದ್ರಿಗಳ ನೇಮಕಾತಿ ನಿಯಮದ ಬಗ್ಗೆ ಚರ್ಚೆ ಹುಟ್ಟುಹಾಕಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next