Advertisement
ಸೆ. 16ರಂದು ಸಾಂತಾಕ್ರೂಜ್ ಪೂರ್ವದ ವಿದ್ಯಾನಗರಿಯ ರಾನಡೆ ಭವನದಲ್ಲಿ ಕನ್ನಡ ವಿಭಾಗ ಮುಂಬಯಿ ವಿವಿ ಆಯೋಜಿಸಿದ್ದ ಸಾಧಕರಿಗೆ ಗೌರವ-ಅಭಿನಂದನೆ ಸಮಾರಂಭದಲ್ಲಿ ಕನ್ನಡ ವಿಭಾಗದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾನೂ ಬಂಟರ ಸಂಘದ ಸಹಕಾರದಿಂದ ಶಿಕ್ಷಣ ಪಡೆದವನು. ಬಂಟರ ಸಂಘದ ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್ ಮತ್ತು ಶ್ರೀ ನಿತ್ಯಾನಂದ ಕನ್ನಡ ಫ್ರೀ ನೈಟ್ ಹೈಸ್ಕೂಲ್‌ನಲ್ಲಿ ಓದಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಕಲಿಕೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ನಮಗೆ ಆವಶ್ಯಕತೆಗಿಂತ ಕಲಿಯುವ ಉತ್ಸಾಹವೇ ಪ್ರಧಾನವಾಗಿದೆ. ಪ್ರಸ್ತುತ ಹಣ ಗಳಿಕೆಗಿಂತ ಜನರ ಪ್ರೀತಿಯನ್ನೇ ಮುಖ್ಯವಾಗಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೋಟ್ಯಂತರ ಕನ್ನಡಿಗರ ಮಧ್ಯೆ ನನಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನನ್ನ ಭಾಗ್ಯವೇ ಸರಿ. ವಿಶ್ವವಿದ್ಯಾನಿಲಯದ ಈ ಆಹ್ವಾನದಿಂದ ಮತ್ತಷ್ಟು ಧನ್ಯನಾಗಿದ್ದೇನೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದರು.
Related Articles
Advertisement
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರ ಅಧ್ಯಕ್ಷತೆ ಯಲ್ಲಿ ಜರಗಿದ ಸರಳ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿ ಅವರನ್ನು ಶಾಲು ಹೊದೆಸಿ, ಸ್ವರ್ಣ ಪದಕ ಹಾಗೂ ಗ್ರಂಥ ಗೌರವವನ್ನಿತ್ತು ಅಭಿನಂದಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿ ವಿವಿ ಕನ್ನಡ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಕಲಾ ಭಾಗÌತ್ ಸ್ವಾಗತ ಗೀತೆ ಹಾಡಿದರು. ಶಶಿಕಲಾ ಹೆಗ್ಡೆ, ರುದ್ರಮೂರ್ತಿ ಪ್ರಭು, ಶಾಲಿನಿ ಡಿ. ಕೆ., ಲಕ್ಷ್ಮೀ ಪೂಜಾರಿ, ಸುಧಾ ಶೆಟ್ಟಿ, ಕರ್ನೂರು ಮೋಹನ್ ರೈ, ರೇಶ್ಮಾ ಮಾನೆ, ಸುರೇಖಾ ಎಚ್. ದೇವಾಡಿಗ, ಜಯ ಸಿ. ಸಾಲ್ಯಾನ್, ಶ್ರೀನಿವಾಸ್ ಪದಕಿ, ಸತೀಶ್ ಎನ್. ಬಂಗೇರ, ದುರ್ಗಪ್ಪ ಕೋಟಿಯವರ್, ಮಧುಸೂದನ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಹೆಗಡೆ ವಂದಿಸಿದರು.
ಸಾಧಿಸಿ ತೋರಿಸಿದವರುಕುಸುಮೋದರ ಶೆಟ್ಟಿ ಅವರು ಮುಂಬಯಿ ಕನ್ನಡಿಗರು ಹೆಮ್ಮೆಪಡುವಂತಹ, ನಿತ್ಯ ಸ್ಮರಿಸುವಂತಹ ಸಾಧನೆ ಮಾಡಿದವರು. ಕಷ್ಟದಿಂದ ಬದುಕು ಕಟ್ಟಿಕೊಂಡವರು. ಸಾಧಿಸಿದರೆ ಸಬಳ ನುಂಗಬಹುದು ಎನ್ನುವುದಕ್ಕೆ ನಿದರ್ಶನವಾಗಿ ಇವತ್ತು ನಮ್ಮೊಂದಿಗೆ ಕುಸುಮೋದರ ಶೆಟ್ಟಿ ಮತ್ತು ಶಿವರಾಮ ಭಂಡಾರಿ ಅವರಿದ್ದಾರೆ. ಇವರು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದವರು.
–ಡಾ| ಜಿ. ಎನ್. ಉಪಾಧ್ಯ, ಮುಖ್ಯಸ್ಥರು,
ಕನ್ನಡ ವಿಭಾಗ ಮುಂಬಯಿ ವಿವಿ