Advertisement

ಆ.1ರಿಂದ ದೇಶದ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪ್ರಕ್ರಿಯೆ?

04:02 AM Apr 29, 2020 | Hari Prasad |

ದೇಶದ ವಿಶ್ವವಿದ್ಯಾನಿಲಯಗಳ 2020-21ರ ಶೈಕ್ಷಣಿಕೆ ಪ್ರವೇಶ ಪ್ರಕ್ರಿಯೆಯನ್ನು ಆಗಸ್ಟ್‌ 1ರಿಂದ 31ರವರೆಗೆ ನಡೆಸುವಂತೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ಸಮಿತಿ ಶಿಫಾರಸು ಮಾಡಿದೆ.

Advertisement

‘ಹಳೆ /ಹೊಸ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಆ.1 ಮತ್ತು ಸೆ.1ರಂದು ಕ್ರಮವಾಗಿ ನಡೆಸಬಹುದು. ಪರೀಕ್ಷೆಗಳನ್ನು 2021ರ ಜ.1.ರಿಂದ 25ರ ಅವಧಿಯಲ್ಲಿ ನಡೆಸಬೇಕು. ಸೆಮಿಸ್ಟರ್‌ ಜ.27ರಿಂದ ಆರಂಭವಾಗಿ ಮೇ 27 ಮುಗಿಯುವಂತಿರಬೇಕು ಸೇರಿದಂತೆ ಹಲವು ವಿಷಯಗಳ ಕುರಿತಂತೆ ಸಮಿತಿ ಶಿಫಾರಸು ಮಾಡಿದೆ.

ಕೋವಿಡ್ 19 ವೈರಸ್‌ನಿಂದಾಗಿ ವಿವಿಧ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕೆ ಪ್ರಗತಿಗೆ ಹೊಡೆತ ಬಿದ್ದಿದೆ.
ಎರಡನೇ ಹಂತದ ಲಾಕ್‌ಡೌನ್‌ ಮುಂದುವರಿದುದರಿಂದ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯನ್ನಿಟ್ಟು ಕೊಂಡು ಸೂಕ್ತ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

ಮಕ್ಕಳಿಗೆ ಬಿಸಿಯೂಟ: ಶಾಲೆಗಳಲ್ಲಿ ಬೇಸಗೆ ರಜೆಯ ಅವಧಿಯಲ್ಲೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಹೇಳಿದ್ದಾರೆ.

ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ಮಂಗಳವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ. ಜತೆಗೆ, 10 ಮತ್ತು 12ನೇ ತರಗತಿಯ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಆರಂಭಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next