Advertisement

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

04:06 PM Jan 14, 2025 | Team Udayavani |

ಮಂಗಳೂರು: ಮೊದಲ ಬಾರಿಗೆ ತುಳು ಚಿತ್ರವೊಂದರಲ್ಲಿ ನಟಿಸುತ್ತಿರುವ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ (Suniel Shetty) ಅವರು ಮಂಗಳವಾರ (ಜ.14) ಮಂಗಳೂರಿಗೆ ಆಗಮಿಸಿದರು.

Advertisement

ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ತುಳು ಚಿತ್ರದ ಚಿತ್ರೀಕರಣಕ್ಕೆ ಮಂಗಳೂರಿಗೆ ಬಂದ ಸುನೀಲ್ ಶೆಟ್ಟಿ ಅವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಈ ವೇಳೆ ಮಾತನಾಡಿದ ಸುನೀಲ್‌ ಶೆಟ್ಟಿ ಅವರು, “ಮೊದಲ ಬಾರಿಗೆ ತುಳು‌ ಚಿತ್ರದಲ್ಲಿ ನಟಿಸಲಿದ್ದೇನೆ. ಒಂದು ಉತ್ತಮ ಚಿತ್ರ ಸಿಕ್ಕಿದರೆ ತುಳುವಿನಲ್ಲಿ ಅಭಿನಯಿಸುತ್ತೇನೆ ಎಂದಿದ್ದೆ. ಇದೀಗ ಕಾಲ ಕೂಡಿ ಬಂದಿದೆ. ರೂಪೇಶ್ ಅವರ ಜೈ ಚಿತ್ರದಲ್ಲಿ ಪಾತ್ರ ವಹಿಸಲಿದ್ದೇನೆ” ಎಂದರು.

“ಸುನೀಲ್‌ ಶೆಟ್ಟಿ ಅವರನ್ನು ತುಳುವಿಗೆ ಕರೆತರುವುದು ಕನಸಾಗಿತ್ತು. ನನ್ನ ನಿರ್ದೇಶನದಲ್ಲಿ ಮಾತ್ರ ಎಂದಲ್ಲ, ಅವರು ಬಂದರೆ ತುಳು ಚಿತ್ರರಂಗಕ್ಕೆ ಒಂದು ಉತ್ತಮ ಬೂಸ್ಟ್‌ ಸಿಕ್ಕಂತೆ ಆಗುತ್ತದೆ ಎಂದುಕೊಳ್ಳುತ್ತಿದ್ದೆ. ಈಗ ನನ್ನದೇ ನಿರ್ದೇಶನದ ʼಜೈʼ ಸಿನಿಮಾದಲ್ಲಿ ಅವರು ನಟಿಸುತ್ತಿರುವುದು ಮತ್ತಷ್ಟು ಸಂತಸ ತಂದಿದೆ” ಎಂದು ನಟ, ನಿರ್ದೇಶಕ ರೂಪೇಶ್‌ ಶೆಟ್ಟಿ ಹೇಳಿದರು.

ʼಗಿರ್ಗಿಟ್‌ʼ ಮತ್ತು ʼಸರ್ಕಸ್‌ʼ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್‌ ಶೆಟ್ಟಿ ʼಜೈʼ ಚಿತ್ರದ ಮೂಲಕ ತುಳು ಸಿನಿಮಾ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಆರ್‌ಎಸ್ ಸಿನಿಮಾಸ್, ಶೂಲಿನ್ ಫಿಲ್ಮ್ಸ್ ಮತ್ತು ಮುಗ್ರೋಡಿ ಪ್ರೊಡಕ್ಷನ್ಸ್ ಬ್ಯಾನರ್‌ ನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಅವರು ನಿರ್ಮಾಣ ಮಾಡುತ್ತಿದ್ದು, ದೀಕ್ಷಿತ್ ಆಳ್ವ ಸಹ ನಿರ್ಮಾಪಕರಾಗಿದ್ದಾರೆ.

Advertisement

“ಜೈʼ ಸಿನಿಮಾದಲ್ಲಿ ರೂಪೇಶ್‌ ಶೆಟ್ಟಿ ಅವರೊಂದಿಗೆ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮೊದಲಾದವರು ಅಭಿನಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.