Advertisement

ಇ-ಸಿಗರೇಟ್ ಮಾರಾಟ, ಉತ್ಪಾದನೆಗೆ ಕೇಂದ್ರದಿಂದ ನಿಷೇಧ: ನಿರ್ಮಲಾ ಸೀತಾರಾಮನ್

08:53 AM Sep 19, 2019 | Nagendra Trasi |

ನವದೆಹಲಿ: ಇ-ಸಿಗರೇಟ್ ನಿಷೇಧಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ. ಇ-ಸಿಗರೇಟ್ ಉತ್ಪಾದನೆ, ಆಮದು, ರಫ್ತು, ಮಾರಾಟ, ಹಂಚಿಕೆ ಸೇರಿದಂತೆ ಪ್ರತಿಯೊಂದಕ್ಕೂ ನಿಷೇಧ ಹೇರಲಾಗಿದೆ ಎಂದು ವರದಿ ವಿವರಿಸಿದೆ.

Advertisement

ಯುವ ಜನಾಂಗದ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಇ-ಸಿಗರೇಟ್ ಸೇವನೆ ಚಟದಿಂದ ಅಮೆರಿಕದಲ್ಲಿ ಏಳು ಮಂದಿ ಸಾವನ್ನಪ್ಪಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಇ-ಸಿಗರೇಟ್ ಸೇವನೆ, ಉತ್ಪಾದನೆ, ಮಾರಾಟ, ಸಂಗ್ರಹಕ್ಕೆ ನಿಷೇಧ ಹೇರಿರುವುದಾಗಿ ಹೇಳಿದರು.

ಜನರು ಧೂಮಪಾನ ಚಟದಿಂದ ಹೊರ ಬರಲಿ ಎಂಬ ಉದ್ದೇಶದಿಂದ ಇ-ಸಿಗರೇಟ್ ಮಾರಾಟಕ್ಕೆ ಪ್ರೋತ್ಸಾಹ ನೀಡಲಾಗಿತ್ತು. ಆದರೆ ಬಹುತೇಕ ಜನರು ಇ-ಸಿಗರೇಟ್ ಸೇವನೆ ದುಶ್ಚಟಕ್ಕೆ ಗುರಿಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಈ ನಿಟ್ಟಿನಲ್ಲಿ ಯುವ ಜನಾಂಗ ಇ-ಸಿಗರೇಟ್ ವ್ಯಸನದಿಂದ ದೂರ ಉಳಿಯಲು ನಿಷೇಧ ಹೇರಲಾಗಿದೆ ಎಂದರು.

ಒಂದು ವೇಳೆ ಇ-ಸಿಗರೇಟ್ ನಿಷೇಧ ಉಲ್ಲಂಘಿಸಿ ಮಾರಾಟ, ಉತ್ಪಾದನೆ ಮಾಡಿದಲ್ಲಿ ಒಂದು ಲಕ್ಷ ರೂಪಾಯಿವರೆಗೆ ದಂಡ ಅಥವಾ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗಲಿದೆ ಎಂದು ಸೀತಾರಾಮನ್ ವಿವರಿಸಿದ್ದಾರೆ.

Advertisement

ವರದಿಯ ಪ್ರಕಾರ ಇ-ಸಿಗರೇಟ್ ನಲ್ಲಿ ಸುಮಾರು 400 ಅಧಿಕ ಬ್ರ್ಯಾಂಡ್ ಗಳಿವೆ. ಕೆಲವನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಅದರಲ್ಲಿ ಸುಮಾರು 150 ವಿಧದ ಫ್ಲೇವರ್ ಗಳನ್ನು ಒಳಗೊಂಡಿದ್ದವು. ಇ-ಸಿಗರೇಟ್ ಸೇವನೆ ತಣ್ಣನೆಯ(ತಂಪು) ಅನುಭವ ನೀಡಲಿದೆಯಂತೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next