Advertisement

ಜ.31ರಿಂದ ಕೇಂದ್ರ ಬಜೆಟ್ ಅಧಿವೇಶನ…; ಫೆ.1ರಂದು ಬಜೆಟ್‌ ಮಂಡನೆ

01:49 AM Jan 03, 2023 | Team Udayavani |

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ. 1ರಂದು ಕೇಂದ್ರ ಬಜೆಟ್‌ ಮಂಡಿಸಲಿದ್ದು, ಬಜೆಟ್‌ ಅಧಿವೇಶನದ ಮೊದಲ ಭಾಗದ ಕಲಾಪಗಳು ಫೆ. 10ರ ವರೆಗೆ ನಡೆಯಲಿವೆ.

Advertisement

2023ರ ಬಜೆಟ್‌ ಅಧಿವೇಶನ ಜ. 31ರಂದು ಆರಂಭವಾಗುವ ಸಾಧ್ಯತೆಗಳಿದ್ದು, ಎ. 6ರಂದು ಮುಕ್ತಾಯಗೊಳ್ಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಜೆಟ್‌ ಅಧಿವೇಶನದ ಮೊದಲ ದಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು ಎಂದೂ ಈ ಮೂಲಗಳು ಹೇಳಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತನ್ನು ಉದ್ದೇಶಿಸಿ ತಮ್ಮ ಚೊಚ್ಚಲ ಭಾಷಣ ಮಾಡಲಿದ್ದಾರೆ. ಬಜೆಟ್‌ ಅಧಿವೇಶನದ ದ್ವಿತೀಯ ಭಾಗ ಮಾರ್ಚ್‌ 6ರಂದು ಆರಂಭವಾಗಿ ಎ. 6ರಂದು ಮುಕ್ತಾಯ ಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next