Advertisement
ಅವರು ಚಿಕ್ಕಮಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸರ್ಕಾರ ಹೊಸದಾಗಿ ಬಂದಿದ್ದು, ನಾಲ್ಕೈದು ತಿಂಗಳಾಗಿದೆ. ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ ಎಂದು ಹೇಳಿದ್ದಾರೆ.
Related Articles
Advertisement
ಕೆಜೆ ಹಳ್ಳಿ-ಡಿಜೆಹಳ್ಳಿ ಕೇಸ್ ವಿಚಾರವಾಗಿ ಮಾತನಾಡಿ, ಕೆಜೆ ಹಳ್ಳಿ-ಡಿಜೆಹಳ್ಳಿ ಕೇಸಲ್ಲಿ ಅವರದ್ದೇ ಶಾಸಕರಿಗೆ ಕಾಂಗ್ರೆಸ್ ಬೆಂಬಲ ಕೊಡ್ಲಿಲ್ಲ. ಕಾಂಗ್ರೆಸ್ ಶಾಸಕರ ಮನೆ ಸುಟ್ಟರೂ ಯಾರೂ ಹೋಗಲಿಲ್ಲ, ನಾವೇ ಹೋಗಿದ್ದು ಎಂದು ಹೇಳಿದರು.
ಕಾಂಗ್ರೆಸ್ ಶಾಸಕರಿಗೆ ನೈತಿಕ ಬೆಂಬಲವನ್ನೂ ಕೊಡ್ಲಿಲ್ಲ. ಕೆಜೆ ಹಳ್ಳಿ-ಡಿಜೆಹಳ್ಳಿ-ಹುಬ್ಬಳ್ಳಿ ಕೇಸ್ ಆದ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿತ್ತು. ಅಲ್ಲಿ ತಪ್ಪು ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗೆ ಇಂದು ಅರಿವಾಗ್ತಿದೆ ಎಂದರು.
ಪೊಲೀಸ್ ಸ್ಟೇಷನ್, ಮನೆ, ವಾಹನ ಎಲ್ಲವನ್ನೂ ಸುಟ್ಟರು. ಕೆಜೆ ಹಳ್ಳಿ-ಡಿಜೆಹಳ್ಳಿ ಒಂದು ರೀತಿ ಸ್ಮಶಾನವಾಗಿತ್ತು. ಅದಕ್ಕೆ ಕಾಂಗ್ರೆಸ್ ಕುಮ್ಮಕ್ಕಿತ್ತು. ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರ ಜೊತೆಗೆ ಒಂದು ಸಮುದಾಯದ ಓಲೈಕೆಗೆ ಮುಂದಾಗಿದ್ರು. ಇವತ್ತು ನ್ಯಾಯುತವಾದ ತನಿಖೆ ಮಾಡಿ ತಪ್ಪು ಮಾಡಿದ್ದು ಯಾರೆಂದು ಗೊತ್ತಾಗುತ್ತೆ ಎಂದು ಹೇಳಿದರು.
ಬಿಜೆಪಿ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ನಮ್ಮ ಮುಖಂಡರು, ಮಾಜಿ ಶಾಸಕರಿಗೆ ಆಮಿಷ ಒಡ್ಡಿ ಸೆಳೆಯುತ್ತಿದ್ದಾರೆ. ಆಂತರಿಕವಾಗಿ ಕಾಂಗ್ರೆಸ್ ಸೇಫ್ ಇಲ್ಲ, ಆಂತರಿಕವಾಗಿ ಕಾಂಗ್ರೆಸ್ ಗಲಿಬಿಲಿಯಲ್ಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿ, ಅವರಿಗೆ ಅಸುರಕ್ಷತೆ ಕಾಡ್ತಿದೆ, ಅದಕ್ಕೆ ಬಿಜೆಪಿಯಿಂದ ಕರೆದುಕೊಳ್ತಿದ್ದಾರೆ. ಪ್ರಧಾನಿ ಮೋದಿ ಪ್ರಪಂಚದಲ್ಲಿ ಭಾರತದವನ್ನು ಅಗ್ರಸ್ಥಾನದಲ್ಲಿ ನಿಲ್ಲುಸುವ ಕೆಲಸ ಮಾಡ್ತಿದ್ದಾರೆ. ಮೋದಿ ಜೊತೆ ಕೈ ಜೋಡಿಸಿ, 2024ಕ್ಕೆ ಅತ್ಯಧಿಕ ಮತಗಳ ಅಂತರದಲ್ಲಿ ಮೋದಿ ಗೆಲ್ಲಿಸೋಣ ಎಂದು ಹೇಳಿದರು.
ಶಾಸಕರು, ಎಂ.ಪಿ. ಅಧಿಕಾರ ಇರಬಹುದು, ಇಲ್ಲದಿರಬಹುದು ಆದರೆ, ದೇಶ ಉಳಿಯೋದು ಮುಖ್ಯ. ಹಾಗಾಗಿ, ಎಲ್ಲರಿಗೂ ಪ್ರಾರ್ಥನೆ ಮಾಡ್ತೀನಿ, ಮೋದಿ ದೇಶಕ್ಕಾಗಿ ಕೆಲಸ ಮಾಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.