ನವ ದೆಹಲಿ : ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಪ್ರತಿ ಕ್ವಿಂಟಲ್‌ಗೆ 72 ರೂಪಾಯಿ ಏರಿಕೆ ಮಾಡಿದ್ದು ಒಟ್ಟಾರೆ ಕ್ವಿಂಟಲ್ ಬೆಲೆ 1,940 ರೂ.ಗೆ ಏರಿಕೆಯಾಗಿದೆ.
2021-22ರ ಬೆಳೆ ವರ್ಷಕ್ಕೆ ಕನಿಷ್ಠ ಕೇಂದ್ರ ಸರ್ಕಾರ ಭತ್ತದ ಬೆಭಬಲ ಬೆಲೆಯನ್ನು ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಚತ್ತೀಸ್ ಗಡ : ಅಡುಗೆ ಮಾಡಲು ಹೊಗೆ ರಹಿತ ಒಲೆ ಬಳಸಿ ಮಾದರಿಯಾದ ಗ್ರಾಮಗಳು
ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರಿಗೆ ಸಹಾಯವಾಗಲೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಈ ನಿರ್ಧಾರಕೈಗೊಂಡಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕೃಷಿ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಹಿಂದಿನ ವರ್ಷದ ಅವಧಿಯಲ್ಲಿ ಪ್ರತಿ ಕ್ವಿಂಟಲ್‌ಗೆ 1,868 ರೂ. ಇತ್ತು. ಆದರೇ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2021-22 ಬೆಳೆ ವರ್ಷಕ್ಕೆ(ಜುಲೈ-ಜೂನ್) ಭತ್ತದ ಎಂ ಎಸ್ ಪಿಯನ್ನು ಕ್ವಿಂಟಲ್ ಗೆ 1,940 ರೂ.ಗೆ ಹೆಚ್ಚಿಸಲು ಅನುಮೋದನೆ ನೀಡಿದೆ
ಇನ್ನು, ಜೋಳದ ಎಂ ಎಸ್ ಪಿಯನ್ನು ಕಳೆದ ವರ್ಷ ಕ್ವಿಂಟಲ್‌ಗೆ 2,150 ರೂ.ಗಳಿಂದ ಪ್ರಸಕ್ತ ವರ್ಷದಲ್ಲಿ ಕ್ವಿಂಟಲ್‌ಗೆ 2,250 ರೂ.ಗೆ ಹೆಚ್ಚಿಸಲಾಗಿದೆ ಎಂದು ತೋಮರ್ ತಿಳಿಸಿದ್ದಾರೆ.
ಇದನ್ನೂ ಓದಿ : ಕೊರೊನಾಕ್ಕೆ ಬಳಸಿದ ಮಾಸ್ಕ್ ನಿಂದ ಪರಿಸರ ಸ್ನೇಹಿ ಇಟ್ಟಿಗೆ..!