Advertisement
2022 ರ ಮಾರ್ಚ್‌ನಲ್ಲಿ ಖೇಲೋ ಇಂಡಿಯಾದ ಯೂನಿವರ್ಸಿಟಿ ಗೇಮ್ಸ್ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳ ಜೊತೆ ತೆರಳಿ ಅಧಿಕೃತವಾಗಿ ಆಹ್ವಾನ ನೀಡಲಾಗುವುದು ಎಂದು ಸಚಿವ ಡಾ. ನಾರಾಯಣ ಗೌಡ ಅವರು ತಿಳಿಸಿದರು.
ಕೇಂದ್ರ ಕ್ರೀಡಾ ಸಚಿವರ ಉಪಸ್ಥಿತಿಯಲ್ಲಿ ಲೋಗೋ ಮತ್ತು ಥೀಮ್ ಸಾಂಗ್ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
Related Articles
Advertisement
ಒಟ್ಟು 20 ಕ್ರೀಡೆಗಳು ನಡೆಯಲಿದ್ದು, ಸುಮಾರು 12 ಕ್ರೀಡೆಗಳು ಜೈನ್ ವಿವಿಯಲ್ಲಿ ನಡೆಯಲಿವೆ. ಉಳಿದಂತೆ ಕಂಠೀರವ ಕ್ರೀಡಾಂಗಣ, ಸ್ಪೋರ್ಟ್ ಸ್ಕೂಲ್, ಸಾಯ್‌ನಲ್ಲಿ ವಿವಿಧ ಕ್ರೀಡೆಗಳು ನಡೆಯಲಿವೆ. ಅದಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸುವ ಬಗ್ಗೆ ಸಚಿವ ಡಾ. ನಾರಾಯಣ ಗೌಡ ಅವರು ಮಾಹಿತಿ ಪಡೆದರು.
ವಿಜಯಪುರದಲ್ಲಿ ಸೈಕ್ಲಿಂಗ್ ನಡೆಸಲು ಸಾಧ್ಯಸಾಧ್ಯತೆ ಬಗ್ಗೆ ವರದಿ ನೀಡುವಂತೆ ಸೂಚಿಸಿದರು. ಸಾಧ್ಯವಾದರೇ ಸೈಕ್ಲಿಂಗ್ ಸ್ಪರ್ಧೆಯನ್ನು ವಿಜಯಪುರದಲ್ಲೇ ಆಯೋಜಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ನಾರಾಯಣ ಗೌಡ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕಾರ್ಯಕ್ರಮ ಇದಾಗಿದ್ದು, ಯಶಸ್ವಿಗೊಳಿಸಿದರೆ ಕರ್ನಾಟಕಕ್ಕೆ ಉತ್ತಮ ಹೆಸರು ಬರಲಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ. ಖೇಲೋ ಇಂಡಿಯಾ ಎರಡನೇ ಆವೃತ್ತಿಯನ್ನು ಯಶಸ್ವಿಗೊಳಿಸಲು ಹಣಕಾಸು ಸೇರಿದಂತೆ ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುತ್ತದೆ ಎಂದು ಸಚಿವ ನಾರಾಯಣ ಗೌಡ ಅವರು ತಿಳಿಸಿದರು.
ಯುವ ಸಬಲೀಕರಣ, ಕ್ರೀಡಾ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ, ಜೈನ್ ವಿವಿ ಚಾನ್ಸಲರ್ ಚೆನ್‌ರಾಜ್ ರಾಯ್‌ಚಂದ್ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು