Advertisement

ಸಗಣಿ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆಗ್ರಹ

10:08 AM Jan 15, 2020 | Hari Prasad |

ಮಥುರಾ: ವೈಜ್ಞಾನಿಕ ಮಹತ್ವವನ್ನು ಹೊಂದಿದೆ ಎನ್ನಲಾಗುತ್ತಿರುವ ಭಾರತೀಯ ಹಸುವಿನ ಸಗಣಿಯ ಕುರಿತಾದಂತೆ ಸುಧಾರಿತ ಸಂಶೋಧನೆಗಳನ್ನು ನಡೆಸುವಂತೆ ಕೇಂದ್ರ ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ಗಿರಿರಾಜ್ ಸಿಂಗ್ ಅವರು ವಿಜ್ಞಾನಿ ಸಮುದಾಯವನ್ನು ಆಗ್ರಹಿಸಿದ್ದಾರೆ.

Advertisement

ಸಗಣಿಯ ವೈಜ್ಞಾನಿಕ ಮಹತ್ವದ ಕುರಿತಾಗಿ ಹೆಚ್ಚಿನ ಸಂಶೋಧನೆಯನ್ನು ನಡೆಸುವ ಮೂಲಕ ಇದರ ಲಾಭವನ್ನು ನಮ್ಮ ರೈತರಿಗೆ ವರ್ಗಾಯಿಸಬಹುದಾಗಿರುತ್ತದೆ ಮತ್ತು ಇದರಿಂದಾಗಿ ಹಸುಗಳು ಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕವೂ ಅವುಗಳನ್ನು ಸಾಕಲು ರೈತರಿಗೆ ಒಂದು ಅವಕಾಶ ಉಂಟಾಗುತ್ತದೆ ಎಂದು ಸಚಿವ ಗಿರಿರಾಜ್ ಸಿಂಗ್ ಅವರು ಅಭಿಪ್ರಾಯಪಟ್ಟರು.

ನಮ್ಮ ರೈತರು ತಮ್ಮಲ್ಲಿರುವ ಹಸುಗಳ ಸಗಣಿ ಮತ್ತು ಮೂತ್ರದಿಂದ ಹೆಚ್ಚಿನ ಆದಾಯವನ್ನು ಗಳಿಸಲು ಸಾಧ್ಯವಾಗುವುದಾದರೆ ಅದೊಂದು ಒಳ್ಳೆಯ ವಿಷಯವೇ. ಆದರೆ ಅದಕ್ಕೆ ಪೂರಕವಾಗುವಂತೆ ಕೆಲವೊಂದು ಸಂಶೋಧನೆಗಳು ನಮ್ಮ ವಿಜ್ಞಾನಿಗಳ ಮಟ್ಟದಿಂದ ಆಗಬೇಕಾಗಿದೆ ಎಂದು ಗಿರಿರಾಜ್ ಸಿಂಗ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಜನರು ಹೇಗೆ ಭಗವದ್ಗೀತೆ, ಕುರಾನ್ ಮತ್ತು ರಾಮಾಯಣದ ವಿಚಾರಗಳನ್ನು ಓದಿಕೊಂಡು ಮನನ ಮಾಡಿಕೊಳ್ಳುತ್ತಾರೋ ಹಾಗೆಯೇ ತಾನು ಮಹಾತ್ಮಾ ಗಾಂಧಿ, ಲೋಹಿಯಾ ಮತ್ತು ದೀನ್ ದಯಾಳ್ ಉಪಾಧ್ಯಾಯ ಅವರ ಆದರ್ಶಗಳನ್ನು ಸದಾ ಪಾಲಿಸುತ್ತೇನೆ ಎಂದು ಗಿರಿರಾಜ್ ಸಿಂಗ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next