Advertisement

Union Budget 2023: ಆದಾಯ ತೆರಿಗೆಯಲ್ಲಿ ಭಾರಿ ಬದಲಾವಣೆ; 7 ಲಕ್ಷದವರೆಗೆ ಟ್ಯಾಕ್ಸ್ ಕಟ್ಟಬೇಕಿಲ್ಲ

12:47 PM Feb 01, 2023 | Team Udayavani |

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2023-24ರ ಕೇಂದ್ರ ಆಯವ್ಯಯ ಮಂಡಿಸಿದ್ದು, ಹಲವು ವರ್ಷಗಳ ಬಳಿಕ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಮಾಡಲಾಗಿದೆ.

Advertisement

ಹೊಸ ತೆರಿಗೆ ಪದ್ಧತಿಯಲ್ಲಿ ರೂ 7 ಲಕ್ಷದವರೆಗಿನ ಆದಾಯದ ಮೇಲಿನ ರಿಯಾಯಿತಿಯನ್ನು ವಿಸ್ತರಿಸಲಾಗಿದೆ.

2.5 ಲಕ್ಷದಿಂದ ಪ್ರಾರಂಭವಾಗುವ 6 ಆದಾಯ ಸ್ಲ್ಯಾಬ್‌ ಗಳೊಂದಿಗೆ ಹೊಸ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯನ್ನು ನಾನು 2020 ರಲ್ಲಿ ಪರಿಚಯಿಸಿದ್ದೇನೆ. ಸ್ಲ್ಯಾಬ್‌ ಗಳ ಸಂಖ್ಯೆಯನ್ನು 5 ಕ್ಕೆ ಇಳಿಸುವ ಮೂಲಕ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಈ ಆಡಳಿತದಲ್ಲಿ ತೆರಿಗೆ ರಚನೆಯನ್ನು ಬದಲಾಯಿಸುತ್ತೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ:ಧಾರವಾಡದ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ಆದಾಯ ತೆರಿಗೆಯಲ್ಲಿ 0 ರಿಂದ 3 ಲಕ್ಷಗಳು ಆದಾಯಕ್ಕೆ ಶೂನ್ಯ, 3 ರಿಂದ 6 ಲಕ್ಷಗಳಿಗೆ – 5%, 6 ರಿಂದ 9 ಲಕ್ಷಗಳಿಗೆ – 10%, 9 ರಿಂದ 12 ಲಕ್ಷಗಳಿಗೆ – 15%, 12 ರಿಂದ 15 ಲಕ್ಷಗಳಿಗೆ – 20% ಮತ್ತು 15 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದವರಿಗೆ 30% ತೆರಿಗೆ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next