Advertisement

ರಾಜ್ಯ ಸರಕಾರಗಳು ‘OK’ ಅಂದರೆ ಲೋಕಲ್ ಟ್ರೈನ್ ಗಳ ಓಡಾಟ ಪ್ರಾರಂಭ: ಕೇಂದ್ರ

06:57 PM Sep 17, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ಸಂಬಂಧಿತ ಲಾಕ್ ಡೌನ್ ಸ್ಥಿತಿ ದೇಶದ ಬಹುತೇಕ ರಾಜ್ಯಗಳಲ್ಲಿ ತೆರವುಗೊಂಡಿದೆ.

Advertisement

ಶಾಲಾ-ಕಾಲೇಜುಗಳು, ಥಿಯೇಟರ್ ಗಳನ್ನು ಹೊರತುಪಡಿಸಿ ಬಹುತೇಕ ಸೇವೆಗಳು ಅನ್ ಲಾಕ್ 4ರಲ್ಲಿ ಸಾರ್ವಜನಿಕ ಸೇವೆಗಳಿಗೆ ಮುಕ್ತಗೊಂಡಿವೆ.

ಆದರೆ, ಮುಂಬಯಿ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಸ್ಥಳೀಯ ಸಂಚಾರದ ಜೀವನಾಡಿಗಳಾಗಿರುವ ಲೋಕಲ್ ಟ್ರೈನ್ ರೈಲು ಸೇವೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿಲ್ಲ.

ಮಹಾನಗರಗಳಲ್ಲಿ ಮೆಟ್ರೋ ಸೇವೆಗಳು ಪುನರಾರಂಭಗೊಂಡರೂ ಈ ಲೋಕಲ್ ರೈಲು ಓಡಾಟ ಇನ್ನೂ ಪ್ರಾರಂಭವಾಗಿಲ್ಲ. ಈ ಪ್ರಶ್ನೆಗೆ ಕೇಂದ್ರ ಸರಕಾರ ಇಂದು ಉತ್ತರ ನೀಡಿದೆ.

ಸಬ್ ಅರ್ಬನ್ ರೈಲು ಸೇವೆಗಳನ್ನು ಪುನರಾರಂಭಿಸಲು ರಾಜ್ಯ ಸರಕಾರ ಸಿದ್ಧ ಎಂದು ನಮಗೆ ಸೂಚನೆ ನಿಡಿದ ತಕ್ಷಣವೇ ಈ ರೈಲು ಸೇವೆಗಳನ್ನು ಪ್ರಾರಂಭಿಸಲು ಮಾರ್ಗಸೂಚಿಗಳನ್ನು ಕೇಂದ್ರ ಹೊರಡಿಸಲಿದೆ ಎಂದು ರೈಲ್ವೇ ಮಂಡಳಿಯ ಅಧ್ಯಕ್ಷರಾಗಿರುವ ವಿ ಕೆ ಯಾದವ್ ಅವರು ತಿಳಿಸಿದ್ದಾರೆ.

Advertisement

‘ಕೋವಿಡ್ 19 ಸೋಂಕು ಹರಡುವಿಕೆಯನ್ನು ನಾವು ಸಾಧ್ಯವಾದಷ್ಟೂ ಕಡಿಮೆಗೊಳಿಸಬೇಕಿದೆ. ಒಮ್ಮೆ ರಾಜ್ಯ ಸರಕಾರಗಳು ನಮ್ಮನ್ನು ಸಂಪರ್ಕಿಸಿದಲ್ಲಿ ಈ ಸ್ಥಳೀಯ ರೈಲು ಸೇವೆಗಳನ್ನು ಪ್ರಾರಂಭಿಸುವುದಕ್ಕೆ ಸಂಬಂಧಿಸಿದ ವಿಧಾನಗಳ ಕುರಿತಾಗಿ ನಾವು ಮಾಹಿತಿ ನೀಡಲಿದ್ದೇವೆ’ ಎಂದು ಯಾದವ್ ತಿಳಿಸಿದ್ದಾರೆ.

ಪಶ್ವಿಮ ಬಂಗಾಲದಲ್ಲಿ ಲೋಕಲ್ ಟ್ರೈನ್ ಸೇವೆಗಳು ಈಗಾಗಲೇ ಪ್ರಾರಂಭಗೊಂಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಇದಕ್ಕೆ ಸಂಬಂಧಿಸಿದಂತೆ ನಾವು ಪಶ್ವಿಮ ಬಂಗಾಲ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಲ್ಲಿ ಈಗಲೂ ಕೆಲವು ಕಡೆಗಳಲ್ಲಿ ಆಗಾಗ ಲಾಕ್ ಡೌನ್ ವಿಧಿಸಲಾಗುತ್ತಿದೆ. ಕಳೆದ ತಿಂಗಳು ವಿಶೇಷ ರೈಲು ಸೇವೆಗಳನ್ನು ಸಹ ಅಲ್ಲಿ ರದ್ದುಗೊಳಿಸಲಾಗಿತ್ತು. ಆದರೆ ಮೆಟ್ರೋ ಸಂಚಾರ ಪ್ರಾರಂಭಗೊಂಡಿದೆ. ಹೀಗಾಗಿ ಲೋಕಲ್ ಟ್ರೈನ್ ಸೇವೆಗಳನ್ನು ಪುನರಾರಂಭಗೊಳಿಸುವ ವಿಚಾರದಲ್ಲಿ ಅಲ್ಲಿನ ರಾಜ್ಯ ಸರಕಾರದೊಂದಿಗೆ ನಾವು ಚರ್ಚಿಸುತ್ತಿದ್ದೇವೆ’ ಎಂದು ಯಾದವ್ ಅವರು ಮಾಹಿತಿ ನೀಡಿದರು.

ಸದ್ಯ ಮುಂಬಯಿ ಲೋಕಲ್ ಟ್ರೈನ್ ಗಳಲ್ಲಿ ಅವಶ್ಯ ಸೇವೆಗಳಿಗೆ ತೆರಳುವವರು ಮಾತ್ರವೇ ಪ್ರಯಾಣಿಸಲು ಅವಕಾಶವಿದೆ. ಇನ್ನು ಸೆಪ್ಟಂಬರ್ 18ರಿಂದ ಈ ರೈಲುಗಳಲ್ಲಿ ವಕೀಲರಿಗೂ ಪ್ರಯಾಣಸಲು ಅವಕಾಶ ಮಾಡಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next