ವಾಷಿಂಗ್ಟನ್: ಕುಸ್ತಿ ಅಭ್ಯಾಸ ಮಾಡುತ್ತಿದ್ದಾಗ ಬಿಸಿಲಾಘಾತದಿಂದ ಮೃತಪಟ್ಟ ವಿದ್ಯಾರ್ಥಿಯೊಬ್ಬನ ಕುಟುಂಬಕ್ಕೆ ಅಮೆರಿಕದ ಕೆಂಟುಕಿ ವಿಶ್ವವಿದ್ಯಾಲಯವು 115 ಕೋಟಿ ರೂ.ಗಳ ಪರಿಹಾರ ನೀಡಿದೆ.
ಕುಸ್ತಿಪಟು ಆಗಿದ್ದ ಗ್ರ್ಯಾಂಟ್ ಬ್ರೇಸ್ ಎನ್ನುವ 20 ವರ್ಷದ ಯುವಕ, ವಿಶ್ವವಿದ್ಯಾಲಯದಲ್ಲಿ ಕುಸ್ತಿ ಅಭ್ಯಾಸ ಮಾಡುತ್ತಿದ್ದ.
2020ರಲ್ಲಿ ಆತನ ತರಬೇತಿಯ ಮೊದಲೇ ದಿನವೇ, ಆತನಿಗೆ ನೀರೂ ಕೂಡ ನೀಡದಂತೆ ತರಬೇತುದಾರರು ಅಭ್ಯಾಸ ಮಾಡಿಸಿದ್ದಾರೆ. ಆತ ನೀರಿಗಾಗಿ ಪರದಾಡಿದಾರೂ ನೀಡದೇ, ಕಠಿಣವಾಗಿ ಅಭ್ಯಾಸ ಮಾಡಿಸಿದ ಪರಿಣಾಮ ಆತ ನಿಶ್ಶಕ್ತನಾಗಿದ್ದ. ವಿವಿ ಆವರಣಕ್ಕೆ ಬರುತ್ತಿದ್ದಂತೆ ಬಿಸಿಲಿನಬೇಗೆ ತಾಳದೇ ಮೃತಪಟ್ಟಿದ್ದ.
ಈ ಸಂಬಂಧಿಸಿದಂತೆ ಆತನ ಕುಟುಂಬ ದಾವೆ ಹೂಡಿದ್ದು, ಇದೀಗ ವಿವಿ 115 ಕೋಟಿ ರೂ.ಗಳ ಪರಿಹಾರ ನೀಡುವ ಮೂಲಕ ಪ್ರಕರಣಕ್ಕೆ ತೆರೆ ಎಳೆಯುತ್ತಿದೆ. ಅಲ್ಲದೇ, ಇಬ್ಬರೂ ತರಬೇತುದಾರರಿಂದಲೂ ರಾಜೀನಾಮೆ ಪಡೆದಿದ್ದು, ಬಿಸಿಲಾಘಾತ, ತರಬೇತಿ ಸಮಯದಲ್ಲಿ ಅನುಸರಿಸಬೇಕಾದ ಎಚ್ಚರಿಕೆಗಳ ಬಗ್ಗೆ ಗಮನ ವಹಿಸುವುದಾಗಿಯೂ ತಿಳಿಸಿದೆ.