ಏನು ವಿಶೇಷ
ಈ ವರ್ಷ ಡಿಸೆಂಬರ್ 1 3ರವರೆಗೆ ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರೀಯ ದಿನ ಎಂದು ಆಚರಿಸಲಾಗುತ್ತದೆ. ಅಂದು ದೇಶವ್ಯಾಪಿ ಸರಕಾರಿ ಕಛೇರಿ, ಕಟ್ಟಡ ಹಾಗೂ ರಸ್ತೆಗಳ ಎರಡೂ ಬದಿಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಮಾತ್ರವಲ್ಲದೇ ಈ ಮೂರು ದಿನವನ್ನು ಸರಕಾರಿ ರಜಾ ದಿನವಾಗಿ ಘೋಷಿಸಲಾಗಿದೆ. ಚತುರ್ವರ್ಣ ಪತಾಕೆ ಕೊಲ್ಲಿ ರಾಷ್ಟ್ರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತವೆ. ಯುಎಇ ಜನತೆ ಸಂಭ್ರಮದಲ್ಲಿ ಈ ದಿನವನ್ನು ಕಳೆಯುತ್ತಾರೆ. ಯುಎಇಯ ನಾನಾ ಭಾಗಗಳಲ್ಲಿ ಇಲ್ಲಿನ ಕಲೆ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.
ಧ್ವಜದ ಸಂಕೇತ ಏನು?
ಅಬುಧಾಬಿ ಯುಎಇ ರಾಷ್ಟ್ರದ ರಾಜ್ಯಧಾನಿಯಾಗಿದೆ. ನಾಲ್ಕು ಬಣ್ಣಗಳಿಂದ ಕೂಡಿದ ಅಲ್ಲಿನ ರಾಷ್ಟ್ರಧ್ವಜ ಸಿದ್ಧಪಡಿಸಲಾಗಿದೆ. ಹಸಿರು, ಬಿಳಿ, ಕಪ್ಪು, ಕೆಂಪು ಬಣ್ಣದಿಂದ ತಯಾರಿಸಲಾಗಿದೆ. ಹಸಿರು ಫಲವತ್ತತೆ, ಬಿಳಿ ತಟಸ್ಥ ನೀತಿ (ಧೋರಣೆ), ಕಪ್ಪು ತೈಲ ಸಂಪತ್ತು, ಕೆಂಪು ರಕ್ತ ಮತ್ತು ಖಡ್ಗ ಎಂಬ ಸಂಕೇತದಿಂದ ಅದನ್ನು ವರ್ಣಿಸಲಾಗುತ್ತದೆ. 1966ರ ನಂತರ ಬಂಡವಾಳ ಹೂಡಿಕೆದಾರರ ಸಹಭಾಗಿತ್ವದಲ್ಲಿ ಸ್ಥಾಪನೆಯಾದ ತೈಲ ಸ್ಥಾವರಗಳು ಇಂದು ಜಗತ್ತಿನಾದ್ಯಂತ ಹೆಸರನ್ನು ಪಡೆದಿದೆ. ಅಲ್ಲಿನ ಅರಾಮೊಕ್ಕೋ ಸಂಸ್ಥೆ ಜಗತ್ತಿಗೆ ತೈಲವನ್ನು ಪೂರೈಕೆ ಮಾಡುತ್ತಿದೆ.
ಉದ್ಯೋಗ ದಾತ
ಈ ದೇಶಕ್ಕೆ ಉದ್ಯೋಗ ನಿಮಿತ್ತ ನಾನಾ ದೇಶಗಳ ಜನರನ್ನು ಆಕರ್ಷಿಸುತ್ತದೆ. ಪ್ರವಾಸೋದ್ಯಮದಲ್ಲೂ ಗಲ್ಫ್ ಖ್ಯಾತವಾಗಿದ್ದು, ಕಡಲ ಕಿನಾರೆ, ಆಕರ್ಷಕ ಕಟ್ಟಡ ಮತ್ತು ಹಸುರು ಉದ್ಯಾನವನಗಳಿಂದ ಬರುವ ತಂಪಾದ ಗಾಳಿಯನ್ನು ಸವಿಯಲು ಪ್ರವಾಸಿಗರು ಬರುತ್ತಾರೆ. ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್ ಸಂಸ್ಥಾನ ಅರಬ್ ರಾಷ್ಟ್ರ (ಯುಎಇ) ತೈಲ ಉತ್ಪಾದನೆಗೆ ಖ್ಯಾತವಾದ ನಾಡು. ಅಲ್ಲಿನ ದುಬೈ, ಅಬುಧಾಬಿ, ಶಾರ್ಜಾ ಹೆಚ್ಚು ಪ್ರಸಿದ್ಧ. ಕ್ರಿಕೇಟ್ ಪ್ರಿಯರಿಂದಾಗಿ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣ ಹೆಚ್ಚು ಪ್ರಚಲಿತದಲ್ಲಿದ್ದ ತಾಣವಾಗಿತ್ತು.
Advertisement
ಇಡೀ ಅರಬ್ ಸಂಯುಕ್ತ ರಾಷ್ಟ್ರವನ್ನೇ ವಿದ್ಯುತ್ ದೀಪ ಅಲಂಕಾರದಿಂದ ಸಿದ್ದಪಡಿಸಲಾಗಿತ್ತದೆ. ಬಣ್ಣ ಬಣ್ಣದ ದೀಪಗಳು, ನಗರದ ಪ್ರತಿ ಕಟ್ಟವನ್ನು ಆವರಿಸಿರುತ್ತದೆ. ಜತೆಗೆ ದೀಪಾವಳಿಯಂತೆ ಅಲ್ಲಿಯೂ ಮುಗಿಲೆತ್ತರದಲ್ಲಿ ಬಣ್ಣದ ಬೆಳಕಿನ ಚಿತ್ತಾರ ಮನಸೂರೆಗೊಳ್ಳಲಿದೆ. ರಜಾದಿನವಾದ ಕಾರಣ ಶಾಲೆ, ಕಾಲೇಜಿನ ಮಕ್ಕಳು, ಉದ್ಯೋಗಸ್ಥರು ಸೇರಿದಂತೆ ಎಲ್ಲರೂ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಉಡುಗೆ ಮತ್ತು ಕೈಯಲ್ಲಿ 4 ಬಣ್ಣದ ಧ್ವಜ ಹಿಡಿದುಕೊಂಡು ಸಂಭ್ರಮಿಸಲಿದ್ದಾರೆ.
ಈ ದಿನ ನಗರದ ವಿವಿಧೆಡೆ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿದ್ದು, ರಾಷ್ಟ್ರೀಯತೆಯನ್ನು ಅಭಿವ್ಯಕ್ತಪಡಿಸಲಿದ್ದಾರೆ. ದೇಶಾದ್ಯಂತ ಅತೀ ದೊಡ್ಡ ಕೇಕ್ ಸಿದ್ಧಪಡಿಸಿ ಅದರಲ್ಲಿ ಕ್ರೀಮ್ಗಳ ಸಹಾಯದಿಂದ 4 ಬಣ್ಣಗಳುಳ್ಳ ರಾಷ್ಟ್ರದ ಧ್ವಜವನ್ನು ಬಿಡಿಸಿ ಹುಟ್ಟು ಹಬ್ಬದ ಮಾದರಿಯಲ್ಲಿ ಕೇಕ್ ಕತ್ತರಿಸಿ ಜನರು ಸಂಭ್ರಮಿಸಲಿದ್ದಾರೆ. ಅಂದು ರಾಷ್ಟ್ರೀಯ ರಜಾದಿನ ವಾದ ಕಾರಣ ಹೆಚ್ಚು ಜನರು ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರೀಯ ದಿನದಲ್ಲಿ ಭಾಗಿಯಾಗಲಿದ್ದಾರೆ.