Advertisement

ಆಧಾರ್‌ ಕಾರ್ಡ್‌ ಮ್ಯಾಜಿಕ್‌ :1,000 ಗ್ರಾಮಸ್ಥರ ಹುಟ್ಟಿದ ದಿನ ಜನವರಿ1

05:31 PM May 23, 2017 | udayavani editorial |

ಅಲಹಾಬಾದ್‌ : ಇಲ್ಲಿಂದ 50  ಕಿ.ಮೀ. ದೂರದಲ್ಲಿರುವ ಕಂಜಾಸಾ ಎಂಬ ಗ್ರಾಮದ 5,000 ನಿವಾಸಿಗಳು ಈಚೆಗೆ ಆಧಾರ್‌ ಕಾರ್ಡ್‌ ಪಡೆದುಕೊಂಡಿದ್ದರು. ಈ ಪೈಕಿ 1,000 ಮಂದಿಯ ಆಧಾರ್‌ ಕಾರ್ಡ್‌ನಲ್ಲಿ ಅವರ ಹುಟ್ಟಿದ ದಿನವನ್ನು ಸಾರಾ ಸಗಟಾಗಿ ಜನವರಿ 1 ರಂದು ಕಾಣಿಸಲಾಗಿದೆ.

Advertisement

ಆಧಾರ್‌ ಕಾರ್ಡ್‌ನಲ್ಲಿನ ಈ ದೋಷದ ಬಗ್ಗೆ ದೂರುಗಳ ಮಹಾಪೂರವೇ ಹರಿದು ಬರುತ್ತಿದ್ದು ಕಂಗಾಲಾಗಿರುವ ಅಧಿಕಾರಿಗಳು ಇದೀಗ ತನಿಖೆಗೆ ಆದೇಶಿಸಿದ್ದಾರೆ; ಜತೆಗೆ ಆಧಾರ್‌ ಕಾರ್ಡ್‌ನಲ್ಲಿನ ಜನ್ಮ ದಿನಾಂಕ ದೋಷವನ್ನು ಸರಿಪಡಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. 

ತಾಂತ್ರಿಕ ದೋಷದಿಂದಾಗಿ  1,000 ಜನರ ಹುಟ್ಟಿದ ದಿನಾಂಕ ಜನವರಿ 1 ಎಂದು ತಪ್ಪಾಗಿ ದಾಖಲಾಗಿರಬಹುದು; ಮೇಲಾಗಿ ಅನೇಕ ಗ್ರಾಮಸ್ಥರಿಗೆ ತಮ್ಮ ಹುಟ್ಟಿದ ದಿನಾಂಕವೇ ಗೊತ್ತಿಲ್ಲದಿರುವುದರಿಂದ ಅಂತಹವರ ಸಂದರ್ಭಗಳಲ್ಲಿ ಸಾರಾ ಸಗಟಾಗಿ ಜನವರಿ 1 ಎಂದು ದಾಖಲಾಗಿರಬಹುದು.ಹಾಗಿದ್ದರೂ ಸರಿಯಾಗಿ ಜನ್ಮ ದಿನ ದಾಖಲೆ ಕೊಟ್ಟವರ ಕಾರ್ಡ್‌ನಲ್ಲಿ ಕೂಡ ಜನವರಿ 1 ಎಂದು ದಾಖಲಾಗಿರುವುದು ಅಚ್ಚರಿಯ ವಿಷಯ ಎಂದು ಬ್ಲಾಕ್‌ ಡೆವಲಪ್‌ಮೆಂಟ್‌ ಆಫೀಸರ್‌ ನೀರಜ್‌ ದುಬೆ ಹೇಳಿದ್ದಾರೆ. 

ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ; ಯಾವ ಹಂತದಲ್ಲಿ ತಪ್ಪಾಗಿದೆ ಎಂಬುದನ್ನು ಕಂಡುಕೊಂಡ ಬಳಿಕ ಅದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next