Advertisement

ಯುನಿಟೆಕ್‌ ಕಂಪೆನಿಯ ಆಡಳಿತ ನಿರ್ದೇಶಕ ಸಂಜಯ್‌ ಚಂದ್ರ ಅರೆಸ್ಟ್‌

12:03 PM Apr 01, 2017 | udayavani editorial |

ಹೊಸದಿಲ್ಲಿ : ಯುನಿಟೆಕ್‌ ಕಂಪೆನಿಯ ಆಡಳಿತ ನಿರ್ದೇಶಕ ಸಂಜಯ್‌ ಚಂದ್ರ ಹಾಗೂ ಇನ್ನಿಬ್ಬರನ್ನು ಇಂದು ಶನಿವಾರ ಹಣಕಾಸು ಅಕ್ರಮಗಳನ್ನು ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.

Advertisement

ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗದವರು ಯುನಿಟೆಕ್‌ ಎಮ್‌ಡಿ ಚಂದ್ರ ಹಾಗೂ ಇನ್ನಿಬ್ಬರನ್ನು ಬಂಧಿಸಿದರು. 

ಚಂದ್ರ ಅವರು ದಿಲ್ಲಿಯ ಪಟಿಯಾಲಾ ಹೌಸ್‌ ಕೋರ್ಟ್‌ ನಲ್ಲಿ ವಿಚಾರಣೆಯನ್ನು ಎದುರಿಸಲಿದ್ದಾರೆ. 

ಚಂದ್ರ ಅವರು ಒಂದು ಪ್ರಾಜೆಕ್ಟ್ ಗೆ  ಮೀಸಲಾಗಿದ್ದ ಹಣವನ್ನು ಇನ್ನೊಂದಕ್ಕೆ ಕಾನೂನುಬಾಹಿರವಾಗಿ ಬಳಸುತ್ತಿದ್ದರು ಮತ್ತು ಹಣವನ್ನು ವಿದೇಶೀ ಖಾತೆಗಳಲ್ಲಿ  ಇಡುತ್ತಿದ್ದರು ಎಂಬ ಆರೋಪವನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next