Advertisement

ಆರೋಗ್ಯ ಸೇತು ಆ್ಯಪ್ ಗೆ ವಿಶ್ವಸಂಸ್ಥೆ ಮೆಚ್ಚುಗೆ

09:08 AM Apr 15, 2020 | Hari Prasad |

ಜಿನೇವಾ: ಕೋವಿಡ್ ವೈರಸ್ ಬಗ್ಗೆ ಜನಸಾಮಾನ್ಯರಿಗೆ ಉಪಯುಕ್ತ ಮಾಹಿತಿ ನೀಡುವುದರ ಜೊತೆಗೆ, ಈ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ‘ಆರೋಗ್ಯ ಸೇತು’ ಮೊಬೈಲ್‌ ಅಪ್ಲಿಕೇಷನ್‌ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

ದ ಸೌತ್‌ ಎಕನಾಮಿಕ್‌ ಫೋಕಸ್‌ ಎಂಬ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಿರುವ ವಿಶ್ವ ಬ್ಯಾಂಕ್‌, ‘ಇತ್ತೀಚೆಗೆ ಆರೋಗ್ಯ ಸೇತು ಎಂಬ ಮೊಬೈಲ್‌ ಆ್ಯಪ್‌ ಒಂದನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದೆ. ಇದರಿಂದ, ಮೊಬೈಲ್‌ನ ಮೂಲಕವೇ ಜನಸಾಮಾನ್ಯರು ತಮ್ಮ ಸುತ್ತಲಿನ ಸೋಂಕಿತರು ಹಾಗೂ ಸೋಂಕು ವಲಯಗಳನ್ನು ಗುರುತಿಸಬಹುದಾಗಿದೆ.

ಇದಲ್ಲದೆ, ಆ್ಯಪ್‌ನ ಮೂಲಕ ಕೋವಿಡ್ ವೈರಸ್ ಹರಡುವಿಕೆಯನ್ನು ಸರ್ಕಾರ ಸತತವಾಗಿ ಗಮನಿಸಬಹುದಾಗಿದೆ. ಹೀಗೆ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿದೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next