ಬೆಂಗಳೂರು : ಜಾಗತಿಕ ಮನ್ನಣೆ ಪಡೆದಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಚಿತ್ರವನ್ನು ವನ್ನು ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸಿದ ಉದಾಹರಣೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಬಣ್ಣಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಭೆ ‘ಇನ್ವೆಸ್ಟ್ ಕರ್ನಾಟಕ 2022’ರಲ್ಲಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಚಿತ್ರದ ಕುರಿತು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
“ಕಾಂತಾರ ಕರ್ನಾಟಕದ ಸಂಸ್ಕೃತಿಯನ್ನು ಪ್ರದರ್ಶಿಸುವ ಕಡಿಮೆ ಬಜೆಟ್ ಚಲನಚಿತ್ರವಾಗಿದೆ. ಇದು ಹೂಡಿಕೆ ಮಾಡಿದ್ದಕ್ಕಿಂತ ಸುಮಾರು 20 ಪಟ್ಟು ಹೆಚ್ಚು ಲಾಭ ಮಾಡಿದೆ. ಹೂಡಿಕೆದಾರರು ಮತ್ತು ಉದ್ಯಮವು ಭಾರತ ಮತ್ತು ರಾಜ್ಯಕ್ಕೆ ಆಕರ್ಷಿತವಾಗಿದೆ. ಅದು ಅತ್ಯಂತ ಪ್ರಗತಿಪರ ನೀತಿಗಳನ್ನು ಹೊಂದಿದೆ” ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.
‘ಜಗತ್ತಿನ ಎಲ್ಲೇ ಹೋದರೂ ಕರ್ನಾಟಕದ ಬಗ್ಗೆ ಸಂಭ್ರಮವಿದೆ. ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ದೊಡ್ಡ ಕಂಪನಿಗಳ ಹೂಡಿಕೆ ಯೋಜನೆಗಳ ಬಗ್ಗೆ ಕೇಳಿಬರುತ್ತಿದೆ. ಕಾಂತಾರ ಚಿತ್ರದ ಮರು ಪ್ರದರ್ಶನದಂತೆ ಭಾಸವಾಗುತ್ತಿದೆ’ ಎಂದು ಗೋಯಲ್ ಟ್ವೀಟ್ ಮಾಡಿದ್ದಾರೆ.
ಕೆಜಿಎಫ್ ಮಂತ್ರ!
‘2022 ರಲ್ಲಿ ಹೂಡಿಕೆದಾರರು ಕರ್ನಾಟಕದ ಬೆಳವಣಿಗೆ ಮತ್ತು ಭವಿಷ್ಯವನ್ನು ‘ಕೆಜಿಎಫ್’ (Karnataka’s Growth & Future) ಬೆಂಬಲಿಸುವಂತೆ ಒತ್ತಾಯಿಸಿದರು. ರಾಜ್ಯದ ಕೌಶಲ್ಯಗಳು, ಸಂಪನ್ಮೂಲಗಳು, ನಿರ್ಣಾಯಕ ನಾಯಕತ್ವ, ಭಾರತ-ಮೊದಲ ಗಮನ ಮತ್ತು ಉದ್ಯಮಶೀಲತೆಯ ಮನೋಭಾವವು ಹೂಡಿಕೆ ಮಾಡಲು ಸರಿಯಾದ ಸ್ಥಳವಾಗಿದೆ’ಎಂದು ಗೋಯಲ್ ಹೇಳಿದ್ದಾರೆ.