Advertisement
ಭಾನುವಾರ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಷಿ ಮತ್ತು ಸುರೇಶ್ ಅಂಗಡಿ ಅವರಿಗೆ ಸ್ಥಾನ ಸಿಗುವ ಸಂಭವವಿದೆ.
Related Articles
Advertisement
ಮೂಲಗಳ ಪ್ರಕಾರ ಭೂಪೇಂದರ್ ಯಾದವ್, ವಿನಯ್ ಸಹಸ್ರ ಬುದ್ದೆ, ಪ್ರಹ್ಲಾದ್ ಪಟೇಲ್, ಸುರೇಶ್ ಅಂಗಡಿ, ಸತ್ಯಪಾಲ್ ಸಿಂಗ್, ಹಿಮಂತ್ ಬಿಸ್ವಾ ಶರ್ಮಾ, ಅನುರಾಗ್ ಠಾಕೂರ್, ಶೋಭಾ ಕರಂದ್ಲಾಜೆ, ಮಹೀಶ್ ಗಿರಿ ಮತ್ತು ಪ್ರಹ್ಲಾದ್ ಜೋಶಿ ಅವರ ಬಗ್ಗೆ ಚರ್ಚೆ ನಡೆದಿದೆ.ಅಂತೆಯೇ ತಮ್ಮ ಇಲಾಖೆಗಳಲ್ಲಿ ಉತ್ತಮ ಸಾಧನೆ ಮಾಡಿದ ಪಿಯೂಶ್ ಗೋಯಲ್, ಧರ್ಮೇಂದ್ರ ಪ್ರಧಾನ್, ಮನೋಜ್ ಸಿನ್ಹಾ ಅವರಿಗೆ ಬಡ್ತಿ ಸಿಗಲಿದೆ ಎನ್ನಲಾಗಿದೆ. ಯಾರಿಗೆ ಏಕೆ ಸಚಿವ ಸ್ಥಾನ?
ಶೋಭಾ ಕರಂದ್ಲಾಜೆ: ಒಕ್ಕಲಿಗ ಸಮುದಾಯಕ್ಕೆ ಸೇರಿದವರು, ಅಂತೆಯೇ ಆರ್‌ಎಸ್‌ಎಸ್‌ನ ಗರಡಿಯಲ್ಲಿ ಪಳಗಿದವರು. ಮೈಸೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡದಲ್ಲಿರುವ ಒಕ್ಕಲಿಗ ಮತದಾರರನ್ನು ಸೆಳೆಯುವ ಲೆಕ್ಕಾಚಾರ. ಪ್ರಹ್ಲಾದ್ ಜೋಷಿ: ಈ ಹಿಂದೆ ಪಕ್ಷದ ರಾಜ್ಯಘಟಕದ ಅಧ್ಯಕ್ಷರಾಗಿದ್ದವರು. ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಇರುವ ಉತ್ತರ ಕರ್ನಾಟಕಕ್ಕೆ ಸೇರಿದವರು. ಈಗಾಗಲೇ ಕಳಸಾ ಬಂಡೂರಿ ವಿಚಾರದಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದ್ದು, ಈ ಕೊರತೆ ತುಂಬುವ ಯತ್ನ. ಸುರೇಶ್ ಅಂಗಡಿ: ರಾಜ್ಯದ ಪ್ರಬಲ ಲಿಂಗಾಯಿತ ಸಮುದಾಯಕ್ಕೆ ಸೇರಿದವರು. ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದು, ಇಲ್ಲಿ ಬಿಜೆಪಿಗೆ ಬಲ ತುಂಬುವ ಯತ್ನ. ಅಂತೆಯೇ, ಲಿಂಗಾಯಿತ-ವೀರಶೈವ ಧರ್ಮದ ಹೋರಾಟದಲ್ಲಿ ಆಗಿರುವ ಹಿನ್ನಡೆಯನ್ನು ಸರಿದೂಗಿಸಿಕೊಳ್ಳಲುವ ಪ್ರಯತ್ನ. ಗಡ್ಕರಿಗೆ ರೈಲ್ವೆ?
ಈಗಾಗಲೇ ಸಾರಿಗೆ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿರುವ ನಿತಿನ್ ಗಡ್ಕರಿ ಅವರನ್ನು ರೈಲ್ವೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಸುರೇಶ್ ಪ್ರಭು ಪರಿಸರ ಅಥವಾ ಬೇರೊಂದು ಹೊಣೆ ಹೊರಲಿದ್ದಾರೆ. ರವಿಶಂಕರ್ ಪ್ರಸಾದ್ ಅವರ ಹುದ್ದೆಯೂ ಬದಲಾಗಲಿದೆ. ಅರುಣ್ ಜೇಟಿÉ ಕೇವಲ ವಿತ್ತಕ್ಕಷ್ಟೇ ಸೀಮಿತವಾಗಲಿದ್ದಾರೆ. ರಕ್ಷಣೆಯ ಹೊಣೆ ಯಾರಿಗೆ ಎಂಬುದು ಇನ್ನೂ ಖಚಿತವಾಗಿಲ್ಲ. ಜೆಡಿಯುನಿಂದ ಇಬ್ಬರು?: ನಿತೀಶ್ ಕುಮಾರ್ ಅವರ ಪಕ್ಷದ ರಾಮ್ ಚಂದ್ರ ಪ್ರಸಾದ್ ಸಿಂಗ್ ಮತ್ತು ಸಂತೋಷ್ ಕುಷಾÌ ಅವರಿಗೆ ಸಚಿವ ಸ್ಥಾನ ಸಾಧ್ಯತೆ. ಎಐಎಡಿಎಂಕೆ ಎನ್‌ಡಿಎ ಸೇರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಶಿವಸೇನೆ ಮತ್ತು ಟಿಡಿಪಿಗೆ ಒಂದೊಂದು ಸ್ಥಾನ ಸಿಗುವ ಸಂಭವ.