ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕ ಅತಿ ಹೆಚ್ಚು ಯಶಸ್ಸು ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಲಸಿತ ಮಾಲಿಂಗ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾರೆ.
ಇದೀಗ ಈ ಸಾಲಿಗೆ ಶ್ರೀಲಂಕಾದವರೇ ಆದ ಯುವ ಸ್ಪಿನ್ನರ್ ಕೆವಿನ್ ಕೊತ್ತಿಗೊಂಡ ಅವರ ಹೆಸರು ಸೇರ್ಪಡೆಗೊಂಡಿದೆ.
21ರ ಹರೆಯದ ಕೆವಿನ್ ಕೊತ್ತಗೊಂಡ ತಮ್ಮ ವಿಚಿತ್ರ ಬೌಲಿಂಗ್ ಶೈಲಿಯಿಂದ ಸುದ್ದಿಯಾಗಿದ್ದಾರೆ. ಗಾಲೆ ಮೂಲದವರಾದ ಕೆವಿನ್, ಅಬುಧಾಬಿ ಟಿ10 ಲೀಗ್‌ನಲ್ಲಿ ಬಾಂಗ್ಲಾ ಟೈಗರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ವಿಚಿತ್ರ ಶೈಲಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿ¨ªಾರೆ. ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆ್ಯಡಮ್ಸ್ ಬೌಲಿಂಗ್ ಶೈಲಿಯನ್ನು ಕೆವಿನ್ ಹೋಲುತ್ತಿ¨ªಾರೆ.
1995-96ರ ಇಂಗ್ಲೆಂಡ್ ಸರಣಿಯಲ್ಲಿ ಪಾಲ್ ಆ್ಯಡಮ್ಸ್ ವಿಚಿತ್ರ ಶೈಲಿಯ ಬೌಲಿಂಗ್ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದರು. ಇದೇ ಕಾರಣಕ್ಕಾಗಿ ಆ್ಯಡಮ್ಸ್ ಅವರು ಫ್ರಾಗ್ ಇನ್ ಎ ಬ್ಲೆಂಡರ್’ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದರು.
ಕೆವಿನ್ ತಮ್ಮ ಬೌಲಿಂಗ್ ಶೈಲಿಯ ಕುರಿತು ಮಾತನಾಡಿ ತಾನು ಪಾಲ್ ಆ್ಯಡಮ್ಸ್ ಬೌಲಿಂಗ್ ಶೈಲಿಯನ್ನು ಅನುಕರಿಸುತ್ತಿಲ್ಲ. ನನ್ನ ಬೌಲಿಂಗ್ ಹೆಚ್ಚು ಸುದ್ದಿಯಾದ ಬಳಿಕವಷ್ಟೇ ಪಾಲ್ ಆ್ಯಡಮ್ಸ್ ಬಗ್ಗೆ ತಿಳಿದುಕೊಂಡಿದ್ದೇನೆ. ನಾನು ಚಿಕ್ಕವನಿಂದಲೇ ಅಂಡರ್ 13, 15, 17 ಮತ್ತು 19 ಕ್ರಿಕೆಟ್‌ನಲ್ಲಿ ಇದೇ ರೀತಿಯ ಬೌಲಿಂಗ್ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.
ಆರಂಭದಲ್ಲಿ ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಡುತ್ತಿ¨ªೆ. ಬಳಿಕ ಇದೇ ಬೌಲಿಂಗ್ ಶೈಲಿಯನ್ನು ಹಾರ್ಡ್‌ಬಾಲ್‌ನಲ್ಲೂ ಕರಗತ ಮಾಡಿಕೊಂಡಿದ್ದೇನೆ ಎಂದರು. ಇನ್ನು ಭಾರತೀಯರ ಬೌಲರ್‌ಗಳ ಪೈಕಿ ಜಸ್‌ಪ್ರೀತ್ ಬುಮ್ರಾ ಕೂಡ ವಿಭಿನ್ನ ಬೌಲಿಂಗ್ ಶೈಲಿಯಿಂದಲೇ ವಿಶ್ವ ಕ್ರಿಕೆಟ್‌ನಲ್ಲಿ ಹೆಚ್ಚಿನ ಯಶಸ್ಸು ಗಳಿಸುತ್ತಿ¨ªಾರೆ.