Advertisement

Puttige Sri: ವಿಶ್ವಾದ್ಯಂತ ಸನಾತನ ಧರ್ಮ ಸತ್ವಯುತ: ಪುತ್ತಿಗೆ ಶ್ರೀ

11:38 PM Sep 24, 2023 | Team Udayavani |

ಬೆಂಗಳೂರು: ಪ್ರಪಂಚದಾದ್ಯಂತ ನಿಂತು ಸನಾತನ ಧರ್ಮವನ್ನು ನೋಡಿದರೆ ಅದರ ಮಹತ್ವವನ್ನು ಗುರುತಿಸಲು ಸಾಧ್ಯ. ಸನಾತನ ಧರ್ಮ ವಿಶ್ವಾದ್ಯಂತ ಒಳ್ಳೆಯ ಸತ್ವಗಳಿಂದ ಕೂಡಿದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.

Advertisement

ತಮ್ಮ ಚಾತುರ್ಮಾಸ್ಯ ಸಮಾರೋಪ ಸಮಾರಂಭದ ಅಂಗವಾಗಿ ಬಸವನಗುಡಿಯ ಗೋವರ್ಧನ ಕ್ಷೇತ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕನಕಾಭಿಷೇಕ ಪೂರ್ವಕ ಗುರು ವಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ವಿಚಾರಧಾರೆ, ಸಾಂಸ್ಕೃತಿಕ ಮೌಲ್ಯಗಳು, ಚಿಂತನಾ ಲಹರೆ ಎಷ್ಟೊಂದು ಮಾನ್ಯವಾಗಿದೆ ಎಂಬುದನ್ನು ಜಗತ್ತು ಒಳಗಿಂದೊಳಗೆ ಗುರುತಿಸುತ್ತಿದೆ. ಪ್ರಪಂಚದ 28 ದೇಶಗಳಲ್ಲಿ ಸಂಚರಿಸಿ ಅನೇಕ ದೇಶಗಳ ನಾಯಕರನ್ನೂ ಭೇಟಿಯಾಗಿದ್ದೇವೆ. ಅವರಿಗೆ ಸನಾತನ ಧರ್ಮದ
ಬಗ್ಗೆ ಇರುವ ಗೌರವಾದರಗಳನ್ನು ನೋಡಿ ಬೆರಗಾಗಿದ್ದೇವೆ ಎಂದು ತಿಳಿಸಿದರು.

ವಿಶ್ವದಲ್ಲೇ ಸದ್ಭಾವನೆ ಮೂಡಿಸಿದ ಪುತ್ತಿಗೆ ಶ್ರೀ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂ ರಾವ್‌ ಮಾತನಾಡಿ, ವಿಶೇಷವಾದ ಧರ್ಮದ ವಿಚಾರಗಳನ್ನು ತೆಗೆದು ಕೊಂಡು ಅಂತಾರಾಷ್ಟ್ರೀಯಮಟ್ಟದ ದೊಡ್ಡ ಸಭೆಗಳಲ್ಲಿ ಭಾಗಿಯಾಗಿ ದೇಶದ, ಧರ್ಮದ ಪ್ರತಿಪಾದನೆ ಮಾಡಿದ್ದಾರೆ. ಇದರ ಜತೆಗೆ ವಿಶ್ವದಲ್ಲಿ ಕ್ರಾಂತಿ, ಸದ್ಭಾವನೆ ಮೂಡಿಸುವ ಕೆಲಸವನ್ನು ಪುತ್ತಿಗೆ ಶ್ರೀಗಳು ಮಾಡಿದ್ದಾರೆ. ಬಹುತೇಕ ಸ್ವಾಮೀಜಿಗಳು ಅವರ ಇತಿಮಿತಿಗಳಲ್ಲೇ ಇರುತ್ತಾರೆ. ಆದರೆ ಪುತ್ತಿಗೆ ಶ್ರೀಗಳು ಜನರ ಬಳಿ ಹೋಗುವ ಕೆಲಸ ಮಾಡಿದ್ದಾರೆ. ಇಂದು ಸ್ವಾಮೀಜಿ ಕೈಗೊಂಡಿರುವ ಕೋಟಿ ಗೀತ ಲೇಖನ ಯಜ್ಞವು ನಮ್ಮ ಧರ್ಮದಲ್ಲಿರುವ ಅಂಶಗಳನ್ನು ಆಳವಾಗಿ ಅಧ್ಯಯನ ಮಾಡಲು ಪ್ರೋತ್ಸಾಹ ನೀಡಿದಂತಾಗಿದೆ. ಹೊಸ ಪೀಳಿಗೆಗೆ ಭಗವದ್ಗೀತೆ ಬಗ್ಗೆ ತಿಳಿದುಕೊಳ್ಳಲು ಸ್ವಾಮೀಜಿ ಮಾಡಿರುವ ಕಾರ್ಯ ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ವಿಧಾನ ಪರಿಷತ್ತು ಸದಸ್ಯ ಯು.ಬಿ. ವೆಂಕಟೇಶ್‌, ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಎಸ್‌.ಅಹಲ್ಯ, ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌
ಬಾಬು, ಮಂಜುನಾಥ್‌, ಹಯಗ್ರೀವ ಆಚಾರ್‌ ಮತ್ತಿತರರು ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next