Advertisement

ಕನಸುಗಳಿಗೆ ಬಣ್ಣಹಚ್ಚುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು

06:00 AM Sep 07, 2018 | |

ನ‌ಮ್ಮ ಹಲವಾರು ಕನಸುಗಳು ಹಾಗೆಯೇ ಅರ್ಧಕ್ಕೆ ತೆರೆ ಎಳೆಯುವುದಿದೆ. ನನ್ನೊಳಗೆ  ಕೂಡ ತೆರೆ ಎಳೆಯುವುದಕ್ಕೆ ಸಾಧ್ಯವಿಲ್ಲದೆ ದಟ್ಟವಾಗಿ ಆವರಿಸುವಂಥ ಕನಸೊಂದಿತ್ತು, ಹೌದು, ಅದು ಕಾಲೇಜು ಲೈಫ‌ು! ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಗೋಲ್ಡನ್‌ ಲೈಫ್ ಎಂದು  ಕರೆಯುವ ಈ ಲೈಫ್ ನನಗೂ ಬೇಕೆಂದು ಹಾಗೆಯೇ ಕಾಪಿಟ್ಟುಕೊಂಡಿದ್ದೆ. ಕಾಲದ ಹೊಡೆತಕ್ಕೆ ಸಿಕ್ಕಿ ಕರಗುವಷ್ಟು ಮೆತ್ತಗಿನ ಕನಸು ಅದಾಗಿರಲಿಲ್ಲ. ಹಾಗೇ ನನ್ನೊಳಗೆ ಉಳಿದು ನನ್ನನ್ನು ಪುನಃ ಪುನಃ ಅಲರಾಮ್‌ ತರಹ ಬಡಿದೆಬ್ಬಿಸುತ್ತ ಇರುತ್ತಿತ್ತು.

Advertisement

    ಅದೊಂದು ದಿನ ಆ ಕನಸು ನನಸಾಗುವ ಹಂತಕ್ಕೆ ಬಂದು ಮುಟ್ಟಿತು. ಮಂಗಳೂರಿನ ಹಳೆಯ ಸರಕಾರಿ ಕಾಲೇಜು, ಪ್ರಸ್ತುತ ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ 2016-17 ನೇ ಸಾಲಿನಲ್ಲಿ ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜು ಆರಂಭವಾಗುವುದೆಂಬ ಸುದ್ದಿ ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿತು. ಪದವಿ ಪಡೆಯುವ ನನ್ನ ಕನಸಿಗೆ ಮೊದಲ ಹೆಜ್ಜೆ ಎಂಬಂತೆ ಕಾಲೇಜು ಪ್ರವೇಶದ ಅರ್ಜಿಯನ್ನು ಸ್ವತಃ ಪ್ರಾಂಶುಪಾಲರಾಗಿದ್ದ ಸುಭಾಷಿಣಿ ಶ್ರೀವತ್ಸ ಮೇಡಮ್‌ರವರ ಕೈಯಿಂದ ಪಡೆದುಕೊಂಡಿದ್ದು ಇನ್ನೂ ನನ್ನ ನೆನಪಿನಂಗಳದಲ್ಲಿದೆ.

    ಜುಲೈ 1, 2016 ನನ್ನ ಜೀವನದಲ್ಲಿ ಒಂದು ಅವಿಸ್ಮರಣೀಯ ದಿನವಾಗಿದೆ. ಅಂದು ಪವಾಡವೇನು ನಡೆಯದಿದ್ದರೂ, ಪದವಿ ಮುಗಿಸಿ ಗುರಿಯೊಂದನ್ನು ಸಾಧಿಸಬೇಕೆಂದಿದ್ದ  ನನಗೆ ಕೆಲ ಕಾರಣಗಳಿಂದ ಅದು ಮೊಟಕಾದುದಕ್ಕೆ ಕಾಲೇಜಿನ ಆಸುಪಾಸು ನಡೆದಾಡುವಾಗ ಎಷ್ಟೋ ಸಲ ಕಣ್ಣೀರಾಗಿದ್ದ ನಾನು ಪದವಿ ತರಗತಿಗೆ ಪ್ರವೇಶಿಸಿದ ಮೊದಲ ದಿನವಾಗಿತ್ತು ಆ ದಿನ. ಹಾಗಾಗಿಯೇ ಅದು ನನಗೆ ಅವಿಸ್ಮರಣೀಯ ದಿನವಾಗಿದೆ. ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ನಮ್ಮದೇ ಪಯನೀಯರ್‌ ಬ್ಯಾಚ್‌, ಕಾರಣ, ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಪದವಿ ತರಗತಿಗಳು ಆರಂಭಗೊಂಡಿದ್ದೇ ನಮ್ಮ ಬ್ಯಾಚ್‌ನ ಮುಖಾಂತರ!

ನನ್ನ ಕನಸು ನನಸಾಗುವ ದಿನ ಅಂದರೆ ಪದವಿ ತರಗತಿಯ ಮೊದಲನೆಯ ದಿನ ತರಗತಿಗಳು ಸಂಜೆ ನಾಲ್ಕೂವರೆಗೆ ಪ್ರಾರಂಭವಾಗುವುದಾಗಿದ್ದರೂ ನಾನು ನಾಲ್ಕು ಗಂಟೆಗೇ ಕಾಲೇಜಿನಲ್ಲಿದ್ದೆ. ಮೊದಲ ದಿನ ಜನರಲ್‌ ಕ್ಲಾಸ್‌. ಪದವಿ ತರಗತಿಗೆ ದಾಖಲಾದ ಎಲ್ಲ ಕೋರ್ಸಿನ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಜಮೆಯಾಗಿದ್ದೆವು. ಅದು ಕಂಬೈನ್‌ ಕ್ಲಾಸೆಂದು ನನಗೆ ಮೊದಲೇ ಗೊತ್ತಿರಲಿಲ್ಲ. ನಂತರ ಪ್ರಿನ್ಸಿಪಾಲರು ಬಂದು ನಮ್ಮನ್ನು ಉದ್ದೇಶಿಸಿ ಒಂದಷ್ಟು ಹೊತ್ತು ಮಾತನಾಡಿದರು. ನಂತರ ಉಳಿದ ಲೆಕ್ಚರರ್‌ಗಳು ಬಂದು ಮಾತನಾಡಿದರು. ಅಷ್ಟೊತ್ತಿಗಾಗಲೇ ನನ್ನ ಎದೆ ನಗಾರಿ ಬಾರಿಸತೊಡಗಿತು, ಏಕೆಂದರೆ ಬಂದ ಎಲ್ಲ ಉಪನ್ಯಾಸಕರು ಯಾರು ಕೂಡ ಇಂಗ್ಲಿಶ್‌ ಬಿಟ್ಟು ಬೇರೆ ಯಾವ ಭಾಷೆಯನ್ನೂ ಬಳಸುತ್ತಿರಲಿಲ್ಲ. ನನಗೂ ಇಂಗ್ಲಿಶಿಗೂ ಅಜನ್ಮ ವೈರತ್ವ ಇತ್ತೇನೋ, ನಮ್ಮಿಬ್ಬರ ಸಂಬಂಧ ಎಷ್ಟು ಬೇಕೋ ಅಷ್ಟೇ ಕುದುರಿತ್ತು. ಹಾಗಾಗಿಯೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಇಂಗ್ಲಿಶ್‌ ಎಂಬ ಬ್ರಹ್ಮರಾಕ್ಷಸನೊಂದಿಗೆ ಹೋರಾಡಿ ಜಸ್ಟ್‌ ಪಾಸಾಗಿ¨ªೆ. ಕ್ಲಾಸಲ್ಲಿ ನಮ್ಮೆಲ್ಲರ ಪರಿಚಯ ಮಾಡತೊಡಗಿದಾಗ ಒಂದಷ್ಟು ಸಮಾಧಾನವಾಗಿತ್ತು, ಏಕೆಂದರೆ, ಕೆಲವು ವಿದ್ಯಾರ್ಥಿಗಳು ಶ್ರೀಗಂಧ ಕನ್ನಡದಲ್ಲಿ ಮಾತನಾಡಿದ್ದರು. ಅವರೊಂದಿಗೆ ನಾನು ಕನ್ನಡದÇÉೇ ನನ್ನ ಪರಿಚಯ ಮಾಡಿಕೊಂಡೆ. ಬಳಿಕ ಉಪನ್ಯಾಸಕರು ಕೆಲವೊಂದು ಚಟುವಟಿಕೆಗಳನ್ನು ಮಾಡಿಸಿ ಸುಮಾರು ಏಳು ಗಂಟೆಯ ಹೊತ್ತಿಗೆ ಅವತ್ತಿನ ಕ್ಲಾಸು ಮುಗಿಸಿದ ನೆನಪಿದೆ.

    ಈ ರೀತಿ ಆರಂಭಗೊಂಡ ನನ್ನ ಕಾಲೇಜು ಜೀವನದ ಯಾತ್ರೆಯಲ್ಲಿ ಕಳೆದು ಉಳಿದೆಲ್ಲ ದಿನವೆಲ್ಲ ಸುವರ್ಣ ದಿನದ ನೆನಪುಗಳೇ. ಪ್ರೈಮರಿಯಿಂದ ಹೈಸ್ಕೂಲ್‌ವರೆಗೆ ಇದ್ದ ಗದರಿಸಿ, ಹೆದರಿಸಿ, ಪ್ರೀತಿಸಿ ಕಲಿಸುವ ಟೀಚರ್‌ಗಳ ಬದಲು ಸ್ನೇಹಿತರಂತಹ ಉಪನ್ಯಾಸಕರು, ಹೊಸ ಕ್ಲಾಸ್‌ಮೇಟ್‌ಗಳು ಎಲ್ಲವೂ ಗೋಲ್ಡನ್ನೇ ! ಮೊದಲ ಸೆಮಿಸ್ಟರ್‌ ಮುಗಿಯುವ ಹೊತ್ತಿಗೆ ನನ್ನ ಸ್ನೇಹಿತರ ಪಟ್ಟಿ ಹೆಚ್ಚಾಗುತ್ತಾ ಹೋಯಿತು. ಮೊದಲ ವರ್ಷ ಮುಗಿಯುವಾಗ ಅತ್ತ ಕಡೆ ಕೆಲಸ, ಇತ್ತ ಕಡೆ ಕಲಿಕೆ ಕಷ್ಟವಾಗಿತ್ತಾದರೂ ಸ್ನೇಹಿತರಂಥ ಉಪನ್ಯಾಸಕರ ಪ್ರೋತ್ಸಾಹದಿಂದ ಬಿರುಮಳೆಯಾಗಿ ಬಂದ ಕಷ್ಟ ಮಂಜಿನಂತೆ ಕರಗಿ ಹೋದವು. ನಾನು ಕೆಲಸ ಮಾಡುವಲ್ಲಿ ಕೆಲವರು ನನ್ನನ್ನು ನೋಡಿ ಹಂಗಿಸಿದ್ದೂ ಇದೆ. ಆದರೆ, ಹಂಗಿಸುವ ನಾಲಗೆ ಎಷ್ಟೇ ದೊಡ್ಡದಾಗಿದ್ದರೂ, ಪ್ರೀತಿಸಿ ಪ್ರೋತ್ಸಾಹಿಸುವ ಹೃದಯವಿರುವ ಫ್ಯಾಮಿಲಿ ಹಾಗು ಉಪನ್ಯಾಸಕರು ನನ್ನ ಹೆಜ್ಜೆಗೆ ಬೆಂಗಾವಲಾಗಿದ್ದರು. ಎರಡನೆಯ ವರ್ಷದ ಕಾಲೇಜು ಪ್ರಾರಂಭವಾಗುವಾಗ ಎಲ್ಲವೂ ಸಲೀಸಾಗಿತ್ತು. ಆಗ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಜಾಸ್ತಿಯಾಗಿತ್ತು. ನಿಜ ಹೇಳಬೇಕೆಂದರೆ, ನಾನು ಕಾಲೇಜು ಲೈಫ‌ನ್ನು ಎಂಜಾಯ್‌ ಮಾಡಿದ್ದೇ ಎರಡನೆಯ ವರ್ಷದಲ್ಲಿ. ಮೊದಲ ವರ್ಷ ಏನು ಮಾಡಬೇಕು, ಹೇಗಿರಬೇಕು ಎಂಬ ಗೊಂದಲ ಇತ್ತು. ಆದರೆ ಎರಡನೆಯ ವರ್ಷದಲ್ಲಿ ಅದ್ಯಾವುದರ ಗೊಂದಲವಿರದೇ ಫ‌ುಲ್‌ ಎಂಜಾಯೆ¾ಂಟ್‌! ಇಂಟರ್‌ ಕಾಲೇಜು ಫೆಸ್ಟ್‌ಗಳು, ನ್ಪೋರ್ಟ್ಸ್ ಡೇ, ಕಾಲೇಜ್‌ ಡೇಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ಕೂಡ ಎರಡನೆಯ ವರ್ಷದಲ್ಲಿ. ನನಗೆ ಸ್ಟೇಜ್‌ ಹತ್ತುವುದೆಂದರೆ ಎಲ್ಲಿಲ್ಲದ ಭಯ. ಸ್ಟೇಜ್‌ನಲ್ಲಿ ನಿಂತು ಮೈಕು ಕೈಗೆ ಬಂದರಂತೂ ಕಾಲು ನಡುಗಲು ಪ್ರಾರಂಭವಾಗುತ್ತದೆ, ಎಲ್ಲಿಯವರೆಗೆ ಎಂದರೆ ಒಂದು ಕಾಲನ್ನು ಹಿಡಿದರೆ ಇನ್ನೊಂದು ಕಾಲು ನಡುಗುತ್ತಿತ್ತು. ಆದರೆ ಅಷ್ಟೊಂದು ಸ್ಟೇಜ್‌ ಫಿಯರ್‌ ಇರುವ ನಾನು ಎರಡು ಬಾರಿ ಯಾವುದೇ ಭಯವಿಲ್ಲದೆ ಮಾತನಾಡಿದ್ದು ಡಿಗ್ರಿ ಎರಡನೆಯ ವರ್ಷದ ಅತ್ಯಂತ ದೊಡ್ಡ ಸಾಧನೆಯಾಗಿದೆ. ಇವೆಲ್ಲದರ ನಡುವೆ ನಮ್ಮ ಎರಡನೆಯ ವರ್ಷದ ಡಿಗ್ರಿ ತರಗತಿಗಳು ಹೇಗೆ ಕಳೆದು ಹೋದವು ಎಂಬುದು ಈಗಲೂ ತಿಳಿದಿಲ್ಲ.

Advertisement

ಈ ವರ್ಷ ಅಂತಿಮ ವರ್ಷದ ಡಿಗ್ರಿ, ಜೊತೆಗೆ ಕಾಲೇಜಿನ ಮೊದಲ ಔಟ್‌ ಗೋಯಿಂಗ್‌ ಬ್ಯಾಚ್‌ ನಮ್ಮದು, ಹಾಗಾಗಿಯೇ ಉಪನ್ಯಾಸಕರೆಲ್ಲರೂ ನಮ್ಮಿಂದ ಉತ್ತಮವಾದ ಫ‌ಲಿತಾಂಶಗಳನ್ನು ನಿರೀಕ್ಷಿಸುತ್ತಿದ್ದಾರೆ. ಈ ಬಾರಿ ಪಾಠ ಪ್ರವಚನಗಳ ಜೊತೆಗೆ ಇತರ ಚಟುವಟಿಕೆಗಳಿಗೂ ಸ್ನೇಹಿತರ ಜತೆಗೂಡಿ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ. ಈ ರೀತಿಯಾಗಿ ನಮ್ಮ ಕಾಲೇಜು ದಿನಗಳನ್ನು ನಮ್ಮ ಜೀವನದ ಮರೆಯಲಾಗದ ಕ್ಷಣಗಳನ್ನಾಗಿಸಬೇಕು ಎಂಬುದು ನಮ್ಮೆಲ್ಲರ ಬಯಕೆ.

ಮಹಮ್ಮದ್‌ ನಾಝೀರ್‌ ಹುಸೈನ್‌
 ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next