Advertisement
ಇದರ ಜತೆಗೆ ಕಾರ್ಮಿಕ ಕಾನೂನುಗಳ ವಿಲೀನ, ಅನಿಯಂತ್ರಿತ ಠೇವಣಿ ಯೋಜನೆಗಳಿಗೆ ನಿಷೇಧ ಹಾಗೂ ರೈಲ್ವೆ ಸುರಕ್ಷಾ ಪಡೆಗೆ ಗ್ರೂಪ್ ‘ಎ’ ಸೇವಾ ಸೌಲಭ್ಯಗಳನ್ನು ನೀಡುವ ಇತರ ಪ್ರಸ್ತಾವನೆಗಳಿಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
Related Articles
Advertisement
ಕಾರ್ಮಿಕ ಕಾನೂನುಗಳ ವಿಲೀನ: ದೇಶದಲ್ಲಿ ಚಾಲ್ತಿಯಲ್ಲಿದ್ದ 13 ಕೇಂದ್ರೀಯ ಕಾರ್ಮಿಕ ಕಾನೂನುಗಳನ್ನು ಸಮ್ಮಿಳಿತಗೊಳಿಸಿ ಕೇವಲ ಒಂದೇ ಒಂದು ಕಾರ್ಮಿಕ ನೀತಿ ಸಂಹಿತೆ ರೂಪಿಸಲು ಅನುಕೂಲವಾಗುವ ಕರಡು ಮಸೂದೆಗೆ ಸಂಪುಟ ಸಮ್ಮತಿಸಿದೆ. ಹೊಸದಾಗಿ ರೂಪುಗೊಳ್ಳಲಿರುವ ಏಕಸ್ವರೂಪದ ಕಾರ್ಮಿಕ ನೀತಿಯು, 10 ನೌಕರರು ಹಾಗೂ ಅದಕ್ಕಿಂತ ಹೆಚ್ಚಾಗಿರುವ ಎಲ್ಲ ಸಂಸ್ಥೆಗಳಿಗೂ ಅನ್ವಯವಾಗಲಿದೆ. ವಿವಿಧ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರ ಸುರಕ್ಷೆ, ಆರೋಗ್ಯ ಹಾಗೂ ಉತ್ತಮ ಸೇವಾ ವಾತಾವರಣ ಕಲ್ಪಿಸುವ 2019ರ ಮಸೂದೆಯ ಆಧಾರದ ಮೇಲೆ ಹೊಸ ಕಾರ್ಮಿಕ ನೀತಿ ರೂಪಿಸಲಾಗಿದೆ.
ಜಲವಿವಾದ ಬಗೆಹರಿಸಲು ಏಕೈಕ ನ್ಯಾಯಾಧಿಕರಣಎಲ್ಲ ಅಂತಾರಾಜ್ಯ ಜಲ ವಿವಾದಗಳನ್ನು ಬಗೆಹರಿಸಲು ಏಕೈಕ ಶಾಶ್ವತ ನ್ಯಾಯಾಧಿಕರಣ ರಚಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಪ್ರಸ್ತುತ ಇರುವ ಎಲ್ಲ 9 ನ್ಯಾಯಾಧಿಕರಣಗಳನ್ನು ವಿಲೀನಗೊಳಿಸಿ, ಈ ಏಕೈಕ ನ್ಯಾಯಾಧಿಕರಣದಲ್ಲಿ ಎಲ್ಲ ಅಂತಾರಾಜ್ಯ ಜಲವಿವಾದಗಳನ್ನು ತ್ವರಿತಗತಿ ಯಲ್ಲಿ ಪರಿಹರಿಸುವ ಉದ್ದೇಶವನ್ನು ಹೊಂದಲಾಗಿದೆ. ಈ ನ್ಯಾಯಾಧಿ ಕರಣ ಅಸ್ತಿತ್ವಕ್ಕೆ ಬಂದರೆ ಕರ್ನಾಟಕದ ಕಾವೇರಿ, ಮಹದಾಯಿ ಸಹಿತ ಎಲ್ಲ ನದಿ ನೀರು ವಿವಾದಗಳೂ ಇಲ್ಲೇ ಪರಿಹಾರ ಕಾಣಲಿವೆ. ಈಗ 9 ನ್ಯಾಯಾಧಿಕರಣಗಳಿದ್ದು, ಇವುಗಳು ವಿವಾದ ಪರಿಹರಿಸಲು 17ರಿಂದ 27 ವರ್ಷಗಳನ್ನು ತೆಗೆದುಕೊಂಡಿವೆ. ಆದರೆ, ಹೊಸ ನ್ಯಾಯಾಧಿಕರಣವು ಕಡ್ಡಾಯವಾಗಿ 2 ವರ್ಷಗಳೊಳಗೆ ವಿವಾದ ಬಗೆಹರಿಸಬೇಕಾಗುತ್ತದೆ. ಜತೆಗೆ, ಇಲ್ಲಿ ನೀಡಲಾಗುವ ಆದೇಶವು ಅಧಿಸೂಚನೆಯಾಗಿ ಪರಿವರ್ತಿತ ಗೊಳ್ಳಲಿದೆ ಎಂದು ಸಚಿವ ಪ್ರಕಾಶ್ ಜಾಬ್ಡೇಕರ್ ಹೇಳಿದ್ದಾರೆ. ಆರ್ಥಿಕ ಅಕ್ರಮಕ್ಕೆ ಬೀಳಲಿದೆ ಲಗಾಮು
ಆರ್ಥಿಕ ಕ್ಷೇತ್ರದಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳನ್ನು ರದ್ದುಗೊಳಿಸುವಂಥ ಮತ್ತೂಂದು ಮಹತ್ವದ ಮಸೂದೆಗೆ ಸಂಪುಟ ಅಸ್ತು ನೀಡಿದೆ. ಹೊಸ ಮಸೂದೆಯು 2019ರ ಅನಿಯಂತ್ರಿತ ಠೇವಣಿ ಯೋಜನೆ ಗಳ ನಿಗ್ರಹ ಅಧ್ಯಾದೇಶದ ಬದಲಿಗೆ ಕಾನೂನಾಗಿ ಜಾರಿಗೊಳ್ಳಲಿದೆ. ಸಂಪುಟ ಸಭೆಯ ಅನಂತರ ಈ ವಿಚಾರ ತಿಳಿಸಿದ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್, ದೇಶದಲ್ಲಿ ನಡೆಯುವ ಕಾನೂನು ಬಾಹಿರ ಹಣ ವರ್ಗಾವಣೆ ತಡೆಯಲು ಹೊಸ ಮಸೂದೆ ನೆರವಾಗಲಿದೆ ಎಂದಿದ್ದಾರೆ.
•ಚೈಲ್ಡ್ ಪೋರ್ನೋಗ್ರಫಿಗೆ ದಂಡ, ಜೈಲು ವಾಸ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ •ಕಾನೂನು ಬಾಹಿರ ಹಣಕಾಸು ಹೂಡಿಕೆಗಳ ನಿಯಂತ್ರಣಕ್ಕೆ ಹೆಜ್ಜೆ
•ರೈಲ್ವೆ ಸುರಕ್ಷಾ ಪಡೆಗೆ ಗ್ರೂಪ್ ‘ಎ’ ಸೇವಾ ಸೌಲಭ್ಯ ನೀಡಲು ಸಮ್ಮತಿ
•ರೈಲ್ವೆ ಸುರಕ್ಷಾ ಪಡೆಗೆ ಗ್ರೂಪ್ ‘ಎ’ ಸೇವಾ ಸೌಲಭ್ಯ ನೀಡಲು ಸಮ್ಮತಿ