ನವದೆಹಲಿ: ಫೆ.1ರ ಬಜೆಟ್ ದಿನದಂದು ಸಂಸತ್ ಸದಸ್ಯರಿಗೆ ಫೈವ್‌ಸ್ಟಾರ್ ಹೋಟೆಲ್‌ನಿಂದ ಭಕ್ಷ್ಯ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.
ಫೈವ್‌ಸ್ಟಾರ್ ಅಶೋಕ್ ಹೋಟೆಲ್‌ನ ನಿಪುಣ ಬಾಣಸಿಗರು ಸಂಸದರಿಗೆ ರುಚಿರುಚಿಯ ಖಾದ್ಯ ಸಿದ್ಧಪಡಿಸಲಿದ್ದಾರೆ. ಅಂದು ಯಾವ ಖಾದ್ಯ ಸ್ವೀಕರಿಸಿದರೂ, ಅದಕ್ಕೆ ಸರ್ಕಾರದಿಂದ ಸಬ್ಸಿಡಿ ಸೌಲಭ್ಯವಿರಲಿದೆ.
ಕೇವಲ 100 ರೂ.ಗೆ ನೀಡಲಾಗುವ ಊಟದಲ್ಲಿ ಕಡಾಯಿ ಪನೀರ್, ಮಿಕ್ಸ್ ವೆಜ್ ಡ್ರೈ, ಭಜಿ, ದಾಲ್ ಸುಲ್ತಾನಿ, ಪಲಾವ್, ಚಪಾತಿ, ಸಲಾಡ್, ರಾಯಿತ, ಹಪ್ಪಳ, ಕಾಲಾ ಜಾಮೂನ್ ಇರಲಿದೆ. ಕೇವಲ 50 ರೂ.ಗೆ ಮಿಕ್ಸ್ ವೆಜ್ ಡ್ರೈ, ದಾಲ್ ಸುಲ್ತಾನಿ, ಜೀರಾ ಪಲಾವ್, ಚಪಾತಿ, ಗ್ರೀನ್ ಸಲಾಡ್, ರಾಯಿತ, ಹಪ್ಪಳವನ್ನೊಳಗೊಂಡ ಮಿನಿ ಥಾಲಿ ನೀಡಲಾಗುತ್ತದೆ. 25 ರೂ.ಗೆ ಉಪ್ಪಿಟ್ಟನ್ನೊಳಗೊಂಡ ಸ್ನ್ಯಾಕ್ಸ್, ಪನೀರ್ ಪಕೋಡಕ್ಕೆ 50 ರೂ., ಸಮೋಸಾ- ಕಚೋರಿಗೆ 10 ರೂ. ನಿಗದಿಪಡಿಸಲಾಗಿದೆ.
ಇದನ್ನೂ ಓದಿ:ಮತ್ತೆ ಚರ್ಚೆ ಹುಟ್ಟುಹಾಕಿದ ನ್ಯಾಯಾಧೀಶೆ ಗಣೇದಿವಾಲಾ ತೀರ್ಪು
ಸಂಸದರಿಗೆ ಸಾಮಾನ್ಯವಾಗಿ ಉತ್ತರ ರೈಲ್ವೆ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸುತ್ತದೆ. ಆದರೆ, ಬಜೆಟ್ ದಿನದಂದು ಮಾತ್ರ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ಈ ಹೊಣೆ ನಿರ್ವಹಿಸಲಿದೆ.