Advertisement

ಕೇಂದ್ರ ಬಜೆಟ್‌: ಸಚಿವರು, ಸಂಸದರ ಪ್ರತಿಕ್ರಿಯೆ

12:01 PM Feb 02, 2018 | Team Udayavani |

2018-19ರ ಆಯ ವ್ಯಯದ ಬಗ್ಗೆ ಕರಾವಳಿ ಭಾಗದ ಸಚಿವರು, ಸಂಸದರ ಅಭಿಪ್ರಾಯಗಳು
ನೀರಸ ಬಜೆಟ್‌ 

ಇದು ನೀರಸ ಬಜೆಟ್‌. ಪ್ರಧಾನಿ ನರೇಂದ್ರ ಮೋದಿ ಅವರ “ಮನ್‌ ಕಿ ಬಾತ್‌’ ಸರಣಿಯ ಇನ್ನೊಂದು ಭಾಷಣ ಇದಾಗಿದೆ. ಬಜೆಟ್‌ ಪ್ರಸ್ತಾವ ಗಳಲ್ಲಿ ಯಾವುದೂ ಪ್ರಾಯೋ ಗಿಕ ವಲ್ಲ; ಯಾವುದೇ ಯೋಜನೆಯ ಅನುಷ್ಠಾನದ ಖಾತರಿ ಇಲ್ಲ. ಚುನಾವಣಾ ಹಿನ್ನೆಲೆಯ ಬಜೆಟ್‌ ಇದಾಗಿದೆ. 
– ರಮಾನಾಥ ರೈ, ಸಚಿವ 

Advertisement

ಜನಪರವಲ್ಲದ ಬಜೆಟ್‌ 
ಇದು ಸೂಟುಬೂಟು ಸರಕಾರದ ಜನಪರ ವಲ್ಲದ ಹಾಗೂ ಬಂಡವಾಳಶಾಹಿಗಳಿಗೆ ಪ್ರಯೋ ಜನ ವಾಗುವ ಬಜೆಟ್‌. ಜನ ಸಾಮಾನ್ಯರ ನಿತ್ಯೋಪ ಯೋಗಿ ವಸ್ತುಗಳ ಬೆಲೆ ಏರಿಕೆಗೆ ಪೂರಕವಾದ ಬಜೆಟ್‌ ಇದಾಗಿದೆ. ಬಡವಾಳ ಶಾಹಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರಕಾರದ ಜನವಿರೋಧಿ ಮುಖವಾಡ ಕಳಚಿ ಬಿದ್ದಿದೆ. 
ಯು.ಟಿ. ಖಾದರ್‌, ಸಚಿವ

ರೈತಪರ ಬಜೆಟ್‌ 
ಕೇಂದ್ರ ಸರಕಾರ ರೈತರ ಪರವಾದ ಬಜೆಟ್‌ ಮಂಡಿಸಿದೆ. ಕೃಷಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿರುವ ಬಜೆಟ್‌. ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಅನುಕೂಲತೆ ಕಲ್ಪಿಸಿದೆ. ರೈತರ ಕಿಸಾನ್‌ ಕಾರ್ಡನ್ನು ಮೀನು ಗಾರ ರಿಗೂ ವಿಸ್ತರಿಸಿದೆ. ರೈತ ಮಾರುಕಟ್ಟೆ ಸರಳ ಸಂಪರ್ಕ ಯೋಜನೆ, ಕೃಷಿ ಉತ್ಪನ್ನ ರಫ್ತು ಮೇಲಿನ ನಿರ್ಬಂಧ ತೆರವು, ಕೃಷಿಗಾಗಿಯೇ ಒಂದು ಲಕ್ಷ ಕೋ.ರೂ. ಸಾಲ ನೀಡುವ ಗುರಿ ರೈತರ ಅಭಿವೃದ್ಧಿಗೆ ಪೂರಕ. 10 ಕೋಟಿ ಬಡ ಕುಟುಂಬಗಳಿಗೆ 5 ಲಕÒ‌ ರೂ. ವರೆಗೆ ಆರೋಗ್ಯ ವಿಮೆ ಐತಿಹಾಸಿಕ ಕ್ರಮ. ಆಮದು ಗೇರುಬೀಜ ಮೇಲಿನ ಕಸ್ಟಮ್ಸ್‌ ಸುಂಕ ಶೇ. 5ರಿಂದ ಶೇ. 2.5ಕ್ಕೆ ಇಳಿಕೆ, ಪ್ರತಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ವೈದ್ಯಕೀಯ ಕಾಲೇಜು, ಮೀನುಗಾರಿಕೆಗೆ 10,000 ಕೋ.ರೂ. ಅನುದಾನ, 24 ಹೊಸ ಮೆಡಿಕಲ್‌ ಕಾಲೇಜುಗಳ ಘೋಷಣೆ, 8 ಕೋಟಿ ಬಡ ಮಹಿಳೆಯರಿಗೆ ಉಚಿತ ಗ್ಯಾಸ್‌ ಸೌಲಭ್ಯ, ಬೆಂಗಳೂರಿಗೆ 160 ಕಿ.ಮೀ. ಉಪನಗರ ರೈಲ್ವೇ ಸಂಪರ್ಕ ಯೋಜನೆ ಸ್ವಾಗತಾರ್ಹ.
ನಳಿನ್‌ ಕುಮಾರ್‌ ಕಟೀಲು, ದ.ಕ. ಸಂಸದ

ಆಶಾದಾಯಕ ಬಜೆಟ್‌
ಪ್ರಧಾನ ಮಂತ್ರಿ ಸ್ವಾಸ್ಥ é ವಿಮಾ ಯೋಜನೆಯ ಮೊತ್ತ 30 ಸಾವಿರ ಇದ್ದುದನ್ನು 5 ಲ.ರೂ.ಗೆ ಏರಿಕೆ ಮಾಡಿರುವುದು ದೇಶದ 10 ಕೋಟಿ ಕುಟುಂಬ, 50 ಕೋಟಿ ಜನರಿಗೆ ವರದಾನವಾಗಿದೆ. ಇದು ಐತಿಹಾಸಿಕ ನಿರ್ಧಾರ. ಬೆಂಗ ಳೂರು ಸುತ್ತಮುತ್ತಲ ಜನರ ಅನುಕೂಲಕ್ಕಾಗಿ ಸಬ್‌ಅರ್ಬನ್‌ ರೈಲಿಗೆ 17 ಸಾವಿರ ಕೋಟಿ ಘೋಷಿಸಲಾಗಿದೆ. ಕೃಷಿ, ಆರೋಗ್ಯ, ಶಿಕ್ಷಣ, ರಕ್ಷಣೆಗೆ ಉತ್ತಮ ಆದ್ಯತೆ ನೀಡ ಲಾಗಿದೆ. ಇದು ಜನಸಾಮಾನ್ಯರ ಆಶಾದಾಯಕ ಬಜೆಟ್‌.
ಶೋಭಾ ಕರಂದ್ಲಾಜೆ, ಉಡುಪಿ ಸಂಸದೆ

ನಿರಾಶಾದಾಯಕ ಬಜೆಟ್‌ 
ಇದು ನಿರಾಶಾದಾಯಕ ಬಜೆಟ್‌. ಉದ್ಯೋಗ ಸೃಷ್ಟಿ ಮತ್ತು ಇತರ ಹಲವಾರು ವಿಷಯಗಳನ್ನು ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ. ಆದರೆ ಎಲ್ಲಿ, ಹೇಗೆಂದು ನಿರ್ದಿಷ್ಟವಾಗಿ ತಿಳಿಸಿಲ್ಲ. ಆದಾಯ ತೆರಿಗೆ ಮಿತಿಯನ್ನು 3 ಲಕ್ಷ ರೂ.ಗಳಿಗೇರಿಸುವ ಬಗ್ಗೆ ಬಹಳಷ್ಟು ನಿರೀಕ್ಷೆ ಇತ್ತು. ಈ ಬಗ್ಗೆ ವಿವಿಧ ವಲಯಗಳಲ್ಲಿ ಚರ್ಚೆ ಕೂಡ ನಡೆದಿತ್ತು. ಆದರೆ ಈ ನಿರೀಕ್ಷೆ ಸುಳ್ಳಾಗಿದೆ. ಆದಾಯ ತೆರಿಗೆ ಮಿತಿಯನ್ನು ಏರಿಸದೆ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಇದು ತೆರಿಗೆದಾರರಿಗೆ ನಿರಾಶೆಯಾಗಿದೆ. 
ಹರೀಶ್‌ ಕುಮಾರ್‌ , ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು

Advertisement

ರೈತರಿಗೆ ಯಾವುದೇ ಕೊಡುಗೆ ನೀಡಿಲ್ಲ
ಕೇಂದ್ರ ಸರಕಾರದ ಈ ಬಜೆಟ್‌ನಲ್ಲಿ ರೈತರಿಗೆ ಏನೇನೂ ಇಲ್ಲ. ಹಾಗಾಗಿ ದೇಶಕ್ಕೆ ಮತ್ತು ರಾಜ್ಯಕ್ಕೆ ಯಾವುದೇ ಕೊಡುಗೆ ಇಲ್ಲವೆಂದೇ ಹೇಳ ಬೇಕಾಗುತ್ತದೆ. ಅಡಿಕೆ ಮತ್ತು ರಬ್ಬರ್‌ ಕೃಷಿಕರ ಸಮಸ್ಯೆ ಗಳ ಕುರಿತಂತೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇ ಗೌಡ ಅವರು ಸಂಸತ್ತಿನಲ್ಲಿ ಹಲವು ಬಾರಿ ಪ್ರಸ್ತಾ ವಿಸಿ ದ್ದರು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವ ಮಾಡಲಾಗಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡು ವವರು ರೈತರ ಬಗ್ಗೆ ಚಕಾರ ಎತ್ತಿಲ್ಲ. 
ಮಹಮದ್‌ ಕುಂಞಿ, ಜೆಡಿಎಸ್‌ ದ.ಕ. ಜಿಲ್ಲಾಧ್ಯಕ್ಷರು

ಉತ್ತಮ ಬಜೆಟ್‌
70 ಲಕ್ಷ ಯುವಕರಿಗೆ ಹೊಸ ಉದ್ಯೋಗ, ಕೃಷಿಗೆ 11 ಲಕ್ಷ ಕೋಟಿ ರೂ., ಹೈನುಗಾರಿಕೆ, ಕೃಷಿ, ಮೀನುಗಾರಿಕೆಗೆ ಉತ್ತೇಜನ, 22 ಸಾವಿರ ಎಪಿಎಂಸಿಗಳ ಗುರುತಿಸುವಿಕೆ 11 ಲಕ್ಷ ಕೋಟಿ ರೂ. ಸಾಲದ ಗುರಿ, 4 ಕೋಟಿ ಜನರಿಗೆ ಉಚಿತ ವಿದ್ಯುತ್‌, 8 ಕೋಟಿ ಜನರಿಗೆ ಉಚಿತ ಎಲ್‌ಪಿಜಿ, ಸ್ಟ್ಯಾಂಪ್‌ ಡ್ನೂಟಿ ಚಾರಿತ್ರಿಕ ಬದಲಾವಣೆ, 5 ಲಕ್ಷದವರೆಗೆ ಉಚಿತ ವೈದ್ಯಕೀಯ ಸವಲತ್ತು, 600 ರೈಲ್ವೇ ನಿಲ್ದಾಣ ಆಧುನೀಕರಣ, ಬೆಂಗಳೂರಿಗೆ ಮೋನೋರೈಲ್‌ ನೀಡಿದೆ.
ಮಟ್ಟಾರು ರತ್ನಾಕರ ಹೆಗ್ಡೆ , ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರು

ಹುಸಿಯಾದ ನಿರೀಕ್ಷೆ
ಜಿಎಸ್‌ಟಿ, ನೋಟ್‌ಬ್ಯಾನ್‌ನಿಂದ ಹತಾಶ ರಾದವರ ನಿರೀಕ್ಷೆ ಹುಸಿಯಾಗಿದೆ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಪ್ರಸ್ತಾವವೇ ಮಾಡಿಲ್ಲ. ಅವರಿಗೂ ಏನೂ ಲಾಭವಿಲ್ಲ. ಹಾಗಾಗಿ ಇದೊಂದು ಅತ್ಯಂತ ನಿರಾಶಾದಾಯಕ ಬಜೆಟ್‌ ಆಗಿದೆ.
ಜನಾರ್ದನ ತೋನ್ಸೆ, ಕಾಂಗ್ರೆಸ್‌ ಉಡುಪಿ ಜಿಲ್ಲಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next