Advertisement

ಎನ್‌ಇಪಿ ಪರಿಣಾಮಕಾರಿ ಜಾರಿಗೆ ವಿವಿ ನಿರ್ಧಾರ

02:58 PM Sep 27, 2020 | Suhan S |

ಮೈಸೂರು: ಮೈಸೂರು ವಿಶ್ವವಿದ್ಯಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಪ್ರಾಯೋಗಿಕವಾಗಿ, ಪರಿಣಾಮಕಾರಿಯಾಗಿ ಜಾರಿ ಮಾಡಲು ನಿರ್ಧರಿಸಿದ್ದು, ತಜ್ಞರ ಸಲಹೆ ಪಡೆಯಲು ಸಲಹಾ ಸಮಿತಿ ರಚಿಸಲಾಗಿದೆ ಎಂದು ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಹೇಳಿದರು.

Advertisement

ಮೈವಿವಿ ಮತ್ತು ಮೈವಿವಿ ಶೈಕ್ಷಿಕ್‌ ಸಂಘ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಕಾರ್ಯಪಡೆ: ಎನ್‌ಇಪಿ ಜಾರಿಗಾಗಿ 20 ಅಧ್ಯಾಪಕರು,10 ಜನ ವಿವಿಧ ಅಧ್ಯಯನ ವಿಭಾಗದ ಮುಖ್ಯಸ್ಥರನ್ನು  ಒಳಗೊಂಡಕಾರ್ಯಪಡೆ ರಚಿಸಿದ್ದು,ಇದು ಶೀಘ್ರದಲ್ಲೇ ಮೊದಲ ಸಭೆ ಸೇರಿ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.

ಎನ್‌ಇಪಿ ಉತ್ತಮ ನೀತಿಯಾಗಿದ್ದು, ಇದನ್ನು ಮುಂದಿನ 30 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಗುರುತರ ಬದಲಾವಣೆಗಾಗಿ ರೂಪಿಸಲಾಗಿದೆ. ಇದರ ಅನುಷ್ಠಾನದಲ್ಲಿ ಸರ್ಕಾರ, ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಇದನ್ನು ಹಂತ ಹಂತವಾಗಿ ಮೈಗೂಡಿಸಿಕೊಳ್ಳಬೇಕಿದ್ದು, ಇದರ ಪ್ರತಿಫ‌ಲ ಕೇವಲ ಎರಡೂ¾ರು ವರ್ಷದಲ್ಲಿ ಸಿಗುವುದಿಲ್ಲ. ಅದಕ್ಕಾಗಿ 10 ವರ್ಷ ಕಾಯಬೇಕು. ಇದು ಸುಸ್ಥಿರ ಶಿಕ್ಷಣ ಅಭಿವೃದ್ಧಿಗೆ ನೆರವಾಗಲಿದೆ ಎಂದರು.

ತ್ರಿಭಾಷಾ ಸೂತ್ರ: ರಾಜ್ಯ ಸರ್ಕಾರದ ಎನ್‌ಇಪಿ ಕಾರ್ಯಪಡೆಯ ಸದಸ್ಯ, ಎಂಎಲ್‌ಸಿ ಅರುಣ್‌ ಶಹಾಪುರ ಮಾತನಾಡಿ, ಭಾಷೆಯ ಭಾವನಾತ್ಮಕ ವಿಷಯ ಇಟ್ಟುಕೊಟ್ಟು ಕೆಲವರು ಎನ್‌ಇಪಿ ಕುರಿತು ವಿವಾದ, ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ನೀತಿಯ ಮೂಲಕ ಹಿಂದಿ, ಸಂಸ್ಕೃತ ಹೇರಿಕೆ ಮಾಡುತ್ತಿಲ್ಲ. ಈಗಾಗಲೇ ತ್ರಿಭಾಷಾ ಸೂತ್ರ ಜಾರಿ ಇರುವಕರ್ನಾಟಕಕ್ಕೆ ಏನು ವ್ಯತ್ಯಾಸವಾಗುವುದಿಲ್ಲ. ತಮಿಳುನಾಡು ಹೊರತುಪಡಿಸಿ ಯಾವುದೇ ರಾಜ್ಯಗಳಲ್ಲೂ ತ್ರಿಭಾಷಾ ಸೂತ್ರದ ಸಮಸ್ಯೆ ಇಲ್ಲ ಎಂದು ಹೇಳಿದರು.

ಕಲಿಕೆ ಆಯ್ಕೆ ಸ್ವಾತಂತ್ರ್ಯ: ಎನ್‌ಇಪಿಯಲ್ಲಿ ಈಗಿನ ಶಿಕ್ಷಣ ವ್ಯವಸ್ಥೆಯನ್ನು ವಿಭಜಿಸುವ, ಹೊಸದಾಗಿ ಜೋಡಿಸುವ ಪ್ರಕ್ರಿಯೆ ಇರಲ್ಲ. ಪ್ರಸ್ತುತ ವ್ಯವಸ್ಥೆ ಹಾಗೇ ಮುಂದುವರಿಯಲಿದೆ. ಬೋಧನಾ ಪಠ್ಯಕ್ರಮ ಮಾತ್ರ ಬದಲಾಗಲಿದೆ. ವಿಷಯಗಳ ಕಲಿಕಾ ಆಯ್ಕೆ ಸ್ವಾತಂತ್ರ್ಯ ಮಕ್ಕಳಿಗೆ ಸಿಗಲಿದೆ. ಪಿಯುಸಿ ಹಂತದಲ್ಲಿರುವ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳು ಇಲ್ಲ. 9ನೇ ತರಗತಿಯಿಂದ ಎಲ್ಲರೂ ಈ ವಿಷಯಗಳನ್ನು ಕಲಿಯಲು ಅವಕಾಶ ದೊರೆಯಲಿದೆ. ಇದು ಮಕ್ಕಳ ಆಸಕ್ತಿಯನ್ನು ಗುರುತಿಸಲು ನೆರವಾಗಲಿದ್ದು, ಇದರ ಸಹಾಯದಿಂದ ಪದವಿಯಲ್ಲಿ ನೆಚ್ಚಿನ ವಿಷಯಗಳ ಕಲಿಕೆಗೆ ದಾರಿ ತೋರಿಸಲಿದೆ ಎಂದು ವಿವರಿಸಿದರು.

Advertisement

1968, 1986, 1992ರಲ್ಲಿ ಈ ಹಿಂದಿನ ಕೇಂದ್ರ ಸರ್ಕಾರಗಳು ಶಿಕ್ಷಣ ನೀತಿಗಳನ್ನು ಜಾರಿಗೆ ತಂದಿದ್ದವು. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಈವರೆಗೂ ಮಹತ್ವದ ಬದಲಾವಣೆಯಾಗಿಲ್ಲ. ಆದರೆ, ಈ ಹೊಸ ನೀತಿ ಶಿಕ್ಷಣ ಕ್ಷೇತ್ರದ ಪರಿವರ್ತನೆಗೆ ಕಾರಣವಾಗಲಿದೆ. ವಿಜ್ಞಾನಿ ಡಾ.ಕಸ್ತೂರಿ ರಂಗನ್‌ ನೇತೃತ್ವದ ತಂಡವು 16 ತಿಂಗಳು ಶ್ರಮ ವಹಿಸಿ ಕರ್ನಾಟಕದ ಶೈಕ್ಷಣಿಕ ಸಾಲಿನ ಯಶಸ್ವಿ ಮಾದರಿಗಳನ್ನು ಅನುಸರಿಸಿ, 2 ಲಕ್ಷದಷ್ಟು ಸಲಹೆ ಪಡೆದು 65 ಪುಟಗಳ ಶಿಕ್ಷಣ ನೀತಿ ರೂಪಿಸಲಾಗಿದೆ. ಇದು ಕೇಂದ್ರ ಸರ್ಕಾರ ನೀಡಿರುವ ಅಮೃತ ಎಂದು ವಿಶ್ಲೇಷಿಸಿದರು. ಅಖೀಲ ಭಾರತೀಯ ರಾಷ್ಟ್ರೀಯಶೈಕ್ಷಿಕ್‌ಮಹಾಸಂಘದಪ್ರಧಾನಕಾರ್ಯದರ್ಶಿ ಶಿವಾನಂದ ಸಿಂಧನಕೇರಾ, ಮೈವಿವಿ ಕುಲಸಚಿವ ಪ್ರೊ. ಆರ್‌.ಶಿವಪ್ಪ, ಕಾನೂನು ವಿಭಾಗ ಮತ್ತು ಕಾನೂನು ಶಾಲೆಯ ಅಧ್ಯಕ್ಷ ಪ್ರೊ.ಸಿ.ಬಸವರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next