Advertisement

ಉತ್ತರಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಣೆ, 577 ಶಿಕ್ಷಕರ ಸಾವು!

05:01 PM Apr 29, 2021 | Team Udayavani |

ಲಕ್ನೋ:ಕೋವಿಡ್ ಸೋಂಕಿನ ಸಂದರ್ಭದಲ್ಲಿ ಉತ್ತರಪ್ರದೇಶದ ಪಂಚಾಯತ್ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ 577 ಮಂದಿ ಶಿಕ್ಷಕರು ಸಾವನ್ನಪ್ಪಿರುವುದಾಗಿ ಉತ್ತರಪ್ರದೇಶದ ಶಿಕ್ಷಕರ ಸಂಘ ರಾಜ್ಯ ಚುನಾವಣಾ ಆಯೋಗಕ್ಕೆ ಪಟ್ಟಿಯನ್ನು ಸಲ್ಲಿಸಿದ್ದು, ಮೇ 2ರಂದು ನಡೆಯಲಿರುವ ಮತಎಣಿಕೆಯನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಷೇರು ಮಾರಾಟದ ಮೂಲಕ 1.11 ಬಿಲಿಯನ್‌ ಡಾಲರ್‌ ಸಂಗ್ರಹಣೆಗೆ ಮುಂದಾದ ಜೊಮ್ಯಾಟೊ

ಉತ್ತರಪ್ರದೇಶದ ಶಿಕ್ಷಕ್ ಮಹಾಸಂಘ(ಯುಪಿಎಸ್ ಎಂ)ದ ಅಧ್ಯಕ್ಷ ದಿನೇಶ್ ಚಂದ್ರ ಶರ್ಮಾ ಈ ಕುರಿತು ಮಾತನಾಡಿದ್ದು, ಕೋವಿಡ್ ಸೋಂಕಿನ ನಡುವೆಯೇ 71 ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿದ್ದ 577 ಶಿಕ್ಷಕರು ಸಾವನ್ನಪ್ಪಿದ್ದು ಅವರ ವಿವರಗಳನ್ನು ಆಯೋಗಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸರಕಾರಿ ನೌಕರರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಅಲಹಾಬಾದ್ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಮಂಗಳವಾರ ನೋಟಿಸ್ ಜಾರಿ ಮಾಡಿತ್ತು.

ಈ ವಿಷಯದ ಕುರಿತು ಜಿಲ್ಲೆಗಳಲ್ಲಿ ನಡೆದ ಶಿಕ್ಷಕರ ಸಾವಿನ ಕುರಿತ ವರದಿಯನ್ನು 24ಗಂಟೆಯೊಳಗೆ ಕಳುಹಿಸುಂತೆ ವಿಶೇಷ ಅಧಿಕಾರಿ ಎಸ್ ಕೆ ಸಿಂಗ್ ಅವರು, ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ಪತ್ರವನ್ನು ರವಾನಿಸಿದ್ದರು ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next