ಹೊಸದಿಲ್ಲಿ: ಕೋವಿಡ್ 19 ಸೋಂಕು ಬಾಧಿತ ಕೇಂದ್ರ ಸಚಿವರ ಸಾಲಿಗೆ ಬಿಜೆಪಿ ಹಿರಿಯ ನಾಯಕ ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮತ್ತು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ನಿತಿನ್ ಗಡ್ಕರಿ ಸೇರ್ಪಡೆಗೊಂಡಿದ್ದಾರೆ.
ಗಡ್ಕರಿಗೆ ಇಂದು ಕೋವಿಡ್ 19 ಸೋಂಕು ದೃಢಪಡುತ್ತಿದ್ದಂತೆ ಅವರು ಸ್ವಯಂ ಐಸೊಲೇಷನ್ ಗೆ ಒಳಗಾಗಿದ್ದಾರೆ.
ಈ ವಿಷಯವನ್ನು ಸ್ವತಃ ಗಡ್ಕರಿ ಅವರೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
‘ನಿನ್ನೆಯ ದಿನ ನನಗೆ ಸುಸ್ತಿನ ಅನುಭವವಾಗುತ್ತಿತ್ತು, ಹಾಗಾಗಿ ನಾನು ವೈದ್ಯರನ್ನು ಸಂಪರ್ಕಿಸಿದೆ. ವೈದ್ಯರು ನನ್ನನ್ನು ಪರೀಕ್ಷಿಸಿದಾಗ ನನಗೆ ಕೋವಿಡ್ 19 ಸೋಂಕು ಇರುವುದು ಖಚಿತಪಟ್ಟಿದೆ. ಇದೀಗ ದೇವರ ಹಾಗೂ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಚೆನ್ನಾಗಿದ್ದೆನೆ ಹಾಗೂ ನನ್ನನ್ನು ನಾನು ಎಲ್ಲರಿಂದಲೂ ಪ್ರತ್ಯೇಕಿಸಿಕೊಂಡಿದ್ದೆನೆ’ ಎಂದು ಗಡ್ಕರಿ ಅವರು ಟ್ವೀಟ್ ಮಾಡಿದ್ದಾರೆ.
ಗಡ್ಕರಿಗಿಂತ ಮೊದಲು ಕೇಂದ್ರ ಸಚಿವರಲ್ಲಿ ಅಮಿತ್ ಶಾ, ಶ್ರೀ ಪಾದ ನಾಯಕ್, ಧರ್ಮೇಂದ್ರ ಪ್ರಧಾನ, ಅರ್ಜುನ್ ಮೇಘ್ವಾಲ್ ಮತ್ತು ಕೈಲಾಶ್ ಚೌಧರಿ ಅವರಲ್ಲೂ ಸಹ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿತ್ತು.