Advertisement

PM Modi ಕ್ರಿಶ್ಚಿಯನ್ನರೊಂದಿಗೆ ವಿಶೇಷ ಬಾಂಧವ್ಯ ಉಳಿಸಿಕೊಂಡಿದ್ದಾರೆ: ರಾಜೀವ್ ಚಂದ್ರಶೇಖರ್

05:01 PM Dec 02, 2023 | Team Udayavani |

ಕೊಚ್ಚಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಶ್ಚಿಯನ್ ಸಮುದಾಯದೊಂದಿಗೆ ವಿಶೇಷ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ” ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಕೊಚ್ಚಿಯಲ್ಲಿ ನಡೆದ ಸದ್ಭಾವನಾ ಸಭೆಯಲ್ಲಿ ‘ಭಾರತದ ಅಲ್ಪಸಂಖ್ಯಾತ ಸಮುದಾಯಗಳು, ಸಂಸ್ಥೆಗಳ ಕೊಡುಗೆ ಮತ್ತು ಸಬಲೀಕರಣ’ ಎಂಬ ವಿಷಯದ ಕುರಿತು ಕುರಿತು ಮಾತನಾಡಿ, ”ಪ್ರಧಾನಿ ಮೋದಿ ಅವರು ವ್ಯಾಟಿಕನ್ ನಗರಕ್ಕೆ ಐತಿಹಾಸಿಕ ಭೇಟಿ ನೀಡಿದ್ದಾರೆ. ಇದು ಎರಡು ದಶಕಗಳಲ್ಲಿ ಭಾರತೀಯ ಪ್ರಧಾನಿಯ ಮೊದಲನೆಯ ಭೇಟಿಯಾಗಿದೆ. ಇದರಿಂದ ಅವರು ಕ್ರಿಶ್ಚಿಯನ್ ಸಮುದಾಯದೊಂದಿಗೆ ವಿಶೇಷ ಬಾಂಧವ್ಯವನ್ನು ಉಳಿಸಿಕೊಂಡಿರುವುದು ಸ್ಪಷ್ಟವಾಗಿದೆ” ಎಂದರು.

”ಪ್ರಧಾನಿ ಮೋದಿಯವರ ಆಡಳಿತವು ಭಾರತದ ಪ್ರತಿಯೊಂದು ಸಮುದಾಯದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ, ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಕ್ರಿಶ್ಚಿಯನ್ ಸಮುದಾಯವನ್ನು ಒಳಗೊಂಡಂತೆ ಎಲ್ಲಾ ಅಲ್ಪಸಂಖ್ಯಾತರ ಸಾಮಾಜಿಕ-ಆರ್ಥಿಕ ಉನ್ನತಿಯನ್ನು ಖಾತ್ರಿಪಡಿಸಲಾಗಿದೆ” ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next