Advertisement

ಜೆಸಿಟಿಯುನಿಂದ ಜ.8ರಂದು ಸಾರ್ವತ್ರಿಕ ಮುಷ್ಕರ

03:51 PM Dec 06, 2019 | Suhan S |

ಬಂಗಾರಪೇಟೆ: ದೇಶದಲ್ಲಿ ದುಡಿಯುವ ವರ್ಗದ ರಕ್ಷಣೆಗೆ ಪರ್ಯಾಯ ಆರ್ಥಿಕ ನೀತಿಗಳ ಅನುಷ್ಠಾನಕ್ಕಾಗಿ 12 ಅಂಶಗಳ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಜ.8 ರಂದು ಜೆಸಿಟಿಯುನಿಂದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ನಡೆಸಲಾಗುತ್ತಿದೆ.

Advertisement

ಅದರಲ್ಲಿಕಾರ್ಮಿಕರು ಭಾಗವಹಿಸಬೇಕೆಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಶ್ರೀನಿವಾಸ್‌ ಮನವಿ ಮಾಡಿದರು. ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಆವರಣದಲ್ಲಿ ಸಭೆ ಸೇರಿ ಮುಖಂಡರೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕೇಂದ್ರ ಸರ್ಕಾರವು ರಕ್ಷಣೆ ಮಾಡುತ್ತಿಲ್ಲ. ಇದರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಕಾರ್ಮಿಕರ ರಕ್ಷಣೆಗಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ದೇಶದಲ್ಲಿ ಗುತ್ತಿಗೆ ಪದ್ಧತಿ ನಿಯಂತ್ರಣಕ್ಕಾಗಿ, ಕೂಲಿಕಾರ್ಮಿಕರಿಗೆ ಸಮಾನ ವೇತನಕ್ಕಾಗಿ, ಗುತ್ತಿಗೆಯನ್ನು ಕಾಯಂಗೆ ಶಾಸನ ಮಾಡಲು ಹಾಗೂ ಎಫ್ಟಿಇ, ನೀಮ್‌, ನೀಸಾ ಮುಂತಾದ ಪದ್ಧತಿ ರದ್ದು ಮಾಡಬೇಕು. ಕಾರ್ಪೊರೇಟ್‌ ಬಂಡವಾಳ ಪರ ಕಾರ್ಮಿಕ ವಿರೋಧಿ ಕಾನೂನುಗಳ ಸಂಹಿತೀಕರಣವನ್ನು ವಿರೋಧಿಸಲು ಹಾಗೂ ಕಟ್ಟುನಿಟ್ಟಿನ ಕಾನೂನು ಜಾರಿ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಲು ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಿಐಟಿಯು ತಾಲೂಕು ಸಂಚಾಲಕ ಕೇಶವರಾವ್‌, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ ಶ್ರೀನಿವಾಸ್‌, ಎಐಸಿಸಿಟಿಯು ಪ್ರಭು, ಶಿವು, ಅಪ್ಪಯ್ಯಣ್ಣ, ಹನುಮಂತರಾಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next