Advertisement

Interim Budget 2024: ಮಧ್ಯಂತರ ಬಜೆಟ್‌ ಮುಖ್ಯಾಂಶ-2047ರ ವೇಳೆಗೆ ವಿಕಸಿತ ಭಾರತದ ಗುರಿ

01:38 PM Feb 01, 2024 | Team Udayavani |

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024-25ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡನೆ ಆರಂಭಿಸಿದ್ದು, ದೇಶದಲ್ಲಿ ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ ಸೇರಿದಂತೆ ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಘೋಷಣೆಯಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಸಕ್ತ ಸಾಲಿನ ಬಜೆಟ್‌ ಮುಖ್ಯಾಂಶ ಇಲ್ಲಿದೆ.

Advertisement

*25 ಕೋಟಿ ಕುಟುಂಬಗಳನ್ನು ಬಡತನದಿಂದ ಮೇಲೆತ್ತಲಾಗಿದೆ

*11.8 ಕೋಟಿ ರೈತರಿಗೆ ಸಮ್ಮಾನ್‌ ಯೋಜನೆ ತಲುಪಿದೆ.

*ಕ್ರೆಡಿಟ್‌ ಗ್ಯಾರಂಟಿ ಯೋಜನೆಯಿಂದ ಯುವಕರಿಗೆ ಅನುಕೂಲ

*ದೇಶಾದ್ಯಂತ 390 ವಿಶ್ವವಿದ್ಯಾಲಯಗಳನ್ನು ಕೇಂದ್ರ ಆರಂಭಿಸಿದೆ.

Advertisement

*ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆ

*ಮಹಿಳೆಯರಿಗೆ ಮುದ್ರಾ ಯೋಜನೆಯಿಂದ ಲಾಭ.

*43 ಕೋಟಿ ಯುವ ಜನರಿಗೆ ಸಾಲ ನೀಡಲಾಗಿದೆ.

*3 ಸಾವಿರ ಹೊಸ ಐಐಟಿಯನ್ನು ಸ್ಥಾಪಿಸಲಾಗಿದೆ.

*ಬಡವರು, ಮಹಿಳೆಯರು, ರೈತರಿಗೆ ಆದ್ಯತೆ ನೀಡಲಾಗಿದೆ

*ಮುದ್ರಾ ಯೋಜನೆಯಡಿ 43 ಕೋಟಿ ರೂಪಾಯಿ ಸಾಲ ನೀಡಲಾಗಿದೆ.

*ಜನ್‌ ಧನ್‌ ಖಾತೆಗಳಿಗೆ 34 ಕೋಟಿ ರೂಪಾಯಿ ಹಣ ವರ್ಗಾವಣೆ

*ಯುವಕರನ್ನು ಸದೃಢಗೊಳಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ

*ಒನ್‌ ನೇಷನ್‌, ಒನ್‌ ಮಾರ್ಕೆಟ್‌ ಜಾರಿ. ಜಿಎಸ್‌ ಟಿ ಜಾರಿಯಿಂದ ಒಂದು ದೇಶ, ಒಂದು ಮಾರುಕಟ್ಟೆಗೆ ಆದ್ಯತೆ

*ಮಹಿಳೆಯರ ರಕ್ಷಣೆ ದೃಷ್ಟಿಯಿಂದ ತ್ರಿವಳಿ ತಲಾಖ್‌ ರದ್ದು

*2047ರ ವೇಳೆಗೆ ಅಭಿವೃದ್ಧಿ ಭಾರತವಾಗಿ ಬದಲಾವಣೆ

*ಎನ್‌ ಇಪಿ ಮೂಲಕ ಯುವಕರ ಅಭಿವೃದ್ಧಿಗೆ ಒತ್ತು

*ಮುಂದಿನ ಐದು ವರ್ಷದಲ್ಲಿ 2 ಕೋಟಿ ಹೊಸ ಗೃಹ ನಿರ್ಮಾಣ

*ದೇಶದಲ್ಲಿ ಭ್ರಷ್ಟಾಚಾರ ಮಟ್ಟ ಹಾಕಲಾಗಿದೆ

*1 ಕೋಟಿ ಮನೆ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದೆ.

*ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್‌ ಭಾರತ್‌ ಯೋಜನೆ

Advertisement

Udayavani is now on Telegram. Click here to join our channel and stay updated with the latest news.

Next