Advertisement

ವಿನೂತನ ತುಳು -ಕನ್ನಡ ರಾಸ್‌ ಗರ್ಭಾ ದಾಂಡಿಯ

10:46 AM Oct 24, 2019 | mahesh |

ನಮ ಜವನೆರ್‌ – ಮೀರಾ ಭಾಯಂದರ್‌ ಸಂಸ್ಥೆಯು ತನ್ನ ವಾರ್ಷಿಕೋತ್ಸವದಲ್ಲಿ ವಿಶಿಷ್ಟವಾದ ಗುಜರಾತಿ ಹಾಗೂ ರಾಜಸ್ಥಾನಿ ರಾಸ್‌ ಗರ್ಭಾ ದಾಂಡಿಯಾವನ್ನು ಕನ್ನಡದ ಕೀರ್ತನೆಗಳಿಗೆ ಅಳವಡಿಸಿ ಹೊಸ ಶೈಲಿಯ ರಾಸ್‌ ಗರ್ಭಾ – ದಾಂಡಿಯಾವನ್ನು ಪ್ರಸ್ತುತ ಪಡಿಸಿತು .

Advertisement

ಈ ವರ್ಷ ಮೀರಾರೋಡ್‌ -ಭಯಾಂದರ್‌ ಪರಿಸರದ ತುಳು-ಕನ್ನಡಿಗರಿಗೆ ಕುಣಿತ ಭಜನೆ ಸ್ಪರ್ಧೆ ದಾಂಡಿಯಾ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಿತ್ತು . ಇದೊಂದು ವಿಶೇಷ ಪ್ರಯೋಗ . ಶರಣು ಶರಣು ಹೇ ಗಣಪನೇ … ಎಂದು ಆರಂಭವಾದ ವಿಜಯ ಶೆಟ್ಟಿ ಮೂಡುಬೆಳ್ಳೆ ಅವರ ಕಂಠಸಿರಿಯಿಂದ ಆರಂಭವಾದ ಹಾಡಿನೊಂದಿಗೆ ಗರ್ಭಾ – ದಾಂಡಿಯಾ ಪುಳಕಗೊಂಡಿತ್ತು . ಕನ್ನಡ ಕೀರ್ತನೆಗಳಿಗೆ ಗರ್ಭಾ ದಾಂಡಿಯಾದ ಸಂಗೀತದ ಅಳವಡಿಕೆ ತುಂಬಾ ಅಚ್ಚುಕಟ್ಟಾಗಿ ಮೂಡಿ ಬಂದು ಮೋಡಿ ಮಾಡಿತ್ತು. ವಿಜಯ ಶೆಟ್ಟಿಯವರೊಂದಿಗೆ ಹಾಡಿನಲ್ಲಿ ಸುನಿಲ್‌ ಶೆಟ್ಟಿ ಮುಲುಂಡ್‌ , ಶ್ರದ್ಧಾ ಬಂಗೇರ ಡೊಂಬಿವಿಲಿ ರಾಗ ಜೋಡಿಸಿದ್ದರು . ಕೀಬೋರ್ಡ್‌ ನಲ್ಲಿ ಯತಿರಾಜ್‌ ಉಪಾಧ್ಯಾಯ , ಕೆಜೋನ್‌ ಬಾಕ್ಸ್‌ ಮತ್ತು ಬೇಸ್‌ ಡ್ರಮ್ಸ…ನಲ್ಲಿ ಪದ್ಮರಾಜ್‌ ಉಪಾಧ್ಯಾಯ ಸಹಕರಿಸಿ¨ªಾರೆ. ಕಾರ್ತಿಕ್‌ ಭಟ್‌ ಕೊಳಲು ವಾದನದಲ್ಲಿ , ಪ್ರಶಾಂತ್‌ ರಾವ್‌ ಮತ್ತು ಅಜಿತ್‌ ಪಾಟೀಲ್‌ ಡ್ರಮ್ಸ…ನಲ್ಲಿ ಸಹಕರಿಸಿದರು. ಈ ಎಲ್ಲ ಸಂಗೀತದ ಲಯಕ್ಕೆ ತುಳು ಕನ್ನಡಿಗರು ಕುಣಿದದ್ದು ಚೆಲುವಾಗಿತ್ತು . ತಿರುಪತಿ ವೆಂಕಟರಮಣ , ಪಿಳ್ಳಂಗೋಪಿಯ ಚೆಲುವ ಕೃಷ್ಣ , ಲಿಂಗಯ್ಯ ಮಾತನಾಡೋ ಹಾಡುಗಳು ನೃತ್ಯಕ್ಕೆ ಇನ್ನೂ ಅಂದ ಕೊಟ್ಟಿದ್ದವು . ಈ ನಡುವೆ ಒಳ್ಳೆಯ ನೃತ್ಯ ಪಟು ಮತ್ತು ಒಳ್ಳೆಯ ಪೋಷಾಕು ಪಟುಗಳನ್ನು ಗುರುತಿಸಿ ಬಹುಮಾನವನ್ನು ನೀಡಿ ಪುರಸ್ಕರಿಸಲಾಯಿತು.

ಅಶೋಕ್‌ ವಳದೂರು

Advertisement

Udayavani is now on Telegram. Click here to join our channel and stay updated with the latest news.

Next