ಬೀದರ: ಪ್ರತಿಯೊಬ್ಬ ಮನುಷ್ಯನಿಗೆ ಜೀವಿಸುವ ಹಕ್ಕಿದೆ. ಅದನ್ನು ಪರಿಪಾಲನೆ ಮಾಡಬೇಕೆಂದು ವಿಶ್ವ ಸಂಸ್ಥೆ ಈ ನಿಟ್ಟಿನಲ್ಲಿ ರಕ್ಷಣಾ ಕಾರ್ಯ ಮಾಡುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.
ನಗರದ ಸಿ.ವಿ. ರಾಮಣ್ಣ ಪಿ.ಯು. ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಭಾಗ್ಯವಂತಿ ಮೋಟಾರ್ ಡೈವಿಂಗ್ ಸ್ಕೂಲ್ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 1948 ಡಿ.10ರಂದು ಪ್ರಾರ್ಥನೆಗೊಂಡ ವಿಶ್ವ ಸಂಸ್ಥೆ ಒಂದು ದೇಶ ಇನ್ನೊಂದು ದೇಶದ ಮೇಲೆ ದಬ್ಟಾಳಿಕೆ ಮಾಡುವುದನ್ನು ನಿಯಂತ್ರಿಸಲು ಹೆಜ್ಜೆ ಇಟ್ಟಿತ್ತು. 1950ರಲ್ಲಿ ತನ್ನ ಕಾರ್ಯ ಪ್ರಾರಂಭಿಸಿತು. ವಿಶ್ವ ಮಾನವ ಹಕ್ಕುಗಳ ರಕ್ಷಣೆಗಾಗಿ ಮುಂದಾಗಿತ್ತು ಎಂದರು.
ಹಿರಿಯ ದಿವಾಣಿ ನ್ಯಾಯಾಧಿಧೀಶ ಆರ್. ರಾಘವೇಂದ್ರ ಮಾತನಾಡಿ, ಕಲಂ 371(ಜೆ), ಮೀಸಲಾತಿ ಪಡೆಯಲು ಜನನ ಪ್ರಮಾಣ ಪತ್ರದ ಅವಶ್ಯಕತೆ ಇದ್ದು, ದಾಖಲೆ ಇಲ್ಲದವರು ನ್ಯಾಯಾಲಯದ ಮೂಲಕ ಪಡೆಯಬಹುದಾಗಿದೆ ಎಂದು ಹೇಳಿದರು.
ನ್ಯಾಯವಾದಿ ವಿ.ಎಂ. ಪ್ರಕಾಶ ಮಾತನಾಡಿ, ಪರವಾನಗಿ ಇಲ್ಲದೆ ವಾಹನ ನಡೆಸಬಾರದು. ರಸ್ತೆ ಸುರಕ್ಷತೆಯ ನೀತಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು. ಡ್ರೈವಿಂಗ್ ಸ್ಕೂಲ್‌ನ ಪ್ರಾಂಶುಪಾಲ ಶಿವರಾಜ ಜಮಾದಾರ ಮಾತನಾಡಿ, ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ವಾಹನ ನಡೆಸಬೇಕು. ಮತ್ತು ಮೊಬೈಲ್ ಬಳಕೆ ಮಾಡಕೂಡದು ಎಂದರು.
ಕಾಲೇಜು ಪ್ರಾಂಶುಪಾಲ ಅನುರಾಧ ತತಪಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂದೀಪ ಮೂಳೆ ಸ್ವಾಗತಿಸಿದರು. ರಾಘವೇಂದ್ರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಶೆಟ್ಟಿ ಧರಂಪುರ ನಿರೂಪಿಸಿದರು. ಪ್ರವೀಣ ಬುಕ್ಕಾ ವಂದಿಸಿದರು.