Advertisement

ಜಿಎಸ್‌ಬಿ ದೇಗುಲಗಳ ಒಕ್ಕೂಟ: ಮಾಹಿತಿ ಶಿಬಿರ

12:49 PM May 31, 2017 | |

ಮಂಗಳೂರು: ಜಿ.ಎಸ್‌.ಬಿ. ದೇವಾಲಯಗಳ ಒಕ್ಕೂಟದ ವತಿಯಿಂದ ಎಲ್ಲ ದೇವಾಲಯ ಮತ್ತು ಮಂದಿರಗಳಿಗೆ ಅನ್ವಯವಾಗುವ ತೆರಿಗೆ ಹಾಗೂ ಇತರ ಕಾನೂನು ಸಂಬಂಧ ವಿಚಾರಗಳ ಮಾಹಿತಿ ನೀಡಲು ವಿಶೇಷ ಶಿಬಿರವನ್ನು ಮೇ 28ರಂದು ಏರ್ಪಡಿಸಲಾಯಿತು.

Advertisement

ಮಂಗಳೂರು ವಲಯದ ದೇವಾಲಯಗಳ ಶಿಬಿರ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದಲ್ಲಿ ನಡೆಯಿತು. 

ಶ್ರೀ ವೆಂಕಟರಮಣ ದೇವಾಲಯದ ಮೊಕ್ತೇಸರ ಎಂ. ಪದ್ಮನಾಭ ಪೈ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಟಿ. ಗಣಪತಿ ಪೈ ಶಿಬಿರದ ಉದ್ದೇಶ ಹಾಗೂ ಎಲ್ಲ ದೇವಾಲಯಗಳು ಮುಂದೆ ಪಾಲಿಸಬೇಕಾದ ಕೆಲವು ನಿಯಮಗಳ ಬಗ್ಗೆ ವಿವರ ನೀಡಿದರು.
 
ಗೌತಮ್‌ ಪೈ ದೇವಾಲಯಕ್ಕೆ ಅನ್ವಯವಾಗುವ ಲೆಕ್ಕದ ಬಗ್ಗೆ ಹಾಗೂ ಜುಲೈಯಿಂದ ಅನ್ವಯವಾಗುವ ಜಿ.ಎಸ್‌.ಟಿ. ಬಗ್ಗೆ ವಿವರಿಸಿದರು. ನ್ಯಾಯವಾದಿ ಅಮೃತ್‌ ಕಿಣಿ ದೇವಾಲಯಕ್ಕೆ ಅನ್ವಯವಾಗುವ ಕಾನೂನು, ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. 

ಒಕ್ಕೂಟದ ಅಧ್ಯಕ್ಷ ಯು. ಸುದರ್ಶನ್‌ ಮಲ್ಯ ಮಾತನಾಡಿ, ಎಲ್ಲ ದೇವಾಲಯಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದರು.

ರತ್ನಾಕರ ಕಾಮತ್‌ ವಂದಿಸಿದರು. ಸಿಎ ರಾಮಕೃಷ್ಣ ಪ್ರಭು, ಸಿಎ ಗಿರಿಧರ್‌ ಪ್ರಭು ಹಾಗೂ ವಿವಿಧ ದೇವಾಲಯಗಳ ಸುಮಾರು 45 ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸಿದರು.

Advertisement

ಪುತ್ತೂರು ವಲಯ 
ಪುತ್ತೂರು ವಲಯದ ದೇವಾಲಯಗಳ ಶಿಬಿರ ಸಂಜೆ 4.30ಕ್ಕೆ ಬೆಳ್ತಂಗಡಿಯ ಲಾೖಲ ಶ್ರೀ ವೆಂಕಟರಮಣ ದೇವಾಲಯದಲ್ಲಿ ನಡೆಯಿತು. ದೇಗುಲದ ಮೊಕ್ತೇಸರ ಎಂ. ವಿವೇಕಾನಂದ ಪ್ರಭು ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಟಿ. ಗಣಪತಿಪೈ ಶಿಬಿರದ ಉದ್ದೇಶ ಹಾಗೂ ಎಲ್ಲ ದೇವಾಲಯಗಳು ಮುಂದೆ ಪಾಲಿಸ ಬೇಕಾದ ಹಾಗೂ ದೇವಾಲಯಗಳ ಮುಂಜಾಗರೂಕತೆ ಬಗ್ಗೆ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಲೆಕ್ಕಪರಿಶೋಧಕ ಎಂ. ಜಗನ್ನಾಥ್‌ ಕಾಮತ್‌ ದೇವಾಲಯಕ್ಕೆ ಅನ್ವಯವಾಗುವ ಲೆಕ್ಕದ ಬಗ್ಗೆ ಹಾಗೂ ಜುಲೈಯಿಂದ ಅನ್ವಯವಾಗುವ ಜಿ.ಎಸ್‌.ಟಿ. ಬಗ್ಗೆ ವಿವರ ನೀಡಿದರು. ನ್ಯಾಯವಾದಿ ಅಮೃತ್‌ ಕಿಣಿ ದೇವಾಲಯಕ್ಕೆ ಅನ್ವಯವಾಗುವ ಕಾನೂನು ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಖಜಾಂಚಿ ರಾಧಾಕೃಷ್ಣ ಭಕ್ತ ವಂದಿಸಿದರು. ದೇವಾಲಯಗಳ ಹಾಗೂ ಮಂದಿರಗಳ ಸುಮಾರು 42 ಪ್ರತಿನಿಧಿಗಳು ಶಿಬಿರದಲ್ಲಿ ಭಾಗವಹಿಸಿದರು. 
 

Advertisement

Udayavani is now on Telegram. Click here to join our channel and stay updated with the latest news.

Next