Advertisement
ನಗರದಲ್ಲಿ ಶನಿವಾರ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿ ಬೃಹತ್ ರ್ಯಾಲಿ ಆಯೋಜಿಸುವುದು ಹಾಗೂ ಮಠಾಧೀಶರೆಲ್ಲ ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಒಕ್ಕೊರಲಿನಿಂದ ಹೋರಾಟಕ್ಕೆ ನಿಲ್ಲಬೇಕೆಂದು ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಲಿಂಗಾಯತ ಮುಖಂಡರು ಸ್ವತಂತ್ರ ಧರ್ಮ ಅವಶ್ಯಕತೆ ಕುರಿತು ಗಂಭೀರ ಚರ್ಚೆ ನಡೆಸಿದರು. ಅಂತಿಮವಾಗಿ ಕೂಡಲ ಸಂಗಮದಲ್ಲಿ ಆಗಸ್ಟ್ 22ರಂದು ಸಭೆ ನಡೆಸಲು, ನಿಯೋಗದೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮನವಿ ಮಾಡುವುದು, ರಾಜ್ಯಮಟ್ಟದ ಹೋರಾಟ ಸಮಿತಿ ರಚಿಸುವುದು, ಮಠಾಧೀಶರೆಲ್ಲ ಒಗ್ಗೂಡಬೇಕೆಂಬ ಪ್ರಮುಖ ನಿರ್ಣಯಗಳನ್ನು ಕೈಗೊಂಡರು. ಲಿಂಗಾಯತ, ವೀರಶೈವ ವಿಚಾರವಾಗಿ ಸದ್ಯಕ್ಕೆ ನಾವು ಏನನ್ನೂ ಹೇಳುವುದಿಲ್ಲ. ಶಿವಯೋಗ ಮಂದಿರದ ಸದಸ್ಯರು ನಾವಾಗಿದ್ದು ಮಂದಿರದ ಅಧ್ಯಕ್ಷರ ನೇತೃತ್ವದಲ್ಲಿ ಶೀಘ್ರದಲ್ಲೇ ಸಭೆ ಸೇರಿ ಚರ್ಚಿಸಿ, ನಮ್ಮ ತೀರ್ಮಾನ ತಿಳಿಸುತ್ತೇವೆ.
– ಶ್ರೀ ಸದಾಶಿವ ಸ್ವಾಮೀಜಿ, ಹಾವೇರಿ