Advertisement

ವಾಯುಪಡೆ ನಡುರಾತ್ರಿ ಯಶಸ್ವಿ ಕಾರ್ಯಾಚರಣೆ: ಸಿನಿಮೀಯ ರೀತಿ ಭಾರತೀಯರ ರಕ್ಷಣೆ

12:59 AM Apr 30, 2023 | Team Udayavani |

ಹೊಸದಿಲ್ಲಿ: ಕಣ್ಣಳತೆ ದೂರದಲ್ಲೇ ಗುಂಡಿನ ಸುರಿಮಳೆ, ವಿಮಾನ ಹಾರಾಟ ನಡೆಸಲು ಸಹಕರಿಸದ ಪ್ರತಿಕೂಲ ಹವಾಮಾನ, ಒಂದೇ ಒಂದು ರನ್‌ವೇ ಹೊಂದಿರುವ ಪುಟ್ಟ ವಿಮಾನ ಇಳಿದಾಣ. ಇದು ಯುದ್ಧಗ್ರಸ್ಥ ಸೂಡಾನ್‌ನಲ್ಲಿನ ಚಿತ್ರಣ. ಇಷ್ಟೆಲ್ಲ ಅನನುಕೂಲಗಳ ನಡು ವೆಯೇ ಭಾರತೀಯ ವಾಯುಪಡೆಯ ಬೃಹತ್‌ ವಿಮಾನವೊಂದು ಸಿನಿಮೀಯ ರೀತಿಯಲ್ಲಿ ಭಾರತದ 121 ಮಂದಿಯನ್ನು ಪಾರುಮಾಡಿದೆ.

Advertisement

ಹೌದು, ಸೂಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಪಾರುಮಾಡಲು ವಾದಿ ಸಯ್ಯದ್ನಾದಲ್ಲಿರುವ ವಿಮಾನ ಇಳಿದಾಣವನ್ನು ಬಳಕೆ ಮಾಡಲಾಗಿದೆ. ಆದರೆ ಈ ಇಳಿದಾಣದಲ್ಲಿ ಅದಾಗಲೇ ಹವಾಮಾನ ಪರಿಸ್ಥಿತಿ ಹದಗೆಟ್ಟಿದ್ದು ಮಾತ್ರವಲ್ಲದೇ, ನ್ಯಾವಿಗೇಶನ್‌ ಮಾಹಿತಿ ಹಾಗೂ ಇಂಧನ ಸೌಲಭ್ಯವೂ ಇರಲಿಲ್ಲ. ವಿಮಾನ ಲ್ಯಾಂಡಿಂಗ್‌ಗೆ ಅಗತ್ಯವಾಗಿರುವ ಲೈಟಿಂಗ್‌ ವ್ಯವಸ್ಥೆಯನ್ನೂ ಇಳಿದಾಣ ಒಳಗೊಂಡಿರಲಿಲ್ಲ..

ಇಷ್ಟೆಲ್ಲ ಅಪಾಯಗಳ ನಡುವೆಯೂ ಭಾರತೀಯ ವಾಯುಪಡೆಯ ಸಿ-130ಜೆ ವಿಮಾನವು ಎ.27-28ರ ರಾತ್ರಿ ಸಾಹಸ ಮಯ ಕಾರ್ಯಾಚರಣೆ ನಡೆಸಿದೆ. ನೈಟ್‌ ವಿಷನ್‌ ಗ್ಲಾಸ್‌ಗಳನ್ನು ಬಳಸಿಕೊಂಡು ಸಿಬಂದಿ ಇಳಿದಾಣದಲ್ಲಿ ವಿಮಾನ ಲ್ಯಾಂಡಿಂಗ್‌ ಮಾಡಿದ್ದು, ಕ್ಷಣಾರ್ಧದಲ್ಲೇ ಗರುಡ್‌ ಕಮಾಂಡರ್‌ಗಳು ಭಾರತೀ ಯರನ್ನು ಸುರಕ್ಷಿತವಾಗಿ ವಿಮಾನವನ್ನೇ ರಿಸಿದ್ದಾರೆ. ಬಳಿಕ ಮತ್ತದೇ ನೈಟ್‌ ವಿಷನ್‌ಗಾÉಸ್‌ಗಳನ್ನು ಬಳಸಿ, ವಿಮಾನ ಟೇಕಾಫ್ ಆಗಿದೆ.

ಹೀಗೆ ರಾತೋರಾತ್ರಿ ವಾಯುಪಡೆ ನಡೆಸಿದ ಸಾಹಸಮಯ ಕಾರ್ಯಾಚರಣೆ ಯಲ್ಲಿ ಗರ್ಭಿಣಿಯೂ ಸೇರಿದಂತೆ 121 ಭಾರತೀಯರು ಸಂಕಷ್ಟದಿಂದ ಪಾರಾಗಿ ದ್ದಾರೆ. ಐಎಎಫ್ನ ಈ ದಿಟ್ಟ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಭಾರತ ಸರಕಾರವು ಈವರೆಗೆ ಒಟ್ಟು 2,400 ಮಂದಿಯನ್ನು ರಕ್ಷಿಸಿ ತಾಯ್ನಾಡಿಗೆ ಕರೆತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next