Advertisement
ಆಗ ಈ ಯುಎಇಯನ್ನು ಅಬುಧಾಬಿ, ಅಜ್ಮಾನ್, ಫುಜೆರ,ದುಬೈ, ಶಾರ್ಜಾ, ರಾಸ್ ಅಲ್ ಖೈಮಾ, ಉಮ್ಮಲ್ ಖೈಮ್ ಎಂಬ ಏಳು ಸಂಸ್ಥಾನಗಳಾಗಿ ವಿಂಗಡಣೆಯಾಯಿತು. ಆ ದಿನವನ್ನು ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.
Related Articles
ರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಅರಬ್‌ನಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಗಳು ರಂಗೇರುತ್ತಿದೆ. ಅಬುಧಾಬಿ ಯುಎಇ ರಾಷ್ಟ್ರದ ರಾಜ್ಯಧಾನಿಯಾಗಿದ್ದು ಎತ್ತ ನೋಡಿದರೂ ಸಂಭ್ರಮಗಳೇ ಕಾಣುತ್ತಿವೆ. ರಜಾದಿನವಾದ ಕಾರಣ ಕೋಟ್ಯಾಂತರ ಮಂದಿ ತಮ್ಮನ್ನು ಸಂಭ್ರಮದ ಕಡಲಿನಲ್ಲಿ ಒಂದಾಗಿಸಕೊಂಡಿದ್ದಾರೆ.
Advertisement
ಮೊದಲ ದಿನ ಸ್ಕೈಡೈವರ್ಸ್ ಮುಗಿಲೆತ್ತರದಿಂದ ಅರಬ್‌ನ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಸಾವಿರಾರು ಅಡಿ ಎತ್ತರವಿರುವ ಈ ಧ್ವಜವನ್ನು ಹಿಡಿದು ಬಾನಿನಿಂದ ಜಿಗಿದಿದ್ದಾರೆ. ಇದು ವಿಶ್ವದ ಅತೀ ದೊಡ್ಡ ಮತ್ತು ಮುಗಿಲೆತ್ತರದಿಂದ ಹಾರಾಡಿದ ಮೊದಲ ರಾಷ್ಟ್ರಧ್ವಜವಾಗಿದೆ.
ನಾಲ್ಕು ಬಣ್ಣಗಳಿಂದ ಕೂಡಿದ ಅಲ್ಲಿನ ರಾಷ್ಟ್ರಧ್ವಜ ಸಿದ್ಧಪಡಿಸಲಾಗಿದೆ. ಹಸಿರು, ಬಿಳಿ, ಕಪ್ಪು, ಕೆಂಪು ಬಣ್ಣದಿಂದ ತಯಾರಿಸಲಾಗಿದೆ. ಹಸಿರು-ಫಲವತ್ತತೆ, ಬಿಳಿ-ತಟಸ್ಥ ನೀತಿ (ಧೋರಣೆ), ಕಪ್ಪು-ತೈಲ ಸಂಪತ್ತು, ಕೆಂಪು-ರಕ್ತ ಮತ್ತು ಖಡ್ಗ ಎಂಬ ಸಂಕೇತದಿಂದ ಅದನ್ನು ವರ್ಣಿಸಲಾಗುತ್ತದೆ.
ಸಂಭ್ರಮದಲ್ಲಿ ಭಾರತೀಯರು
ಅರಬ್ ರಾಷ್ಟ್ರಗಳಿಗೆ ಉದ್ಯೋಗ ನಿಮಿತ್ತ ನಾನಾ ದೇಶಗಳ ಜನರು ತೆರಳುತ್ತಾರೆ. ಅಲ್ಲಿ ಭಾರತೀಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು, ಬಹುತೇಕರು ಕೇರಳದವರಾಗಿದ್ದಾರೆ. ಹೇಗಿದೆ ಸಂಭ್ರಮ
ಇಡೀ ಅರಬ್ ಸಂಯುಕ್ತ ರಾಷ್ಟ್ರವನ್ನೇ ವಿದ್ಯುತ್ ದೀಪ ಅಲಂಕಾರದಿಂದ ಸಿದ್ದಪಡಿಸಲಾಗಿದೆ. ಬಣ್ಣ ಬಣ್ಣದ ದೀಪಗಳು, ನಗರದ ಪ್ರತಿ ಕಟ್ಟವನ್ನು ಆವರಿಸಿದೆ. ಜತೆಗೆ ದೀಪಾವಳಿಯಂತೆ ಅಲ್ಲಿಯೂ ಮುಗಿಲೆತ್ತರದಲ್ಲಿ ಬಣ್ಣದ ಬೆಳಕಿನ ಚಿತ್ತಾರ ಮನಸೂರೆಗೊಂಡಿದೆ. ರಜಾದಿನವಾದ ಕಾರಣ ಶಾಲೆ, ಕಾಲೇಜಿನ ಮಕ್ಕಳು, ಉದ್ಯೋಗಸ್ಥರು ಸೇರಿದಂತೆ ಎಲ್ಲರೂ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಉಡುಗೆ ಮತ್ತು ಕೈಯಲ್ಲಿ 4 ಬಣ್ಣದ ಧ್ವಜ ಹಿಡಿದುಕೊಂಡು ರಸ್ತೆಯ ಇಕ್ಕೆಳಗಳಲ್ಲಿ ಓಡಾಡುತ್ತಿದ್ದಾರೆ. ನಗರದಾದ್ಯಂತ ವಿವಿಧೆಡೆ ಸಾಂಸ್ಕೃತಿಕ ಪ್ರದರ್ಶನಗಳು ನಡೆಯುತ್ತಿದ್ದು, ರಾಷ್ಟ್ರೀಯತೆಯ ಪ್ರದರ್ಶನಗೊಳ್ಳಲಿದೆ. ಕಳೆದ ವರ್ಷದಂತೆ ಈ ವರ್ಷವೂ ದೇಶಾದ್ಯಂತ ಅತೀ ದೊಡ್ಡ ಕೇಕ್ ಸಿದ್ಧಪಡಿಸಲಾಗಿದ್ದು, ಕ್ರೀಮ್‌ಗಳ ಸಹಾಯದಿಂದ 4 ಬಣ್ಣಗಳುಳ್ಳ ರಾಷ್ಟ್ರದ ಧ್ವಜವನ್ನು ಬಿಡಿಸಿ ಹುಟ್ಟು ಹಬ್ಬದ ಮಾದರಿಯಲ್ಲಿ ಕೇಕ್ ಕತ್ತರಿಸಿ ಜನರು ಸಂಭ್ರಮಿಸುತ್ತಿದ್ದಾರೆ. ಸ್ವದೇಶಿಯರ ಸಂಭ್ರಮಕ್ಕೆ ವಿದೇಶಿಗರು ನೀರೆರೆಯುತ್ತಿದ್ದಾರೆ.