Advertisement

ಗುಜರಾತ್‌ ಸ್ಫೋಟದ ಆರೋಪಿ ಹನೀಫ್‌ ಹಸ್ತಾಂತರಕ್ಕೆ ಇಂಗ್ಲಂಡ್ ನಿರಾಕರಣೆ

08:46 AM May 19, 2020 | Hari Prasad |

ಲಂಡನ್: ಭಾರತದ ಹೈ ಪ್ರೊಫೈಲ್‌ ಪ್ರಕರಣ ಎನಿಸಿರುವ ಗುಜರಾತ್‌ ಸ್ಫೋಟದ ಆರೋಪಿ ಹಾಗೂ ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಬಂಟ ಟೈಗರ್‌ ಹನೀಫ್‌ನನ್ನು ಹಸ್ತಾಂತರಿಸಲು ಇಂಗ್ಲಂಡ್ ನಿರಾಕರಿಸಿದೆ.

Advertisement

1993ರಲ್ಲಿ ಗುಜರಾತ್‌ನಲ್ಲಿ ನಡೆದ ಎರಡು ಸ್ಫೋಟ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಟೈಗರ್‌ ಹನೀಫ್‌ ಅಲಿಯಾಸ್‌ ಹನೀಫ್‌ ಮೊಹಮ್ಮದ್‌ ಉಮರ್ಜಿ ಪಟೇಲ್‌ನನ್ನು 2010ರ ಮಾರ್ಚ್‌ ತಿಂಗಳು ಗ್ರೇಟರ್‌ ಮಾಂಚೆಸ್ಟರ್‌ನ ಬೋಲ್ಟನ್‌ ನಗರದಲ್ಲಿ ಬಂಧಿಸಲಾಗಿತ್ತು.

2012ರಲ್ಲಿ ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು. ಈ ಸಂಬಂಧ ಭಾರತ ಮಾಡಿದ್ದ ಹಸ್ತಾಂತರ ಮನವಿಯನ್ನು ಬ್ರಿಟನ್‌ ತಿರಸ್ಕರಿಸಿದೆ.

ಸ್ಫೋಟಕಗಳು, ಪಿಸ್ತೂಲುಗಳು ಮತ್ತು ಇತರ ಆಯುಧಗಳನ್ನು ಹೊಂದಿರುವ ಮುಸ್ಲಿಂ ಗುಂಪೊಂದರ ಸದಸ್ಯನಾಗಿರುವ ಹನೀಫ್‌, 1992ರ ಮಸೀದಿ ಧ್ವಂಸ ಸಂಬಂಧ ಪ್ರತಿಕಾರವಾಗಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಿದ್ದಾನೆ ಎಂದು ಅಹಮದಾಬಾದ್‌ ಹೈಕೋರ್ಟ್‌ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next