Advertisement
-ಇದು ಅನ್‌ಲಾಕ್ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಹೊರಡಿಸಿರುವ ಹೊಸ ಮಾರ್ಗಸೂಚಿ. ದೇಶದಲ್ಲಿ 2ನೇ ಅಲೆಯ ಸೋಂಕು ಸಂಖ್ಯೆ ಇಳಿಮುಖವಾಗುತ್ತಿದೆ. ಅದಕ್ಕೆ ಪೂರಕವಾಗಿ ಉತ್ತರ ಪ್ರದೇಶ, ದಿಲ್ಲಿ, ಬಿಹಾರ ಸರಕಾರಗಳು ಹಂತಹಂತವಾಗಿ ಲಾಕ್‌ಡೌನ್ ತೆರವುಗೊಳಿಸಲು ಆರಂಭಿ ಸಿವೆ. ಅದಕ್ಕೆ ಪೂರಕವಾಗಿ ಈ ಹೊಸ ಮಾರ್ಗಸೂಚಿ ಹೊರಬಿದ್ದಿದೆ.
ದೇಶದಲ್ಲಿ ಕಳೆದ 54 ದಿನಗಳಿಗೆ ಹೋಲಿಸಿದರೆ ಕನಿಷ್ಠ ಪ್ರಮಾಣದ ಸೋಂಕು ದಾಖಲಾಗಿದೆ. ಸೋಮವಾರದಿಂದ ಬುಧವಾರದ ಅವಧಿಯಲ್ಲಿ 1,27,510 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದರೆ 2,795 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಳೆದ 35 ದಿನಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ಸಕ್ರಿಯ ಸೋಂಕು ಸಂಖ್ಯೆ ಕೂಡ 43 ದಿನಗಳ ಬಳಿಕ 18,95,520ಕ್ಕೆ ಇಳಿದಿದೆ. ಅಂದರೆ ಕಳೆದ 24 ತಾಸುಗಳ ಅವಧಿಯಲ್ಲಿ 1,30,572 ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ. 6.62 ಆಗಿದೆ.