Advertisement
ಇದನ್ನೂ ಓದಿ:ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆ ಯತ್ನ: ಪತಿ ಸ್ಥಳದಲ್ಲೇ ಸಾವು, ಪತ್ನಿ ಗಂಭೀರ
Related Articles
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ(ಫೆ.04, 2021) ಉತ್ತರಪ್ರದೇಶದ ಗೋರಖ್ ಪುರ್ ಜಿಲ್ಲೆಯಲ್ಲಿ ಚೌರಿ-ಚೌರಾ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು.
ಚೌರಿ ಚೌರಾ ಹುತಾತ್ಮರ ಸ್ಮರಣಾರ್ಥವಾಗಿ ಉತ್ತರಪ್ರದೇಶ ಸರ್ಕಾರ ಎಲ್ಲಾ 74 ಜಿಲ್ಲೆಗಳಲ್ಲಿ ವರ್ಷ ಪೂರ್ತಿ ಸಮಾರಂಭ ನಡೆಸಲು ನಿರ್ಧರಿಸಿದೆ.
ಏನಿದು ಚೌರಿ-ಚೌರಾ ಘಟನೆ?
ಗೋರಖ್ ಪುರ್ ಜಿಲ್ಲೆಯ ಚೌರಿ-ಚೌರಾ ಪ್ರದೇಶದಲ್ಲಿ 1922ರ ಫೆಬ್ರುವರಿ 4ರಂದು ನಡೆದ ಭೀಕರ ಘಟನೆ ಇದಾಗಿದೆ. ಮಹಾತ್ಮಗಾಂಧಿ ನೀಡಿದ್ದ ಅಸಹಕಾರ ಚಳವಳಿ ಕರೆ ಹಿನ್ನೆಲೆಯಲ್ಲಿ ಚೌರಾ-ಚೌರಾದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಏರ್ಪಟ್ಟಾಗ ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಮೂವರು ನಾಗರಿಕರು ಹಾಗೂ 22 ಪೊಲೀಸರು ಸಾವನ್ನಪ್ಪಿದ್ದರು.