Advertisement

ಕಾಫಿಗೂ ಬಂತು ಸ್ನಾತಕೋತ್ತರ ಪದವಿ!

07:45 PM Sep 22, 2021 | Team Udayavani |

ರೋಮ್‌: ಅದೆಷ್ಟೇ ತೂಕಡಿಕೆಯಿದ್ದರೂ ಒಂದು ಕಪ್‌ ಕಾಫಿ ಕುಡಿದರೆ ಮತ್ತೆ ಹೊಸ ಚೈತನ್ಯ ಮೂಡುತ್ತದೆ ಎನ್ನುವವರು ಸಾಕಷ್ಟು ಮಂದಿಯಿದ್ದಾರೆ. ಈ ರೀತಿ ಕಾಫಿಯೆಂದರೆ ಪಂಚಪ್ರಾಣ ಎನ್ನುವವರಿಗಾಗಿಯೇ ಇಟಲಿಯ ವಿಶ್ವವಿದ್ಯಾಲಯವೊಂದು ಸ್ನಾತಕೋತ್ತರ ಪದವಿಯನ್ನೇ ಆರಂಭಿಸಿದೆ!

Advertisement

ಹೌದು. ಇಟಲಿಯ ಪ್ಲಾರೆನ್ಸ್‌  ವಿಶ್ವವಿದ್ಯಾಲಯ ಕಾಫಿ ಬಗ್ಗೆಯೇ ಸ್ನಾತಕೋತ್ತರ ಪದವಿ ಆರಂಭಿಸಿದೆ. ಕಾಫಿಯ ಇತಿಹಾಸದಿಂದ ಹಿಡಿದು ಕಾಫಿಯನ್ನು ಹೇಗೆ ಸರ್ವ್‌ ಮಾಡಬೇಕು ಎನ್ನುವವರೆಗೂ ಸಂಪೂರ್ಣ ಅಧ್ಯಯನವನ್ನು ಈ ಪದವಿಯಲ್ಲಿ ಮಾಡಬಹುದು. ಕಾಫಿ ಉದ್ಯಮದಲ್ಲೇ ಯಶಸ್ಸು ಕಂಡಿರುವ ಅನೇಕ ಕಂಪನಿಗಳಿಗೂ ಕರೆದುಕೊಂಡು ಹೋಗಿ ಅಲ್ಲಿ ಪ್ರಾಯೋಗಿಕ ಅಧ್ಯಯನಕ್ಕೂ ಅವಕಾಶ ಮಾಡಿಕೊಡಲಾಗುವುದು.

ಇದನ್ನೂ ಓದಿ:ಅನಂತಕುಮಾರ್ ಅವರ ಸೇವಾಗುಣ ಎಲ್ಲರಿಗೂ ಪ್ರೇರಣೆ: ಬಸವರಾಜ ಬೊಮ್ಮಾಯಿ

ಈ ಪದವಿ ಅಧ್ಯಯನ 9 ತಿಂಗಳ ಕಾಲಾವಧಿಯಲ್ಲಿ ನಡೆಯಲಿದೆ. ಮೊದಲ ಬ್ಯಾಚ್‌ 2022ರ ಜನವರಿಯಲ್ಲಿ ಆರಂಭವಾಗಲಿದ್ದು, ಅದಕ್ಕೆ ಈಗಾಗಲೇ 25 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಮೊದಲ ಬ್ಯಾಚ್‌ಗೆ ಇಟಾಲಿಯನ್‌ ಭಾಷೆಯಲ್ಲೇ ಅಧ್ಯಯನ ನಡೆಯಲಿದೆ. ಒಂದು ವೇಳೆ ಬೇಡಿಕೆ ಹೆಚ್ಚಾದರೆ ಇಂಗ್ಲಿಷ್‌ನಲ್ಲಿಯೂ ಪದವಿ ಆರಂಭಿಸಲಾಗುವುದು ಎಂದು ವಿವಿಯ ಕೃಷಿ ವಿಭಾಗದ ಮುಖ್ಯಸ್ಥರು ಹಾಗೂ ಕೋರ್ಸ್‌ನ ಮೇಲ್ವಿಚಾರಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next