Advertisement

ದೆಹಲಿಯ ಅನಧಿಕೃತ ಕಾಲೋನಿ ಇನ್ನು ಅಧಿಕೃತ, 40 ಲಕ್ಷ ಮಂದಿಗೆ ಲಾಭ; ಕೇಂದ್ರ ನಿರ್ಧಾರ

09:32 AM Oct 24, 2019 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುತ್ತಿದ್ದ 40 ಲಕ್ಷ ಜನರಿಗೆ ಮಾಲೀಕತ್ವದ ಹಕ್ಕು ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಅನುಮತಿ ನೀಡಿದೆ.

Advertisement

ಹಿಂಗಾರು (ರಾಬಿ) ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಕ್ಯಾಬಿನೆಟ್ ಸಭೆ ನಿರ್ಧರಿಸಿದೆ. ಇಂದು ದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದೆ ಎಂದು ವರದಿ ತಿಳಿಸಿದೆ.

ಹಿಂಗಾರು ಮಳೆಯಲ್ಲಿ ಬೆಳೆಯುವ ಗೋಧಿ, ಹಸಿರು ಕಾಳು, ಅವರೆ ಕಾಳು, ಸಾಸಿವೆ ಹೊಸದಾಗಿ ಬೆಳೆಯುವ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಂಬಲ ಬೆಲೆ ದೊರೆಯಲಿದೆ. ಇದರಿಂದ ರೈತರಿಗೆ ಇನ್ನಷ್ಟು ಅನುಕೂಲವಾಗಲಿದೆ. ಕನಿಷ್ಠ ಬೆಂಬಲ ಬೆಲೆ ಏರಿಕೆಯಿಂದ ಈ ಬೆಳೆ ಶೇ.50ರಿಂದ ಶೇ.109ರಷ್ಟು ಹೆಚ್ಚಾಗಲಿದೆ ಎಂದು ವರದಿ ತಿಳಿಸಿದೆ.

ದೆಹಲಿಯಲ್ಲಿರುವ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುತ್ತಿರುವವರಿಗೆ ಅಧಿಕೃತ ಮಾನ್ಯತೆ ನೀಡುತ್ತಿರುವುದರಿಂದ ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  ಆದರೆ ಇದು ಚುನಾವಣಾ ಗಿಮಿಕ್ ಅಲ್ಲ, ದೆಹಲಿಯಲ್ಲಿರುವ ಅನಧಿಕೃತ ಕಾಲೋನಿಗಳಿಗೆ ಮಾನ್ಯತೆ ನೀಡಬೇಕೆಂದು ಸಮಿತಿಯ ಶಿಫಾರಸ್ಸಿನ ಮೇರೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಜಾವ್ಡೇಕರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next