Advertisement

ನನ್ನ ಸೋಲಿಗೆ ಚೀನ ಸಂಚು ; ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಭೀರ ಆರೋಪ

08:26 AM May 02, 2020 | Hari Prasad |

ಅಮೆರಿಕದಲ್ಲಿ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪ್ರಭಾವ ಬೀರಿದ್ದರು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದರು.

Advertisement

ಜಗತ್ತಿಗೆ ಕೋವಿಡ್ 19 ವೈರಸ್ ವ್ಯಾಪಿಸಲು ಚೀನವೇ ಕಾರಣ ಎಂದು ಟೀಕೆ ಮಾಡುತ್ತಿರುವ ಟ್ರಂಪ್‌ ವರ್ಷಾಂತ್ಯದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಯತ್ನಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಕಾರಣಕ್ಕಾಗಿಯೇ ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡನ್‌ಗೆ ಬೆಂಬಲ ನೀಡಿ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸುವಂತೆ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಟ್ರಂಪ್‌ ದೂರಿದ್ದಾರೆ.

‘ರಾಯಿಟರ್ಸ್‌’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಕೋವಿಡ್ 19 ವೈರಸ್ ನಿಯಂತ್ರಿಸುವಲ್ಲಿ ವಿಫ‌ಲವಾಗಿದೆ ಎನ್ನುವುದು ಜಗತ್ತಿಗೇ ಗೊತ್ತಿದೆ. ಚೀನ ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ, ಶ್ವೇತಭವನದಲ್ಲಿ ಡೆಮಾಕ್ರಾಟಿಕ್‌ ಪಕ್ಷದ ಅಭ್ಯರ್ಥಿಯನ್ನು ಸ್ಥಾಪಿಸಲು ಯತ್ನಿಸುತ್ತಿದೆ’ ಎಂದಿದ್ದಾರೆ. ಚೀನ ವಿರುದ್ಧ ಕ್ರಮಕ್ಕೆ ಸಮರ್ಥನಿರುವುದಾಗಿ ತಿಳಿಸಿದ್ದಾರೆ.

ವಾಪಸಾತಿಗೆ ಕ್ರಮ: ಲಾಕ್‌ಡೌನ್‌ ತೆರವಿನ ನಂತರ ಭಾರತಕ್ಕೆ ವಾಪಸಾಗಲು ಇಚ್ಛಿಸುತ್ತಿರುವ ಅಮೆರಿಕದಲ್ಲಿನ ಭಾರತೀಯರ ಬಗ್ಗೆ ಇಲ್ಲಿನ ಭಾರತದ ರಾಯಭಾರ ಕಚೇರಿ ಮಾಹಿತಿ ಸಂಗ್ರಹಿಸುತ್ತಿದೆ.

Advertisement

ಲಾಕ್‌ಡೌನ್‌ ತೆರವಿನ ನಂತರ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್‌ ಕರೆತರಲು ಕ್ರಮ ಕೈಗೊಳ್ಳಲಾಗುವುದು ಎಂಬ ಭಾರತ ಸರ್ಕಾರದ ನಿಲುವಿನ ಹಿನ್ನೆಲೆಯಲ್ಲಿ ರಾಯಭಾರ ಕಚೇರಿ ಈ ಕ್ರಮಕ್ಕೆ ಮುಂದಾಗಿದೆ.

ಜೂನ್‌ ವರೆಗೆ ಬ್ರಿಟನ್‌ಗೆ ಲಾಕ್‌?
ಬ್ರಿಟನ್‌ನಲ್ಲಿ ಮೇ 7ಕ್ಕೆ ಲಾಕ್‌ಡೌನ್‌ ಅವಧಿ ಪೂರ್ಣಗೊಳಲಿದೆ. ಇದೇ ವೇಳೆ ಸೋಂಕು ತೀವ್ರ ಪ್ರಮಾಣದಲ್ಲಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಕೊನೆಯವರೆಗೆ ಲಾಕ್‌ಡೌನ್‌ ವಿಸ್ತರಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಈ ಹಂತದಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದರೆ ಸಹಸ್ರಾರು ಮಂದಿ ಸೋಂಕಿನಿಂದ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಿರುವ ಪ್ರಧಾನಿ ಬೋರಿಸ್‌ ಜಾನ್ಸನ್‌ ಸಚಿವ ಸಂಪುಟ ಸಭೆ ನಡೆಸಿ ಯಥಾಸ್ಥಿತಿಯ ಮಾಹಿತಿ ಪಡೆದುಕೊಂಡಿದ್ದಾರೆ.

ಇದರ ಜತೆಗೆ ಎರಡನೇ ಆವೃತ್ತಿಯಲ್ಲಿ ಕೋವಿಡ್ 19 ವೈರಸ್ ಸೋಂಕು ಕಾಣಿಸಿಕೊಂಡರೆ ಅದರ ಪರಿಸ್ಥಿತಿ ಮತ್ತು ಪ್ರಭಾವ ಈಗ ಉಂಟಾಗಿರುವುದಕ್ಕಿಂತ ಭೀಕರವಾಗಿ ಇರಲಿದೆ ಎಂಬ ಅಂಶ ಹಲವು ವಲಯಗಳಿಂದ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next