Advertisement

ವಿಶಿಷ್ಟ ಪರಿಕಲ್ಪನೆ ಮಕ್ಕಳತ್ತ ಯಕ್ಷಗಾನ

04:34 PM Jun 06, 2019 | mahesh |

ಮಕ್ಕಳ ಯಕ್ಷಗಾನವನ್ನು ಆರಂಭಿಸಿದ ಮೊದಲ ಸಂಸ್ಥೆಯಾದ ಕರ್ನಾಟಕ ಕಲಾದರ್ಶಿನಿ ತಂಡ ಸಾಸ್ತಾನದಲ್ಲಿ ಮಕ್ಕಳತ್ತ ಯಕ್ಷಗಾನ ಎನ್ನುವ ವಿಶಿಷ್ಟ ಪರಿಕಲ್ಪನೆಯ ಯಕ್ಷಗಾನ ಶಿಬಿರವನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಬೆಳೆಸಲು ವಿನೂತನ ಕ್ರಮ ಅನುಸರಿಸಿದೆ.
ಮಕ್ಕಳಿಗಾಗಿ ಯಕ್ಷಗಾನ ಬೇಸಿಗೆ ಶಿಬಿರ ಏರ್ಪಡಿಸಿ ಆಸಕ್ತ ಮಕ್ಕಳಿಗೆ ಯಕ್ಷಗಾನದ ಆಸಕ್ತಿ ಮೂಡಿಸಲು ಮುಂದಾಗಿರುವುದು ಪ್ರಸಂಶಾರ್ಹ ಕಾರ್ಯ. ಹೊಸ್ತೋಟ ಮಂಜುನಾಥ ಭಾಗವತರು ಮಕ್ಕಳಿಗಾಗಿ ರಚಿಸಿದ ಸೇತುಬಂಧ ಯಕ್ಷಗಾನ ಪ್ರಸಂಗದ ಮೂಲಕ ಬೇಸಿಗೆ ಶಿಬಿರದ ಯಶಸ್ಸಿಗೆ ಸಂಸ್ಥೆ ಕಾರಣವಾಗಿದೆ. ಕಲಾದರ್ಶಿನಿಯ ನಿರ್ದೇಶಕ ಶ್ರೀನಿವಾಸ ಸಾಸ್ತಾನ ಅವರು ಹುಟ್ಟೂರಿನಲ್ಲಿ ಮಕ್ಕಳಲ್ಲಿ ಯಕ್ಷಗಾನ ಕಲೆಯನ್ನು ಬೆಳೆಸುವ ಕೈಂಕರ್ಯಕ್ಕೆ ಮುಂದಾಗಿರುವುದು ಪ್ರಸಂಸಾರ್ಹ.

Advertisement

ಶಿಬಿರದ ಕೊನೆಯ ದಿನ ನಡೆಸಲಾದ ಯಕ್ಷಗಾನ ಪ್ರದರ್ಶನದಲ್ಲಿ ರಾಮನಾಗಿ ಧನ್ಯಶ್ರೀ , ಲಕ್ಷ್ಮಣನಾಗಿ ಸಂಜನಾ ಉತ್ತಮ ಅಭಿನಯ ನೀಡಿದರೆ, ಸುಗ್ರೀವನಾಗಿ ದಿಶಾ ಗಾಂಭೀರ್ಯ ಹಾಗೂ ಪೂರಕ ನೃತ್ಯದೊಂದಿಗೆ ಸೇತುಬಂಧ ಕಾರ್ಯವನ್ನು ಮುನ್ನೆಡೆಸಿದ್ದಳು. ಸುಗ್ರೀವನ ಕಪಿ ಸೇನೆಯಲ್ಲಿದ್ದ ಮಾಣಿಕ್ಯ, ಸಮರ್ಥ, ಸಾತ್ಮಿಕ್‌, ಲಕ್ಷೀ, ಆದಿತ್ಯ, ಮನ್ವಿತ, ದರ್ಶನ್‌, ಮದನ್‌ ವೈವಿಧ್ಯಮಯ ಮುಖವರ್ಣಿಕೆ, ಚುರುಕಾದ ನರ್ತನ ಹಾಗೂ ಅಭಿನಯದಿಂದ ರಂಜಿಸಿದರು.

ಗೋವಿಂದ ಬ್ರಹ್ಮನಾಗಿ ಪಾರಂಪರಿಕ ವೇಷಭೂಷಣ ಹಾಗೂ ಉತ್ತಮ ಮಾತುಗಾರಿಕೆಯಿಂದ ಅಭಿನಯಿಸಿ ಜನಮನವನ್ನು ಮುಟ್ಟುವಲ್ಲಿ ಯಶಸ್ವಿಯಾದ. ಮೈನಾದೇವಿಯಾಗಿ ರಚಿತಾ , ಹನುಮಂತನಾಗಿ ದ್ರಶ್ಯಾ , ಈಶ್ವರನಾಗಿ ಅವನಿ , ಪಾರ್ವತಿಯಾಗಿ ರಚಿತಾ, ವಿಭೀಷಣನ ಪಾತ್ರದಲ್ಲಿ ಪ್ರತೀಕ್ಷಾ ಉತ್ತಮ ಪ್ರದರ್ಶನ ನೀಡಿದರು. ವರುಣನ ಪಾತ್ರದಲ್ಲಿ ಹರ್ಷಿತ, ಸೇತುಬಂಧಕ್ಕೆ ಶ್ರಮಿಸಿದ ನೀಲನಾಗಿ ಪ್ರೇಕ್ಷಾ, ಜಾಂಬವನ ಪಾತ್ರದಲ್ಲಿ ಧೀರಜ್‌ ಮನೋಜ್ಞವಾಗಿ ಅಭಿನಯಿಸಿ ರಂಜಿಸಿದರು. ಕಿರಿಯ ಕಲಾವಿದೆ ಈಶ್ವಾನಿ ಅಂಗದನ ಪಾತ್ರದಲ್ಲಿ ಮನಸೆಳೆದರು . ಯಕ್ಷಗಾನ ಕೇವಲ 15 ದಿನಗಳಲ್ಲಿ ಅಭ್ಯಸಿಸಲು ಅಸಾಧ್ಯವಾದರೂ ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲ ಮಕ್ಕಳು ಪ್ರತಿದಿನವೂ ಉತ್ಸುಕತೆಯಿಂದ ಭಾಗವಹಿಸಿದ್ದರು. ಇದು ಈ ಪರಿಸರದಲ್ಲಿ ಮಕ್ಕಳಿಂದ ಯಕ್ಷಗಾನದ ಬೆಳವಣಿಗೆಗೆ ಒಂದು ಶುಭ ಸೂಚನೆಯಾಗಿರಬಹುದು.ಯಕ್ಷಗಾನ ಕಲೆಯನ್ನು ಎಳವಿನಲ್ಲಿ ಯೇ ಮುಂದುವರಿಸುವ ಭರವಸೆಯನ್ನು ಹೊಂದಿರುವ ಕಲಾದರ್ಶಿನಿ 10 ತಿಂಗಳ ಕೋರ್ಸ್‌ನ್ನು ಜೂನ್‌ ತಿಂಗಳಲ್ಲಿ ಆರಂಭಿಸುವ ಯೋಜನೆಯಲ್ಲಿದೆ.

ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next